ಬಹುಕಾಲದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯಾಮಿ
ಮುಂಬೈ: ಸೌಂದರ್ಯ ವರ್ಧಕ ಜಾಹೀರಾತಿನ ಮೂಲಕವೇ ಹೆಚ್ಚು ಫೇಮ್ ಪಡೆದು ನಂತರ ಸಿನಿಮಾರಂಗದಲ್ಲಿ ಖ್ಯಾತಿ ಪಡೆದ ನಟಿ ಯಾಮಿ ಗೌತಮ್.. ಬಾಲಿವುಡ್ ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆಗೆ ತೆರೆಹಂಚಿಕೊಂಡಿರುವ ಯಾಮಿ ಇದೀಗ ತಮ್ಮ ಬಹುಕಾಲದ ಗೆಳೆಯನ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದಿತ್ಯ ಧಾರ್ ಜೊತೆ ವಿವಾಹವಾಗಿದ್ದಾರೆ. ತಮ್ಮ ವಿವಾಹ ಸಮಾರಂಭದ ಫೋಟೋವನ್ನ ಯಾಮಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರಿಗೆ ಅಭಿಮಾನಿಗಳು , ನೆಟ್ಟಿಗರು ಅಭಿನಂದನೆಗಳನ್ನ ಸಲ್ಲಿಸುತ್ತಿದ್ದಾರೆ.
URI ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದ, ಆದಿತ್ಯ ಧಾರ್, ಯಾಮಿ ಗೌತಮ್ ಅವರ ಜೊತೆ ಸರಳವಾಗಿ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದಿದ್ದಾರೆ. ಕುಟುಂಬದ ಆಶೀರ್ವಾದದೊಂದಿಗೆ ಆತ್ಮೀಯರ ಸಮ್ಮುಖದಲ್ಲಿ ವಿವಾಹವಾಗಿರುವುದಾಗಿ ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಹಂಚಿಕೊಂಡು ಮಾಹಿತಿ ನೀಡಿದ್ದಾರೆ. ಕೆಲವೇ ಆಪ್ತರಷ್ಟರ ಮುಂದೆ ನಮ್ಮ ವಿವಾಹ ನಡೆಯಿತು. ನಾವು ಪ್ರೀತಿ ಮತ್ತು ಸ್ನೇಹದ ಪಯಾಣವನ್ನು ಆರಂಭಿಸುತ್ತಿರುವ ಈ ಸಂದರ್ಭದಲ್ಲಿ ನಿಮ್ಮ ಆಶೀರ್ವಾದ ಹಾಗೂ ಶುಭಾಶಯವನ್ನು ಬಯಸುತ್ತೇವೆ ಎಂದಿದ್ದಾರೆ.
ಅಂದ್ಹಾಗೆ ಯಾಮಿ ಉಲ್ಲಾಸ ಉತ್ಸಾಹ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ಗೆ ಜೋಡಿಯಾಗುವ ಮೂಲಕ ಕನ್ನಡ ಸಿನಿಮಾರಂಗದಲ್ಲೂ ನಟಿಸಿದ್ದಾರೆ.. ಅಲ್ಲದೇ ತೆಲುಗು – ತಮಿಳು ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.. ಇನ್ನೂ ಮುಂದೆ ಅವರ ಅಭಿಯನದ ದಾವಿ ಸಿನಿಮಾ ಬಿಡುಗಡೆಯಾಗಬೇಕಾಗಿದೆ..








