Xiaomi’s Redmi A1 and Realme C33 | 2 ಹೊಸ ಸ್ಮಾರ್ಟ್ಫೋನ್ ರಿಲೀಸ್
ರಿಯಲ್ ಮೀ ಸಿ33 ಫೋನ್ ರಿಲೀಸ್
3GB RAM + 32GB ಸ್ಟೋರೇಜ್ ಲಭ್ಯ
4GB RAM + 64GB ಸ್ಟೋರೇಜ್ ಲಭ್ಯ
ರೆಡ್ಮಿ ಎ 1 ಇಂದು ಮಧ್ಯಾಹ್ನ ಬಿಡುಗಡೆ
ಕಳೆದ ತಿಂಗಳಿನಲ್ಲಿ ತನ್ನ ಹೊಸ ಸ್ಮಾರ್ಟ್ ಫೋನ್ ಅನ್ನು ರಿಲೀಸ್ ಮಾಡಿದ್ದ ರಿಯಲ್ ಮೀ ಸಂಸ್ಥೆ ಇಂದು ಮತ್ತೊಂದು ಮೊಬೈಲ್ ಅನ್ನು ರಿಲೀಸ್ ಮಾಡಲಿದೆ. ಸೆಪ್ಟೆಂಬರ್ 6 ರಂದು ಭಾರತದಲ್ಲಿ ಹೊಸ ರಿಯಲ್ ಮಿ ಸಿ33 ಸ್ಮಾರ್ಟ್ ಫೋನ್ ಬಿಡುಗಡೆ ಆಗಲಿದೆ.
ಭಾರತದಲ್ಲಿ ಈ ಮೊಬೈಲ್ ಒಟ್ಟು ಎರಡು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಲಿದೆ. 3GB RAM + 32GB ಸ್ಟೋರೇಜ್ ಆವೃತ್ತಿಗೆ 9,500ರೂ. ಹಾಗೂ 4GB RAM + 64GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 10,500 ರೂ. ಇರಬಹುದೆಂದು ಅಂದಾಜಿಸಲಾಗಿದೆ.
ಈ ಮೊಬೈಲ್ 6.6 ಇಂಚಿನ ಫುಲ್ ಹೆಚ್ ಡಿ ಪ್ಲಸ್ ಡಿಸ್ ಪ್ಲೇ. ಮೀಡಿಯಾ ಟೆಕ್ ಹೇಲಿಯೋ ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಬೆಂಬಲವನ್ನು ಪಡೆದಿದೆ.

ಇದರಲ್ಲಿ ಡ್ಯುಯಲ್ ರಿಯಲ್ ಕ್ಯಾಮೆರಾ ಸೆಟ್ ಅಪ್ ಇದ್ದು, ಇದರ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಇದೆ. ಸೆಲ್ಫಿ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಇರಬಹುದು.
ಇತ್ತ ಶವೋಮಿ ಕಂಪನಿ ರೆಡ್ಮಿ ಎ 1 ಮೊಬೈಲ್ ಅನ್ನು ಇಂದು ಮಧ್ಯಾಹ್ನ ಬಿಡುಗಡೆ ಮಾಡಲಿದೆ. ಇದು ವಾಟರ್ ಡ್ರಾಪ್ ನಾಚ್ ಡಿಸ್ ಪ್ಲೇ ಹೊಂದಿದ್ದು, ಆಂಡ್ರಾಯ್ಡ್ 11 ರ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ.
ಇದು ಕ್ವಾಡ್ ಡ್ಯುಯೆಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ. ಮುಖ್ಯ ಕ್ಯಾಮೆರಾದಲ್ಲಿ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಇದೆ. ಎರಡನೇ ಕ್ಯಾಮೆರಾ 2 ಡೆಪ್ತ್ ಸೆನ್ಸಾರ್ ನಿಂದ ಕೂಡಿದೆ. ಈ ಫೋನ್ 10 ಸಾವಿರ ರೂಪಾಯಿಗಳ ಒಳಗೆ ಸಿಗಲಿದೆ.