ಇಂದು ವರ್ಲ್ಡ್ ವೈಡ್ ವೆಬ್ ಡೇ
www ಅಕ್ಷರಗಳನ್ನು ನೆನೆಯುವ ದಿನ
1989 ರಲ್ಲಿ ಬ್ರಿಟಿಷ್ ವಿಜ್ಞಾನಿ ಕಂಡುಹಿದ www
ವರ್ಲ್ಡ್ ವೈಡ್ ವೆಬ್ ಕಂಡು ಹಿಡಿದವರು ಟಿಮ್ ಬರ್ನರ್ಸ್ ಲೀ
ಪ್ರತಿ ವರ್ಷ ಆಗಸ್ಟ್ 1 ರಂದು www ಡೇ ಆಚರಣೆ
ಇಂದು ಆಗಸ್ಟ್ 1… ವರ್ಲ್ಡ್ ವೈಡ್ ವೆಬ್ ಡೇ… ಪ್ರತಿ ವರ್ಷ ಗಸ್ಟ್ 1 ರಂದು ವರ್ಲ್ಡ್ ವೈಡ್ ವೆಬ್ ದಿನವನ್ನಾಗಿ ಆಚರಿಸಲಾಗುತ್ತದೆ.
ಇಂದು ಜಗತ್ತು ಇಂಟರ್ ನೆಟ್ ಮಯವಾಗಿದೆ ಎಂದ್ರೂ ತಪ್ಪಾಗೋದಿಲ್ಲ.. ಆದ್ರೆ ಗೂಗಲ್ ನಲ್ಲಿ ಏನೇ ಸರ್ಚ್ ಮಾಡಬೇಕಂದ್ರೂ WWW ಬಳಸಲಾಗುತ್ತದೆ.. ಇದೇ www ಅಕ್ಷರಗಳನ್ನು ನೆನೆಯುವ ದಿನ.
1989 ರಲ್ಲಿ ಬ್ರಿಟಿಷ್ ವಿಜ್ಞಾನಿ ಟಿಮ್ ಬರ್ನರ್ಸ್ ಲೀ ಅವರು CERN ನಲ್ಲಿ ಕಾರ್ಯನಿರ್ವಹಿಸುವ ವೇಳೆ ವರ್ಲ್ಡ್ ವೈಡ್ ವೆಬ್ ಅನ್ನು ಕಂಡುಹಿಡಿದರು. ವರ್ಲ್ಡ್ ವೈಡ್ ವೆಬ್ ನ ಪ್ರಾಥಮಿಕ ಉದ್ದೇಶ ಪ್ರಪಂಚದಾದ್ಯಂತದ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳ ನಡುವೆ ಡಾಕ್ಯುಮೆಂಟ್‌ಗಳು ಮತ್ತು ಮಾಹಿತಿಯನ್ನು ಸ್ವಯಂಚಾಲಿತವಾಗಿ ಶೇರ್ ಮಾಡುವುದಾಗಿದೆ..