WPL : RCB ‘ಈ ಸಲ ಕಪ್ಪ ನಮ್ದೇ’ ಟ್ರೋಫಿ ಗೆದ್ದು ಟೀಕಾಕಾರರಿಗೆ ಉತ್ತರ ಕೊಡ್ತೇವೆ – ಸ್ಮೃತಿ ಮಂಧಾನ ವಿಶ್ವಾಸ
IPL 15 ಸೀಸನ್ ಗಳು ಕಳೆಯಿತು.. ಇನ್ನೇನು ಮಾರ್ಚ್ 31 ರಿಂದ 16 ನೇ ಸೀಸನ್ ಗ್ರ್ಯಾಂಡ್ ಆಗಿ ಆರಂಭವಾಗಲಿದೆ..
ಆದ್ರೆ ಅದಕ್ಕೂ ಮೊದಲೇ ಮೊಟ್ಟ ಮೊದಲ ಮಹಿಳಾ ಪ್ರೀಮಿಯರ್ ಲೀಗ್ ನಡೆಯಲಿದೆ.. ಮಹಿಳಾ ಪ್ರೀಮಿಯರ್ ಲೀಗ್ ನಲ್ಲೂ ಕೂಡ RCB ಸಖತ್ ಸೌಂಡ್ ಮಾಡ್ತಿದೆ..
ಸ್ಮೃತಿ ಮಂಧಾನಾ ನಾಯಕತ್ವದಲ್ಲಿ RCB ಚೊಚ್ಚಲ ಸೀಸನ್ ನಲ್ಲಿ ಚೊಚ್ಚಲ ಚಾಂಪಿಯನ್ ಟ್ರೋಫಿಗಾಗಿ ಹೋರಾಟ ಮಾಡಲಿದೆ..
ಇತ್ತ RCB ಅಭಿಮಾನಿಗಳು ಮಹಿಳಾ ತಂಡಕ್ಕೂ ಅಷ್ಟೇ ಪ್ರೀತಿ , ಅಭಿಮಾನವನ್ನ ತೋರಿಸುತ್ತಿದ್ದಾರೆ..
15 ಸೀಸನ್ ಗಳಿಂದ IPL ನಲ್ಲಿ RCB ಕಪ್ ಬರ ಎದುರಿಸುತ್ತಿದ್ದು , ಮಹಿಳಾ ತಂಡದಿಂದ ಕಪ್ ಅಭಿಮಾನಿಗಳು ಕಪ್ ಬರ ನೀಗುವ ನಿರೀಕ್ಷೆಯಲ್ಲಿದ್ದಾರೆ..
ಭರವಸೆಯ ಮೂಡಿಸಿರುವ RCB ಮಹಿಳಾ ತಂಡವು ಈ ಬಾರಿ ಕಪ್ ಗೆಲ್ಲುವ ನಿರೀಕ್ಷೆಯಲ್ಲಿದೆ.. ಜೊತೆಗೆ WPL ನ ಮೊಟ್ಟ ಮೊದಲ ಸೀಸನ್ ನ ಚಾಂಪಿಯನ್ ಆಗುವ ತವಕದಲ್ಲಿರುವ ನಾಯಕಿ ಸ್ಮೃತಿ ಮಂಧಾನಾ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಕಪ್ ನಮ್ದೇ ,.,,, ಕಪ್ ಗೆದ್ದೇ ಮನೆಗೆ ಹೋಗುವುದು ಎಂಬ ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ..
ಬೆಂಗಳೂರು ಕಪ್ ಗೆದ್ದಿಲ್ಲ ಎಂಬ ಕಾರಣಕ್ಕೆ ಆರ್ಸಿಬಿ ಅಭಿಮಾನಿಗಳ ಸಂಖ್ಯೆ ಕುಸಿದಿಲ್ಲ. ಬದಲಾಗಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗ್ತಲೇ ಇದೆ, ಜೊತೆಗೆ ಕ್ರೇಜ್ ಕೂಡ ಹೆಚ್ಚುತ್ತಲೇ ಇದೆ.
ಈ ಬಗ್ಗೆ ಮಾತನಾಡಿದ ಸ್ಮೃತಿ ಮಂದಾನ, ಟ್ರೋಫಿ ಗೆಲ್ಲುವುದೇ ನಮ್ಮ ಅಜೆಂಡಾ , ಟ್ರೋಫಿ ಗೆದ್ದು, ಇದುವರೆಗೂ ಕಪ್ ಗೆದ್ದಿಲ್ಲ ಎಂಬ ಟೀಕೆಗಳಿಗೆ ಉತ್ತರ ಕೊಡುತ್ತೇವೆ. ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿಯೇ ಮನೆಗೆ ಮರಳುತ್ತೇವೆ. ಅದಕ್ಕಾಗಿ ಸಾಕಷ್ಟು ಹಾರ್ಡ್ ವರ್ಕ್ ಮಾಡುತ್ತಿದ್ದೇವೆ. ತುಂಬಾ ಅದ್ಭುತ ತಂಡವನ್ನು ಹೊಂದಿದ್ದೇವೆ. ಪ್ರತಿ ಹಂತದಲ್ಲೂ ಪ್ಲಾನ್ ಮಾಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಕಪ್ ಮಿಸ್ ಆಗಲ್ಲ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ..
ತಂಡದ ಸ್ಟ್ರಾಟರ್ಜಿ ವೆರಿ ಸಿಂಪಲ್. ಚೊಚ್ಚಲ ಟೂರ್ನಿಯಲ್ಲೇ ಪ್ರಶಸ್ತಿ ಗೆಲ್ಲುವುದು. ಅದಕ್ಕಾಗಿ ತಂಡದ ಆಟಗಾರ್ತಿಯರು ಸತತ ಪರಿಶ್ರಮ ಹಾಕುತ್ತಿದ್ದಾರೆ. ಬಿಡುವು ಪಡೆಯದೆ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ತಂಡದಲ್ಲಿ ಕೆಲವರ ಬಗ್ಗೆ ನಾನಿನ್ನೂ ತಿಳಿದುಕೊಳ್ಳಬೇಕು. ಕೆಲವರ ಬಗ್ಗೆ ಈಗಾಗಲೇ ತಿಳಿದಿದ್ದೇನೆ ಎಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ತಂಡದ ಕ್ಯಾಪ್ಟನ್ಗಳು ತಂಡಗಳು ಇದ್ದಾರೆ. ನ್ಯೂಜಿಲೆಂಡ್ ತಂಡದ ಸೋಫಿ ಡಿವೈನ್, ಇಂಗ್ಲೆಂಡ್ ತಂಡದ ಹೀದರ್ ನೈಟ್, ಸೌತ್ ಆಫ್ರಿಕಾ ತಂಡ ಡೇನ್ ವ್ಯಾನ್ ನೀಕರ್ಕ್ ನಾಯಕಿಯರಾಗಿ ಅಪಾರ ಅನುಭವ ಹೊಂದಿದ್ದಾರೆ. ಈಗ ನಾನು ನಾಯಕಿಯಾಗಿ ಅವರೊಂದಿಗೂ ಸಾಕಷ್ಟು ಕಲಿಯುವುದಿದೆ. ಏನೇ ಸಮಸ್ಯೆ ಕಂಡು ಬಂದರೂ, ಟೀಮ್ ಮ್ಯಾನೇಜ್ ಮೆಂಟ್ ಜೊತೆಗೆ ಅವರ ಸಲಹೆ ಕೂಡ ಸ್ವೀಕರಿಸುತ್ತೇನೆ. ತಂಡದಲ್ಲಿ ಉತ್ತಮ ಆರೋಗ್ಯಕರ ವಾತವರಣ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಮಾರ್ಚ್ 5 ರಂದು ಮೊದಲ ಪಂದ್ಯದಲ್ಲಿ ಆರ್ ಸಿ ಬಿ ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಸೆಣಸಾಟ ನಡೆಸಲಿದೆ. ಚೊಚ್ಚಲ ಲೀಗ್ ನ ಚೊಚ್ಚಲ ಪಂದ್ಯ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದ್ದು, ಕೋಟ್ಯಂತರ ಆರ್ ಸಿಬಿ ಫ್ಯಾನ್ಸ್ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಹೀಗಿದೆ..
ಸ್ಮೃತಿ ಮಂದಾನ (ನಾಯಕಿ), ಹೀದರ್ ನೈಟ್, ಡೇನ್ ವ್ಯಾನ್ ನೀಕರ್ಕ್, ರೇಣುಕಾ ಸಿಂಗ್ ಠಾಕೂರ್, ರಿಚಾ ಘೋಷ್, ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಎರಿನ್ ಬರ್ನ್ಸ್, ದಿಶಾ ಕಸತ್, ಇಂದ್ರಾಣಿ ರಾಯ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಬನಾ, ಪ್ರೀತಿ ಬೋಸ್, ಕೋಮಲ್ ಜಂಜಾದ್, ಮೇಘನ್ ಶಟ್, ಸಹನಾ ಪವಾರ್.
WPL : RCB ‘This Time cup Namde’ – Smriti Mandhana