ಯಾದಗಿರಿ : ಬೈಕ್ ಕಳ್ಳರ ಬಂಧನ, 12 ಬೈಕ್ ವಶ
ಯಾದಗಿರಿ : ಸರಣಿ ಬೈಕ್ ಕಳ್ಳತನದಲ್ಲಿ ಭಾಗಿಯಾಗಿದ್ದ ಕಳ್ಳರನ್ನು ಶಹಾಪುರ ಪೊಲೀಸರು ಬಂಧಿಸಿದ್ದಾರೆ.
21 ವರ್ಷದ ಸಂತೋಷ್, 20 ವರ್ಷದ ಶರಬಣ್ಣ ಬಂಧಿತ ಆರೋಪಿಗಳಾಗಿದ್ದಾರೆ.
ಇವರಿಂದ ಸುಮಾರು 5,45,000 ರೂ. ಮೌಲ್ಯದ 12 ಬೈಕ್ ಗಳನ್ನು ಜಪ್ತಿ ಮಾಡಲಾಗಿದೆ.
ಕೆಲ ದಿನಗಳಿಂದ ಶಹಾಪುರ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು. ಹಾಡಹಗಲೇ ಬೈಕ್ ಗಳನ್ನು ಕಳ್ಳರು ಕದಿಯುತ್ತಿದ್ದರು.
ಇದನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸ್ ಇಲಾಖೆ ಶಹಾಪುರ ಸಿಪಿಐ ಚೆನ್ನಯ್ಯ ಹಿರೇಮಠ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಇದೀಗ ಈ ವಿಶೇಷ ತಂಡ ಬೈಕ್ ