ADVERTISEMENT
Monday, October 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ನಿರ್ಭಯಾ ಹಂತಕರಿಗೆ ಶಿಕ್ಷೆ ಕೊಡಿಸಿದ ವಕೀಲೆ ಬಗ್ಗೆ ನಿಮಗೆಷ್ಟು ಗೊತ್ತು?

admin by admin
March 20, 2020
in International, Newsbeat, Samagra karnataka
Share on FacebookShare on TwitterShare on WhatsappShare on Telegram

ಇಂದು ನಿರ್ಭಯಾ ಹಂತಕರಿಗೆ ಗಲ್ಲು ಶಿಕ್ಷೆಯಾಗಿದೆ. ಈ ಕ್ಷಣಕ್ಕಾಗಿ ಕೋಟ್ಯಾಂತರ ಭಾರತೀಯರು ಜಾತಕ ಪಕ್ಷಿಯಂತೆ ಕಾಯುತ್ತಿದ್ದರು. ಕೊನೆಗೂ ಇಂದು ಮುಂಜಾನೆ 5.30ಕ್ಕೆ ಕಾಮ ಪಿಚಾಚಿಗಳಿಗೆ ಗಲ್ಲು ಶಿಕ್ಷೆಯಾಗಿದ್ದು, 8 ವರ್ಷಗಳ ಸತತ ಹೋರಾಟಕ್ಕೆ ಕೊನೆಗೂ ವಿಜಯ ದೊರಕಿದಂತಾಗಿದೆ. ಅತ್ತ ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗುತ್ತಿದ್ದಂತೆಯೇ, ಇತ್ತ ಪಾಪಿಗಳ ಸಂಹಾರವಾಯಿತೆಂದು ದೇಶದಾದ್ಯಂತ ಸಂಭ್ರಮವನ್ನು ಆಚರಿಸಲಾಗುತ್ತಿದೆ.

ಇಲ್ಲಿ 7 ವರ್ಷ, 3 ತಿಂಗಳ ಸುದೀರ್ಘ ಕಾನೂನು ಹೋರಾಟ ನಡೆಸಿದ ನಿರ್ಭಯಾ ಪೋಷಕರನ್ನು ಮೆಚ್ಚಲೇಬೇಕು. ಆದ್ರೆ ಈ ಹೋರಾಟದಲ್ಲಿ ನಿರ್ಭಯಾ ಪೋಷಕರಿಗೆ ಬೆನ್ನೆಲುಬಾಗಿ ನಿಂತು ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಮಾಡಿದ ವಕೀಲೆ ಕೂಡ ಓರ್ವ ಹೆಣ್ಣು ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ.

Related posts

ರೈತರ ಹೊಟ್ಟೆ ಮೇಲೆ ಹೊಡೆದು ಬೆಂಗಳೂರು ಜಾತ್ರೆ ಮಾಡಬೇಕಾ? ರಸ್ತೆ ಗುಂಡಿಗಳ ನಡುವೆ ಮೋಜು ಮಸ್ತಿನ ಜಾತ್ರೆ: ಲೂಟಿ ಹೊಡೆಯಲು ಹೊಸ ಪ್ಲಾನ್ ಎಂದು ಜೆಡಿಎಸ್ ಕಿಡಿ

ರೈತರ ಹೊಟ್ಟೆ ಮೇಲೆ ಹೊಡೆದು ಬೆಂಗಳೂರು ಜಾತ್ರೆ ಮಾಡಬೇಕಾ? ರಸ್ತೆ ಗುಂಡಿಗಳ ನಡುವೆ ಮೋಜು ಮಸ್ತಿನ ಜಾತ್ರೆ: ಲೂಟಿ ಹೊಡೆಯಲು ಹೊಸ ಪ್ಲಾನ್ ಎಂದು ಜೆಡಿಎಸ್ ಕಿಡಿ

