ADVERTISEMENT
Friday, August 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

WT20I World Cup : ಭಾರತದ ಪ್ರಶಸ್ತಿ ಕನಸು ಭಗ್ನ 

Namratha Rao by Namratha Rao
February 24, 2023
in Newsbeat, News, Sports, ಕ್ರಿಕೆಟ್
women team india
Share on FacebookShare on TwitterShare on WhatsappShare on Telegram

WT20I World Cup : ಭಾರತದ ಪ್ರಶಸ್ತಿ ಕನಸು ಭಗ್ನ

ಭಾರೀ ನಿರೀಕ್ಷೆ ಮೂಡಿಸಿದ್ದ ಮಳೆಯರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಪ್ರಶಸ್ತಿ ಕನಸು ಭಗ್ನಗೊಂಡಿದ್ದು, ಆಸ್ಟ್ರೇಲಿಯಾ ವಿರುದ್ಧ ನಡೆದ ಸೆಮಿಫೈನಲ್‌ನಲ್ಲಿ 5 ರನ್‌ಗಳ ವಿರೋಚಿತ ಸೋಲನುಭವಿಸುವ ಮೂಲಕ ಟೀಂ ಇಂಡಿಯಾದ ವಿಶ್ವಕಪ್‌ ಪಯಣ ಅಂತ್ಯಗೊಂಡಿತು.

Related posts

ashoka-demands-drought-declaration-farmer-loan-waiver-nagendra-resignation

175 ತಾಲೂಕುಗಳಲ್ಲಿ ಬರಗಾಲ ಘೋಷಣೆ ಮಾಡಿ, ರೈತರ ಸಾಲ ಮನ್ನಾ ಮಾಡಿ, ಹಣ ಬಿಡುಗಡೆ ಬಗ್ಗೆ ನಿಖರವಾಗಿ ತಿಳಿಸಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ

August 27, 2026
allu-arjun-forbes-india-showstoppers-2026-cover

ಫೋರ್ಬ್ಸ್ ಇಂಡಿಯಾ ಮುಖಪುಟದಲ್ಲಿ ʻಪ್ಯಾನ್-ಇಂಡಿಯಾ ಸೂಪರ್‌ಸ್ಟಾರ್‌ʼ ಅಲ್ಲು ಅರ್ಜುನ್ ಮಿಂಚಿಂಗ್

August 27, 2026

ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ಗುರುವಾರ ಸಂಜೆ ನಡೆದ ಸಮೀಸ್‌ ಕದನದಲ್ಲಿ ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 172 ರನ್ ಕಲೆಹಾಕಿತು. ಈ ಟಾರ್ಗೆಟ್‌ ಚೇಸ್‌ ಮಾಡಿದ ಭಾರತ 20 ಓವರ್‌ಗಳಲ್ಲಿ 167/8 ರನ್‌ಗಳಿಗೆ ತನ್ನ ಹೋರಾಟ ಅಂತ್ಯಗೊಳಿಸಿತು. ಈ ಸೋಲಿನೊಂದಿಗೆ ಟೀಮ್‌ ಇಂಡಿಯಾದ ಪ್ರಶಸ್ತಿ ಗೆಲ್ಲುವ ಕನಸು ಸಹ ಭಗ್ನಗೊಂಡಿತು.

ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ ಆರಂಭಿಕ ಬ್ಯಾಟರ್‌ ಬೆತ್‌ ಮೋನಿ(54), ನಾಯಕಿ ಲನ್ನಿಂಗ್‌(49*) ಹಾಗೂ ಗ್ರ್ಯಾಂಡರ್‌(31) ಅವರ ಉತ್ತಮ ಬ್ಯಾಟಿಂಗ್‌ ನೆರವಿನಿಂದ 20 ಓವರ್‌ಗಳಲ್ಲಿ 172/4 ರನ್‌ಗಳಿಸಿತು. ಭಾರತದ ಪರ ಶಿಖಾ ಪಾಂಡೆ 2, ದೀಪ್ತಿ ಶರ್ಮ ಮತ್ತು ರಾಧಾ ಯಾದವ್‌ ತಲಾ 1 ವಿಕೆಟ್‌ ಪಡೆದರು.

ಆಸೀಸ್‌ ನೀಡಿದ 173 ರನ್‌ಗಳ ಟಾರ್ಗೆಟ್‌ ಬೆನ್ನತ್ತಿದ ಭಾರತ ಉತ್ತಮ ಆರಂಭ ಪಡೆಯಲಿಲ್ಲ. ಅಗ್ರ ಕ್ರಮಾಂಕದಲ್ಲಿ ಕಣಕ್ಕಿಳಿದ ಶಿಫಾಲಿ ವರ್ಮ(9), ಸ್ಮೃತಿ ಮಂದಾನ(2) ಹಾಗೂ ಯಾಸ್ತಿಕಾ ಭಾಟಿಯಾ(4) ಬ್ಯಾಟಿಂಗ್‌ ವೈಫಲ್ಯಕ್ಕೆ ಸಿಲುಕಿದರು. ಪರಿಣಾಮ ಭಾರತ 28 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಒಂದಾದ ಜಮೈಮಾ ರೋಡ್ರಿಗಸ್‌(43) ಹಾಗೂ ನಾಯಕಿ ಹರ್ಮನ್‌ಪ್ರೀತ್‌ ಕೌರ್‌(52) ತಂಡಕ್ಕೆ ಚೇತರಿಕೆ ನೀಡಿದರು.

ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದ ಈ ಜೋಡಿ 4ನೇ ವಿಕೆಟ್‌ಗೆ 69 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ಆಸೀಸ್‌ ಬೌಲಿಂಗ್‌ ದಾಳಿಗೆ ದಿಟ್ಟ ಉತ್ತರ ನೀಡಿದ ನಾಯಕಿ ಹರ್ಮನ್‌ಪ್ರೀತ್‌, ಆಕರ್ಷಕ ಅರ್ಧಶತಕ ಬಾರಿಸಿದರು. ಆದರೆ ರನ್‌ಗಳಿಸುವ ಭರದಲ್ಲಿ ರನೌಟ್‌ ಬಲೆಗೆ ಬಿದ್ದ ಹರ್ಮನ್‌ಪ್ರೀತ್‌ ನಿರಾಸೆ ಮೂಡಿಸಿದರು. ನಾಯಕಿ ಔಟಾದ ನಂತರದಲ್ಲಿ ಕಣಕ್ಕಿಳಿದ ಯಾವುದೇ ಬ್ಯಾಟರ್‌ಗಳು ಜವಾಬ್ದಾರಿಯ ಆಟವಾಡುವಲ್ಲಿ ವಿಫಲವಾಗಿ ಪೆವಿಲಿಯನ್‌ ಸೇರಿದರು. ಹೀಗಾಗಿ ಭಾರತ 20 ಓವರ್‌ಗಳಲ್ಲಿ 167 ರನ್‌ ಕಲೆಹಾಕಲಷ್ಟೇ ಶಕ್ತವಾಯಿತು.

ಆಸ್ಟ್ರೇಲಿಯಾ ಪರ ಆಶ್ಲೇಗಾ ಗ್ರ್ಯಾಂಡರ್‌ ಹಾಗೂ ಬ್ರೌನ್‌ ತಲಾ 2 ವಿಕೆಟ್‌ ಪಡೆದರೆ. ಮೆಗನ್‌ ಸ್ಕೌಟ್‌ ಹಾಗೂ ಜೊನಸೆನ್‌ ತಲಾ 1 ವಿಕೆಟ್‌ ಪಡೆದರು. ಆಸೀಸ್‌ ಪರ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಶ್ಲೇಗಾ ಗ್ರ್ಯಾಂಡರ್‌ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

WT20I World Cup india lost in semifinals

Tags: WT20I World Cup
ShareTweetSendShare
Join us on:

Related Posts

ashoka-demands-drought-declaration-farmer-loan-waiver-nagendra-resignation

175 ತಾಲೂಕುಗಳಲ್ಲಿ ಬರಗಾಲ ಘೋಷಣೆ ಮಾಡಿ, ರೈತರ ಸಾಲ ಮನ್ನಾ ಮಾಡಿ, ಹಣ ಬಿಡುಗಡೆ ಬಗ್ಗೆ ನಿಖರವಾಗಿ ತಿಳಿಸಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ

by admin
August 27, 2026
0

ಸಚಿವ ನಾಗೇಂದ್ರ ರಾಜೀನಾಮೆ ನೀಡುವುದು ಖಚಿತ, ನಮ್ಮ ಹೋರಾಟಕ್ಕೆ ಬೆಲೆ ಸಿಗಲಿದೆ ಬೆಂಗಳೂರು,  ರಾಜ್ಯ ಸರ್ಕಾರ ಕಾಟಾಚಾರಕ್ಕೆ ಬರಗಾಲ ಘೋಷಣೆ ಮಾಡಿದೆ. ಆದರೆ 175 ತಾಲೂಕುಗಳಲ್ಲಿ ಬರ...

allu-arjun-forbes-india-showstoppers-2026-cover

ಫೋರ್ಬ್ಸ್ ಇಂಡಿಯಾ ಮುಖಪುಟದಲ್ಲಿ ʻಪ್ಯಾನ್-ಇಂಡಿಯಾ ಸೂಪರ್‌ಸ್ಟಾರ್‌ʼ ಅಲ್ಲು ಅರ್ಜುನ್ ಮಿಂಚಿಂಗ್

by admin
August 27, 2026
0

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ, 'ಐಕಾನ್ ಸ್ಟಾರ್' ಅಲ್ಲು ಅರ್ಜುನ್ ಅವರು ಫೋರ್ಬ್ಸ್ ಇಂಡಿಯಾದ ಪ್ರತಿಷ್ಠಿತ 'ಶೋಸ್ಟಾಪರ್ಸ್ 2026' ಆವೃತ್ತಿಯ ಕವರ್ ಸ್ಟಾರ್ ಆಗಿ ಸ್ಥಾನ ಪಡೆದಿದ್ದಾರೆ....

chikkanna-lakshmiputra-movie-release-date-november-27

ಚಿಕ್ಕಣ್ಣ ನಟನೆಯ ‘ಲಕ್ಷ್ಮೀಪುತ್ರ’ ಚಿತ್ರದ ಬಿಡುಗಡೆ ದಿನಾಂಕ ಪ್ರಕಟ: ನವೆಂಬರ್ 27ಕ್ಕೆ ತೆರೆಗೆ

by admin
August 27, 2026
0

ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಉಪಾಧ್ಯಕ್ಷ’ ಚಿತ್ರದ ಅಭೂತಪೂರ್ವ ಯಶಸ್ಸಿನ ಬಳಿಕ, ಇದೀಗ ಅವರು ನಾಯಕನಾಗಿ ನಟಿಸಿರುವ ಎರಡನೇ ಚಿತ್ರ...

andavapura-atma-scheme-krishi-sakhi-workshop-darshan-puttannaiah

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾರ್ಗದರ್ಶನ: ಪಾಂಡವಪುರದಲ್ಲಿ ಕೃಷಿ ಪರಿಣತರಿಂದ ತರಬೇತಿ

by admin
August 27, 2026
0

ಮಂಡ್ಯ: ಪಾಂಡವಪುರ ತಾಲ್ಲೂಕಿನ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ (ಕೃಷಿ ಸಖಿಯರು) ಒಟ್ಟು 120 ಮಂದಿಗೆ ‘ಆತ್ಮ’ ಯೋಜನೆಯಡಿ ವಿಶೇಷ ಕಾರ್ಯಾಗಾರ...

dudda-mega-free-health-camp-darshan-puttannaiah

ದುದ್ದದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

by admin
August 27, 2026
0

ಮಂಡ್ಯ: ಜಿಲ್ಲಾಡಳಿತ, ತಾಲೂಕು ಆಡಳಿತ, ತಾಲೂಕು ಪಂಚಾಯತ್, ಕುಟುಂಬ ಕಲ್ಯಾಣ ಇಲಾಖೆ, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್), ಕಿದ್ವಾಯಿ ಸಂಸ್ಥೆ (ಬೆಂಗಳೂರು), ಭಾರತೀಯ ರೆಡ್ ಕ್ರಾಸ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram