ಬಾಲಿವುಡ್‌ನ ಅಣ್ಣಾ ಸುನಿಲ್ ಶೆಟ್ಟಿಯ ಪ್ರೇಮಕಥೆ

1 min read
Love story of Bollywood star Sunil Shetty

ಬಾಲಿವುಡ್‌ನ ಅಣ್ಣಾ ಸುನಿಲ್ ಶೆಟ್ಟಿಯ ಪ್ರೇಮಕಥೆ

ಬಾಲಿವುಡ್‌ನ ಅಣ್ಣಾ ಅಂದರೆ ಸುನಿಲ್ ಶೆಟ್ಟಿ ಅವರ ಪ್ರೇಮಕಥೆ ಕೂಡ ಯಾವುದೇ ಚಲನಚಿತ್ರ ಕಥೆಗಿಂತ ಕಡಿಮೆಯಿಲ್ಲ. ಮಾಹಿತಿಗಳ ಪ್ರಕಾರ, ಸುನಿಲ್ ಶೆಟ್ಟಿ ಅವರು ಮಾನಾ ಶೆಟ್ಟಿಯನ್ನು ಮದುವೆಯಾಗಲು 9 ವರ್ಷಗಳ ಕಾಲ ಕಾದಿದ್ದರು.
ಮಾನಾ ಶೆಟ್ಟಿ ಅವರ ನಿಜವಾದ ಹೆಸರು ಮೋನಿಷಾ ಖಾದ್ರಿ. ಅವರು ಸುನಿಲ್ ಶೆಟ್ಟಿಯವರನ್ನು ಮುಂಬೈನ ಪೇಸ್ಟ್ರಿ ಅಂಗಡಿಯಲ್ಲಿ ಮೊದಲು ಭೇಟಿಯಾದರು ಎಂದು ಹೇಳಲಾಗಿದೆ.
Love story of Bollywood star Sunil Shetty

ವರದಿಗಳ ಪ್ರಕಾರ, ಸುನಿಲ್ ಮೊದಲು ಮಾನಾರ ಸಹೋದರಿಯೊಂದಿಗೆ ಸ್ನೇಹ ಬೆಳೆಸಿದರು. ನಂತರ ಕ್ರಮೇಣ ಮಾನಾ ಮತ್ತು ಸುನಿಲ್ ಪರಸ್ಪರ ಹತ್ತಿರವಾದರು. ಆದರೆ ಸುನಿಲ್ ಹಿಂದೂ ಆಗಿದ್ದರೆ, ಮಾನಾ ಗುಜರಾತ್‌ನ ಮುಸ್ಲಿಂ ಕುಟುಂಬಕ್ಕೆ ಸೇರಿದವರಾಗಿದ್ದರು. ಇದು ಅವರ ಮದುವೆಗೆ ಅಡ್ಡಿಯಾಯಿತು. ಎರಡೂ ಕಡೆಯ ಕುಟುಂಬ ಸದಸ್ಯರು ಮದುವೆಗೆ ವಿರೋಧ ವ್ಯಕ್ತಪಡಿಸಿದರು.
ಆದರೆ ಸುನಿಲ್ ಮತ್ತು ಮಾನಾ ಏನಾದರೂ ಸರಿಯೇ ಆದರೆ ಪರಸ್ಪರರಿಲ್ಲದೆ ಬದುಕುವುದಿಲ್ಲ ಎಂದು ನಿರ್ಧರಿಸಿದರು.
ಸುನಿಲ್ ಶೆಟ್ಟಿ ಮತ್ತು ಮಾನಾ ಎರಡೂ ಕುಟುಂಬವನ್ನು ಒಪ್ಪಿಸಲು 9 ವರ್ಷಗಳ ಕಾಲ ಕಾದರು ಮತ್ತು ಅಂತಿಮವಾಗಿ ಡಿಸೆಂಬರ್ 25, 1991 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸುನಿಲ್ ಶೆಟ್ಟಿ ಮಾನಾ ದಂಪತಿಗೆ ಅಥಿಯಾ ಮತ್ತು ಅಹಾನ್ ಶೆಟ್ಟಿ ಎಂಬ ಇಬ್ಬರು ಮಕ್ಕಳಿದ್ದು, ಅಥಿಯಾ ಈಗಾಗಲೇ ಬಾಲಿವುಡ್‌ಗೆ ಕಾಲಿಟ್ಟಿದ್ದರೆ, ಅಹಾನ್ ಬಾಲಿವುಡ್ ಗೆ ಕಾಲಿಡುವ ತಯಾರಿಯಲ್ಲಿದ್ದಾರೆ.
wearing masks

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ಇದು ‌ಸಾಕ್ಷಾಟಿವಿ ಕಳಕಳಿ.

#Lovestory #Bollywoodstar #SunilShetty

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd