Xiaomi Band 7 Pro ಅಪ್ ಗ್ರೇಡ್ ಸ್ಮಾರ್ಟ್ ವಾಚ್ ಬಿಡುಗಡೆ…
Xiaomi ತನ್ನ ಬ್ಯಾಂಡ್ 7 ಸ್ಮಾರ್ಟ್ ವಾಚ್ ನ ಉನ್ನತ-ಮಟ್ಟದ ರೂಪಾಂತರವಾದ Xiaomi ಬ್ಯಾಂಡ್ 7 ಪ್ರೊ ಸ್ಮಾರ್ಟ್ ವಾಚ್ ನ್ನ ಬಿಡುಗಡೆ ಮಾಡಿದೆ. Xiaomi Band 7 Pro ಸ್ಮಾರ್ಟ್ ವಾಚ್ 1.64 ಇಂಚಿನ ಡಿಸ್ಪ್ಲೇ ಹೊಂದಿದೆ. AMOLED ಪ್ಯಾನೆಲ್‌ನ ರೆಸಲ್ಯೂಶನ್ 280 x 456 ಪಿಕ್ಸೆಲ್‌ಗಳಾಗಿದ್ದರೆ ಪಿಕ್ಸೆಲ್ ಸಾಂದ್ರತೆಯು 326 ppi.
Xiaomi Band 7 Pro ನ ಆರಂಭಿಕ ಬೆಲೆ 400 ಚೈನೀಸ್ ಯುವಾನ್ ಅಂದರೆ ಸುಮಾರು 4724 ರುಪಾಯಿಗಳು. Xiaomi ಬ್ಯಾಂಡ್ 7 ಪ್ರೊ ಅನ್ನು ಭಾರತ ಸೇರಿದಂತೆ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಾಗುತ್ತದೆಯೇ ಎಂಬುದನ್ನು Xiaomi ಇನ್ನೂ ಬಹಿರಂಗಪಡಿಸಿಲ್ಲ.
ಈ ಸ್ಮಾರ್ಟ್ ಬ್ಯಾಂಡ್ 235mAh ಬ್ಯಾಟರಿ ಹೊಂದಿದೆ. ಇಡೀ ದಿನದ ಹೃದಯ ಬಡಿತ ಮತ್ತು ರಕ್ತ-ಆಮ್ಲಜನಕದ ಟ್ರ್ಯಾಕಿಂಗ್‌ನಂತಹ ಫೀಚರ್ಸ್ ಗಳು ಲಭ್ಯವಿದೆ. ಅಲ್ಲದೆ ಸುಧಾರಿತ ನಿದ್ರೆಯ ಮೇಲ್ವಿಚಾರಣೆಯಂತಹ ಪೀಚರ್ ಗಳನ್ನ ಸಹ ಬೆಂಬಲಿಸುತ್ತದೆ.
ಇದಲ್ಲದೆ, ಈ ಬ್ಯಾಂಡ್‌ನಲ್ಲಿ 100 ವ್ಯಾಯಾಮ ವಿಧಾನಗಳು ಲಭ್ಯವಿದೆ, 10 ಇನ್ಬಿಲ್ಟ್ ಕೋರ್ಸ್‌ಗಳು, ಏರೋಬಿಕ್ ತರಬೇತಿ ಸಹ ಸೇರಿವೆ. ಬ್ಯಾಂಡ್ 7 ಪ್ರೊ 5ATM ವಾಟರ್ ರೆಸಿಸ್ಟೆನ್ಸ್ ರೇಟಿಂಗ್‌ನೊಂದಿಗೆ ಮಾರುಕಟ್ಟೆಗೆ ಬರುತ್ತಿದೆ. ನೀರಿನಲ್ಲಿ ಈಜುವಾಗ ಸಹ ಹಾಳಾಗುವುದಿಲ್ಲ.