Xiaomi ಬ್ಯಾಟರಿ ರಿಪ್ಲೇಸ್ಮೆಂಟ್ ಪ್ರೋಗ್ರಾಂ – 499 ರುಪಾಯಿಗೆ ಮೊಬೈಲ್ ಬ್ಯಾಟರಿ ಬದಲಾಯಿಸಲು ಅವಕಾಶ…
ನೀವು Xiaomi ಕಂಪನಿಯ Mi ಮತ್ತು Redmi ಮೊಬೈಲ್ ಗಳನ್ನ ಯೂಸ್ ಮಾಡುತ್ತಿದ್ದು ಮೊಬೈಲ್ ಬ್ಯಾಟರಿ ಪ್ರಾಬ್ಲಂ ಎದುರಿಸುತ್ತಿದ್ದರೆ Xiaomi ಕಂಪನಿ ನಿಮಗಾಗಿ ವಿಶೇಷ ಆಫರ್ ಒಂದನ್ನ ನೀಡುತ್ತಿದೆ. Xiaomi ಇಂಡಿಯಾ ಭಾರತೀಯ ಗ್ರಾಹಕರಿಗಾಗಿ ಬ್ಯಾಟರಿ ರಿಪ್ಲೇಸ್ಮೆಂಟ್ ಪ್ರೋಗ್ರಾಂ ಆರಂಭಿಸುತ್ತಿದೆ. ಈ ಕಾರ್ಯಕ್ರಮದ ಮೂಲಕ ನೀವು ಕೇವಲ ರೂ 499 ರುಪಾಯಿಗಳಿಗೆ ನಿಮ್ಮ ಮೊಬೈಲ್ ಬ್ಯಾಟರಿಯನ್ನ ಬದಲಾಯಿಸಿಕೊಳ್ಳಬಹುದು.
ಕಂಪನಿಯ ಹೇಳಿಕೆಯ ಪ್ರಕಾರ, ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆಯಲು, ಗ್ರಾಹಕರು ಯಾವುದೇ ಹತ್ತಿರದ Xiaomi ಸೇವಾ ಕೇಂದ್ರಕ್ಕೆ(ಕೇರ್ ಸೆಂಟರ್) ಭೇಟಿ ನೀಡಬೇಕು. ಬ್ಯಾಟರಿಯನ್ನ ಬದಲಾಯಿಸುವ ಅಗತ್ಯವಿದ್ದರೆ, 499 ರೂ. ಪಾವತಿಸಿ ಬದಲಾಯಿಸಿಕೊಳ್ಳಬಹುದು. ಬ್ಯಾಟರಿ ರಿಪ್ಲೇಸ್ಮೆಂಟ್ ಪ್ರೋಗ್ರಾಂ ಎಲ್ಲಾ ಮೂರು ಬ್ರಾಂಡ್ಗಳ Xiaomi, Mi ಮತ್ತು Redmi ಗೆ ಲಭ್ಯವಿದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇದು ಬ್ಯಾಟರಿ ಬದಲಾವಣೆಯ ಆರಂಭಿಕ ಬೆಲೆ. ಮೊಬೈಲ್ ನ ಮಾಡೆಲ್ ಗಳನ್ನ ಅವಲಂಬಿಸಿ, ಬ್ಯಾಟರಿಯ ಬೆಲೆ ಕೂಡ ಹೆಚ್ಚಾಗಬಹುದು. Xiaomi Service+ ಅಪ್ಲಿಕೇಶನ್ ಮೂಲಕ ಗ್ರಾಹಕರು ಸೇವಾ ಕೇಂದ್ರಕ್ಕೆ ಅಪಾಯಿಂಟ್ಮೆಂಟ್ಗಳನ್ನು ಬುಕ್ ಮಾಡಬಹುದು ಎಂದು ಕಂಪನಿ ಹೇಳಿದೆ. ಕಂಪನಿಯ ಪ್ರಕಾರ, ಫೋನ್ನ ಬ್ಯಾಟರಿ ತುಂಬಾ ನಿಧಾನವಾಗಿ ಚಾರ್ಜ್ ಆಗುತ್ತಿದ್ದರೆ ಅಥವಾ ಇದ್ದಕ್ಕಿದ್ದಂತೆ ಖಾಲಿಯಾಗುತ್ತಿದ್ದರೆ, ಬ್ಯಾಟರಿಯನ್ನು ಬದಲಾಯಿಸಬೇಕಾಗುತ್ತದೆ.








