Xiaomi ಗೆ ಸೇರಿದ ₹5551.27 ಕೊಟಿ ವಶಪಡಿಸಿಕೊಂಡ E D
ಚೀನಾದ ಮೊಬೈಲ್ ಫೋನ್ ತಯಾರಕ ಕಂಪನಿ Xiaomi ಗೆ ಸೇರಿದ ₹5551.27 ಕೋಟಿ ರುಪಾಯಿಗಳನ್ನ ವಶಪಡಿಸಿಕೊಳ್ಳುವ ಆದೇಶವನ್ನು ಸಕ್ಷಮ ಪ್ರಾಧಿಕಾರವು ದೃಢಪಡಿಸಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಫೆಮಾ) ನಿಬಂಧನೆಗಳ ಅಡಿಯಲ್ಲಿ ಸೆಪ್ಟೆಂಬರ್ 29 ರಂದು ಆದೇಶ ಹೊರಡಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
“ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯ ಸೆಕ್ಷನ್ 37A ಅಡಿಯಲ್ಲಿ ನೇಮಕಗೊಂಡಿರುವ ಸಕ್ಷಮ ಪ್ರಾಧಿಕಾರವು FEMA ನಿಬಂಧನೆಗಳ ಅಡಿಯಲ್ಲಿ, Xiaomi ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವಿರುದ್ಧ ಜಾರಿ ನಿರ್ದೇಶನಾಲಯ (ED) ದಿನಾಂಕ 29.04.2022 ರಂದು 5551.27 ಕೋಟಿಯನ್ನು ಅಂಗೀಕರಿಸಿದೆ ಎಂದು E D ಹೊರಡಿಸಿದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಈಗ ವಶಪಡಿಸಿಕೊಂಡಿರುವ ₹ 5551.27 ಕೋಟಿ ಇಲ್ಲಿಯವರೆಗೆ ಸ್ಥಗಿತಗೊಂಡಿರುವ ಅತ್ಯಧಿಕ ಮೊತ್ತವಾಗಿದೆ ಎಂದು ಇ ಡಿ ತಿಳಿಸಿದೆ. Xiaomi ಕಂಪನಿ ರಾಯಲ್ಟಿ ಪಾವತಿಯ ನೆಪದಲ್ಲಿ ವಿದೇಶಿ ಸಂಸ್ಥೆಗಳಿಗೆ 5,551.27 ಕೋಟಿ ರೂಪಾಯಿಗಳಿಗೆ ಸಮಾನವಾದ ವಿದೇಶಿ ಕರೆನ್ಸಿಯನ್ನು ಅಕ್ರಮವಾಗಿ ರವಾನೆ ಮಾಡಿದೆ ಎಂದು ಇಡಿ ಆರೋಪಿಸಿದೆ.
ಈ ವರ್ಷ ಏಪ್ರಿಲ್ 30 ರಂದು ಇಡಿ ಮೊತ್ತವನ್ನು ವಶಪಡಿಸಿಕೊಂಡ ನಂತರ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯನ್ನು ಕೋರಿತ್ತು, ಈಗ ಪ್ರಾಧಿಕಾರ ಧೃಡಪಡಿಸಿದ ಕಾರಣ ಬ್ಯಾಂಕ್ ಖಾತೆಗಳಲ್ಲಿ ಬಿದ್ದಿದ್ದ ಹಣವನ್ನು M/s Xiaomi Technology India Private Limited ನಿಂದ ವಶಪಡಿಸಿಕೊಳ್ಳಲಾಗಿದೆ.
ಕ್ಸಿಯೋಮಿ ಭಾರತದಲ್ಲಿ MI ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಮೊಬೈಲ್ ತಯಾರಿಕೆ ಮತ್ತು ವಿತರಣೆಯನ್ನ ಮಾಡುತ್ತಿದೆ.
Xiaomi case: FEMA authority confirms ED’s seizure order of Rs 5,551.27 cr