October 5, 2026
ಸರ್ಕಾರಿ ನೌಕರರ ಹಬ್ಬದ ಸಂಭ್ರಮಕ್ಕೆ ಬೋನಸ್ ಬಲ ನೀಡಲು ಮುಂದಾದ ರಾಜ್ಯ ಸರ್ಕಾರಿ ನೌಕರರ ಸಂಘ: ಮುಂಗಡ ಹಣ 50 ಸಾವಿರಕ್ಕೆ ಹೆಚ್ಚಿಸುವಂತೆ ಸರ್ಕಾರಕ್ಕೆ ಸಿ ಎಸ್ ಷಡಾಕ್ಷರಿ ಮನವಿ

ಸರ್ಕಾರಿ ನೌಕರರ ಹಬ್ಬದ ಸಂಭ್ರಮಕ್ಕೆ ಬೋನಸ್ ಬಲ ನೀಡಲು ಮುಂದಾದ ರಾಜ್ಯ ಸರ್ಕಾರಿ ನೌಕರರ ಸಂಘ: ಮುಂಗಡ ಹಣ 50 ಸಾವಿರಕ್ಕೆ ಹೆಚ್ಚಿಸುವಂತೆ ಸರ್ಕಾರಕ್ಕೆ ಸಿ ಎಸ್ ಷಡಾಕ್ಷರಿ ಮನವಿ

October 5, 2026

 

ಹೌದು…! ಹೆಣ್ಣಿನ ಮೇಲೆ ಕನಿಷ್ಠ ಗೌರವ, ಅಭಿಮಾನ ಇಲ್ಲದ ಆರು ಜನ ಕಾಮಪೀಪಾಸುಗಳು 2012ರ ಡಿಸೆಂಬರ್ 16. ಆ ದಿನ ರಾತ್ರಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ವಿಕೃತಿ ಮೆರೆದಿದ್ದರು. ಚಲಿಸುವ ಬಸ್ ನಲ್ಲಿ ಆರು ಜನ ಅತ್ಯಾಚಾರವೆಸಗಿ, ಆಕೆಯ ಗುಪ್ತಾಂಗಕ್ಕೆ ರಾಡಿನಿಂದ ಚುಚ್ಚಿ, ಬಸ್ ನಿಂದ ಹೊರಗೆ ದಬ್ಬಿದ್ದರು. ಆಕೆಯನ್ನು ಬದುಕಿಸಿಕೊಳ್ಳಲು ಮನೆಯವರು ಎಷ್ಟೇ ಪ್ರಯತ್ನ ನಡೆಸಿದರೂ ಜೀವನ್ಮರಣದ ನಡುವೆ ಹೋರಾಟ ನಡೆಸಿ ಆಕೆ ಕೊನೆಯುಸಿರೆಳೆದಳು. ಅದಾಗಿ 7 ವರ್ಷ, 3 ತಿಂಗಳ ನಂತರ ಆಕೆಯನ್ನು ಕೊಂದ ಹಂತಕರಿಗೆ ಶಿಕ್ಷೆ ಕೊಡಿಸಿದ್ದು, ಓರ್ವ ಹೆಣ್ಣು ಮಗಳೇ.. ಆಕೆಯ ಹೆಸರು ಸೀಮಾ ಸಮೃದ್ಧಿ ಕುಶ್ವಾಹ.

ಮೊದಲ ಪ್ರಕರಣದಲ್ಲೇ ಜಯ!
ಉತ್ತರ ಪ್ರದೇಶದ ಲಕ್ನೋದವರಾದ ಸೀಮಾ ಅವರಿಗೆ ಇದು ಮೊದಲ ಪ್ರಕರಣ. ಹಂತಕರ ಪರ ವಕೀಲ ಎ.ಪಿ. ಸಿಂಗ್ ಈಗಾಗಲೇ ಅನೇಕ ಕೇಸುಗಳಲ್ಲಿ ಜಯ ಸಾಧಿಸಿರುವ ಅನುಭವಿ . ಆದರೆ, ಅವರ ವಿರುದ್ಧ ನಿರ್ಭಯಾ ಕುಟುಂಬಸ್ಥರ ಪರವಾಗಿ ನಿಂತು, ಮನೆಯ ಮಗಳಂತೆ ನ್ಯಾಯಕ್ಕಾಗಿ ಹೋರಾಡಿದ ಸೀಮಾ ಈ ಕೇಸಿಗಾಗಿ ನಯಾಪೈಸೆ ಸಂಭಾವನೆಯನ್ನೂ ಪಡೆದಿಲ್ಲ. ಸುದೀರ್ಘ 7 ವರ್ಷಗಳ ಕಾಲ ಸಂಪೂರ್ಣ ಉಚಿತವಾಗಿ ನಿರ್ಭಯಾ ಕುಟುಂಬಸ್ಥರ ಪರವಾಗಿ ವಕಾಲತು ವಹಿಸಿರುವ ಸೀಮಾ ಸಮೃದ್ಧಿ ಕುಶ್ವಾಹ ಕೊನೆಗೂ ತಮ್ಮ ಪ್ರಯತ್ನದಲ್ಲಿ ಗೆಲುವು ಕಂಡಿದ್ದಾರೆ.

ನಿರ್ಭಯಾ ಪ್ರಕರಣ ವಿರೋಧಿ ಹೋರಾಡಿದ್ದ ಸೀಮಾ!
ನಿರ್ಭಯಾ ಪ್ರಕರಣ ನಡೆದ ಸಂದರ್ಭದಲ್ಲಿ ದೆಹಲಿ ಯೂನಿವರ್ಸಿಟಿಯಲ್ಲಿ ಕಾನೂನು ಪದವಿ ಪಡೆಯುತ್ತಿದ್ದ ಸೀಮಾ 2012ರಲ್ಲಿ ಕೋರ್ಟ್ ನಲ್ಲಿ ಟ್ರೈನಿಯಾಗಿ ಸೇರಿಕೊಂಡಿದ್ದರು. ನಿರ್ಭಯಾ ಅತ್ಯಾಚಾರ ಪ್ರಕರಣವನ್ನು ವಿರೋಧಿಸಿ ದೆಹಲಿಯಲ್ಲಿ ನಡೆದ ಹೋರಾಟದಲ್ಲಿ ಸೀಮಾ ಕುಶ್ವಾಹ ಕೂಡ ಭಾಗಿಯಾಗಿದ್ದರು. ಆ ವೇಳೆ ನಿರ್ಭಯಾಳ ತಾಯಿಯ ಮನೆಗೆ ಹೋಗಿ ಸಾಂತ್ವಾನ ಹೇಳಿದ ಸೀಮಾ, ತಾನು ಈ ಕೇಸನ್ನು ಉಚಿತವಾಗಿ ನಡೆಸುವುದಾಗಿ ಹೇಳಿದರು. ಸೀಮಾ ತನ್ನ ಮಗಳ ಸಾವಿಗೆ ನ್ಯಾಯ ಕೊಡಿಸುತ್ತಾರೆಂಬ ವಿಶ್ವಾಸದಲ್ಲಿ ನಿರ್ಭಯಾಳ ಕುಟುಂಬಸ್ಥರು ಈ ಕೇಸನ್ನು ಸೀಮಾಗೆ ಒಪ್ಪಿಸಿದರು. ಅದರಂತೆ ಸುದೀರ್ಘ ಕಾನೂನು ಹೋರಾಟದ ಬಳಿಕ ನಿರ್ಭಯಾ ಹಂತಕರಿಗೆ ಶಿಕ್ಷೆಯಾಗಿದೆ.

ಅಂದಹಾಗೆ, ಅನಿವಾರ್ಯವಾಗಿ ವಕೀಲಿ ವೃತ್ತಿಯತ್ತ ವಾಲಿದ ಸೀಮಾ ಈಗ ಐಎಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಒಟ್ಟಾರೆ ನಿರ್ಭಯಾ ಹಂತಕರಿಗೆ ಶಿಕ್ಷೆ ಕೊಡಿಸುವ ಈ ಹೋರಾಟದಲ್ಲಿ ಸೀಮಾ ಅವರು ಪಟ್ಟ ಶ್ರಮವನ್ನು ನಾವು ಮೆಚ್ಚಲೇಬೇಕು..

Tags: AP SinghNirbhayaSeema
ShareTweetSendShare
Join us on:

Related Posts

ರೈತರ ಹೊಟ್ಟೆ ಮೇಲೆ ಹೊಡೆದು ಬೆಂಗಳೂರು ಜಾತ್ರೆ ಮಾಡಬೇಕಾ? ರಸ್ತೆ ಗುಂಡಿಗಳ ನಡುವೆ ಮೋಜು ಮಸ್ತಿನ ಜಾತ್ರೆ: ಲೂಟಿ ಹೊಡೆಯಲು ಹೊಸ ಪ್ಲಾನ್ ಎಂದು ಜೆಡಿಎಸ್ ಕಿಡಿ

ರೈತರ ಹೊಟ್ಟೆ ಮೇಲೆ ಹೊಡೆದು ಬೆಂಗಳೂರು ಜಾತ್ರೆ ಮಾಡಬೇಕಾ? ರಸ್ತೆ ಗುಂಡಿಗಳ ನಡುವೆ ಮೋಜು ಮಸ್ತಿನ ಜಾತ್ರೆ: ಲೂಟಿ ಹೊಡೆಯಲು ಹೊಸ ಪ್ಲಾನ್ ಎಂದು ಜೆಡಿಎಸ್ ಕಿಡಿ

by Shwetha
October 5, 2026
0

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಡಿಸೆಂಬರ್ ತಿಂಗಳಲ್ಲಿ ಆಯೋಜಿಸಲು ಉದ್ದೇಶಿಸಿರುವ ಬೆಂಗಳೂರು ಜಾತ್ರೆ ಈಗ ದೊಡ್ಡ ರಾಜಕೀಯ ಸಮರಕ್ಕೆ ನಾಂದಿ ಹಾಡಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು...

ಸರ್ಕಾರಿ ನೌಕರರ ಹಬ್ಬದ ಸಂಭ್ರಮಕ್ಕೆ ಬೋನಸ್ ಬಲ ನೀಡಲು ಮುಂದಾದ ರಾಜ್ಯ ಸರ್ಕಾರಿ ನೌಕರರ ಸಂಘ: ಮುಂಗಡ ಹಣ 50 ಸಾವಿರಕ್ಕೆ ಹೆಚ್ಚಿಸುವಂತೆ ಸರ್ಕಾರಕ್ಕೆ ಸಿ ಎಸ್ ಷಡಾಕ್ಷರಿ ಮನವಿ

ಸರ್ಕಾರಿ ನೌಕರರ ಹಬ್ಬದ ಸಂಭ್ರಮಕ್ಕೆ ಬೋನಸ್ ಬಲ ನೀಡಲು ಮುಂದಾದ ರಾಜ್ಯ ಸರ್ಕಾರಿ ನೌಕರರ ಸಂಘ: ಮುಂಗಡ ಹಣ 50 ಸಾವಿರಕ್ಕೆ ಹೆಚ್ಚಿಸುವಂತೆ ಸರ್ಕಾರಕ್ಕೆ ಸಿ ಎಸ್ ಷಡಾಕ್ಷರಿ ಮನವಿ

by Shwetha
October 5, 2026
0

ಬೆಂಗಳೂರು: ರಾಜ್ಯದ ಸರ್ಕಾರಿ ನೌಕರರ ಪಾಲಿಗೆ ಈ ಬಾರಿಯ ಹಬ್ಬದ ಸೀಸನ್ ಮತ್ತಷ್ಟು ಸಡಗರ ತರುವ ಸಾಧ್ಯತೆ ಇದೆ. ಪ್ರಸ್ತುತ ಹಬ್ಬದ ಮುಂಗಡವಾಗಿ ನೀಡಲಾಗುತ್ತಿರುವ 25,000 ರೂಪಾಯಿಗಳನ್ನು...

