ಚೀನಾದಿಂದ ಮತ್ತೊಂದು ಬಾಂಬ್.. ಆ ವೈರಸ್ ತಗುಲಿದ ಮೂವರಲ್ಲಿ ಒಬ್ಬರು ಸಾವು..!!
ಹೆಮ್ಮಾರಿ ಕೊರೊನಾ ಸೋಂಕು, ಡೆಲ್ಪಾ ಪ್ಲಸ್, ಒಮಿಕ್ರಾನ್ ಸೋಂಕಿನಿಂದ ನಲುಗಿ ಕೊಂಚ ನಿಟ್ಟುಸಿರು ಬಿಡುವಷ್ಟರಲ್ಲಿಯೇ ಚೀನಾ ಮತ್ತೊಂದು ಬಾಂಬ್ ಸಿಡಿಸಿದೆ. Wuhan-scientists-warn-neocov saaksha tv
ಕೊರೊನಾ ತವರೂರು ವೂಹಾನ್ ಲ್ಯಾಬ್ ವಿಜ್ಞಾನಿಗಳು ಹೊಸ ಮಾದರಿಯ ಕೊರೊನಾ ವೈರಸ್ ʻನಿಯೋಕೋವ್ʼ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಹೊಸ ಮಾದರಿಯ ಕೊರೊನಾ ವೈರಸ್ ನಿಯೋಕವ್ ಹಲವು ಪ್ರಮಾದಗಳಿಗೆ ಕಾರಣವಾಗಬಹುದು ಎಂದು ವಾರ್ನಿಂಗ್ ಬೆಲ್ ಬಾರಿಸಿದ್ದಾರೆ.
ಇದು ಅತ್ಯಂತ ವೇಗವಾಗಿ ಹರಡುತ್ತದೆ ಎಂದು, ಮರಣದ ಪ್ರಮಾಣವೂ ಹೆಚ್ಚೆಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದರೆ.
ಈ ವೈರಸ್ ತಗುಲಿದ ಪ್ರತಿ ಮೂವರಲ್ಲಿ ಒಬ್ಬರು ಕೊನೆಯುಸಿರೆಳೆಯುತ್ತಿದ್ದಾರೆ ಎಂದು ವೂಹಾನ್ ಲ್ಯಾಬ್ ನ ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಇದು ಹೀಗಿದ್ದರೇ ನಿಯೋಕೋವ್ ವೈರಸ್ ಹೊಸದೇನಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. 2012 – 15 ಪಶ್ಷಿಮಾಶಿಯಾದಲ್ಲಿ ಕಾಣಿಸಿಕೊಂಡ ಮೆರ್ಸಿಕೋವ್ ಗೂ ನಿಯೋಕೋವ್ ಗೂ ಸಂಬಂಧ ಇದೆ ಎಂದಿದ್ದಾರೆ.
ನಿಯೋಕೋವ್ ವೈರಸ್ ಅನ್ನು ಮೊದಲು ದಕ್ಷಿಣ ಆಫ್ರಿಕಾದಲ್ಲಿ ಬಾವುಲಿಗಳಲ್ಲಿ ಪತ್ತೆ ಮಾಡಲಾಗಿತ್ತು. ಪ್ರಸ್ತುವ ಈ ಸೋಂಕು ಪ್ರಾಣಿಗಳಿಂದ ಪ್ರಾಣಿಗಳಿಗೆ ಮಾತ್ರ ಹರಡುತ್ತಿದೆ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.
ಆದ್ರೆ ಇದರಲ್ಲಿ ಒಂದು ಮ್ಯೂಟೆಷನ್ ಕಾರಣದಿಂದಾಗಿ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಅಪಾಯವಿದೆ ಎಂದು ವೂಹಾನ್ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
SARSCO-2 ನಷ್ಟು ವೇಗವಾಗಿ ಮನುಷ್ಯರಿಗೆ ಸೋಂಕು ತಗಲುವ ಅಪಾಯವಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್ನಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಫಿಸಿಕ್ಸ್ ಸಹಯೋಗದೊಂದಿಗೆ ವುಹಾನ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನವನ್ನು ಬಯೋ ಆರ್ಕಿಯೊದಲ್ಲಿ ಪ್ರಕಟಿಸಲಾಗಿದೆ.