Wrestling : ಕುಸ್ತಿ ಫೇಡರೇಶನ್ ವಿರುದ್ಧ ತಾರಾ ಕುಸ್ತಿಪಟುಗಳ ಪ್ರತಿಭಟನೆ
ಅಸಂಬದ್ಧ ನೀತಿ ನಿಯಮಗಳನ್ನು ಅಳವಡಿಸಿ ಕುಸತಿಪಟುಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಅಗ್ರ ಕುಸ್ತಿಪಟುಗಳು ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ದೆಹಲಿಯ ಜಂತರ್ ಮಂತರ್ನಲ್ಲಿ ಕುಸ್ತಿಪಟುಗಳಾದ ಭಜರಂಗ್ ಪುಣಿಯ, ಸಾಕ್ಷಿ ಮಲ್ಲಿಕ್, ವಿನೀಶ್ ಪೊಗಟ್ ಮತ್ತು ಇತರೆ ಕುಸ್ತಿಪಟುಗಳು ಪ್ರತಿಭಟಿಸಿ ಆಕ್ರೋಶ ಹೊರ ಹಾಕಿದ್ದಾರೆ.
ನಮ್ಮ ಪ್ರತಿಭಟನೆ ಫೆಡರೇಶನ್ ವಿರುದ್ದ. ಕುಸ್ತಿಪಟುಗಳ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಇಲ್ಲಿ ರಾಜಕೀಯ ಇದೆ. ಇಲ್ಲಿಗೆ ನಾವು ಯಾವ ರಾಜಕಾರಣಿಗಳನ್ನು ಕರೆದಿಲ್ಲ. ಇದು ಕುಸ್ತಿಪಟುಗಳ ಪ್ರತಿಭಟನೆ ಎಂದಿದ್ದಾರೆ.
ಕುಸ್ತಿಪಟುಗಳಿಗೆ ಸಹಾಯ ಮಾಡುವುದು ಫೆಡರೇಶನ್ ಕೆಲಸ. ಕುಸ್ತಿಪಟುಗಳ ಅಗತ್ಯಗಳಿಗೆ ಸ್ಪಂದಿಸುವುದು ಅದರ ಕೆಲಸ. ಏನಾದರೂ ಸಮಸ್ಯೆ ಇದ್ದರೆ ಅದನ್ನು ಬಗೆಹರಿಸಬೇಕು. ಆದರೆ ಫೆಡರೇಶನ್ ಸಮಸ್ಯೆಯನ್ನು ಸೃಷ್ಟಿಸುತ್ತಿದೆ.
ಹೀಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ನಾವು ಇದರಿಂದ ಹಿಂದೆ ಸರಿಯುವುದಿಲ್ಲ.
ಪ್ರತಿಭಟಿಸುತ್ತಿರಯವ ಬಹುತೇಕ ಕುಸ್ತಿಪಟುಗಳು ಪ್ರತಿಷ್ಠಿತ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಪದಕವಿಜೇತರಾಗಿದ್ದಾರೆ.
Wrestling , boxing fedaration , star boxers protest