ಅಧಿಕಾರದ ಆಸೆ ನನಗಿಲ್ಲ ಜನರ ಸೇವೆಯೇ ನನ್ನ ದಾರಿ:ಮರುಜನ್ಮವಿದ್ದರೆ ನಾನು ದಲಿತನಾಗಿ ಹುಟ್ಟುವೆ ಎಂದ ಪ್ರದೀಪ್ ಈಶ್ವರ್

ಅಧಿಕಾರದ ಆಸೆ ನನಗಿಲ್ಲ ಜನರ ಸೇವೆಯೇ ನನ್ನ ದಾರಿ:ಮರುಜನ್ಮವಿದ್ದರೆ ನಾನು ದಲಿತನಾಗಿ ಹುಟ್ಟುವೆ ಎಂದ ಪ್ರದೀಪ್ ಈಶ್ವರ್

by Shwetha
October 5, 2026
0

ಚಿಕ್ಕಬಳ್ಳಾಪುರ: ಸದಾ ತಮ್ಮ ಭಾಷಣದ ಶೈಲಿ ಮತ್ತು ನೇರ ಮಾತುಗಳಿಂದಲೇ ಸುದ್ದಿಯಲ್ಲಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಇದೀಗ ಒಂದು ಅತ್ಯಂತ ಭಾವನಾತ್ಮಕ ಹೇಳಿಕೆ ನೀಡುವ ಮೂಲಕ...

ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

ಮೋದಿಯಂತೆ ಟಿವಿ ಮುಂದೆ ಕೂತು ಭಜನೆ ಮಾಡಲ್ಲ SIR ಅಕ್ರಮಕ್ಕೆ ಬಿಡುತ್ತೇವೆ SIT ಬಿಸಿ: ಪ್ರಿಯಾಂಕ್ ಖರ್ಗೆ

by Shwetha
October 5, 2026
0

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಅಥವಾ ಎಸ್‌ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ ಬೃಹತ್ ಅಕ್ರಮ ನಡೆಯುತ್ತಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ....

ಎಷ್ಟಾದ್ರೂ ಮದ್ವೆಯಾಗ್ತೀನಿ ಏನಿವಾಗ? ಹಿಂದೂಗಳ ವಿರುದ್ಧ ನಾನು ಮಾತನಾಡೇ ಇಲ್ಲ, ನನ್ನ ಸಂಸಾರ ನನ್ನ ಇಷ್ಟ: ಮದುವೆಯ ಬಗ್ಗೆ ಟೀಕಿಸುವವರ ಬೆವರಿಳಿಸಿದ ನಟ ಪ್ರಕಾಶ್ ರಾಜ್

ಎಷ್ಟಾದ್ರೂ ಮದ್ವೆಯಾಗ್ತೀನಿ ಏನಿವಾಗ? ಹಿಂದೂಗಳ ವಿರುದ್ಧ ನಾನು ಮಾತನಾಡೇ ಇಲ್ಲ, ನನ್ನ ಸಂಸಾರ ನನ್ನ ಇಷ್ಟ: ಮದುವೆಯ ಬಗ್ಗೆ ಟೀಕಿಸುವವರ ಬೆವರಿಳಿಸಿದ ನಟ ಪ್ರಕಾಶ್ ರಾಜ್

by Shwetha
October 5, 2026
0

ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರಾಜ್ ಎಂದರೆ ಸದಾ ವಿವಾದಗಳ ಕೇಂದ್ರಬಿಂದು. ತಮ್ಮ ಹರಿತವಾದ ಮಾತುಗಳ ಮೂಲಕ ಕೇಂದ್ರ ಸರ್ಕಾರ ಮತ್ತು ಬಿಜೆಪಿಯನ್ನು ಸತತವಾಗಿ ಟೀಕಿಸುವ ಪ್ರಕಾಶ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram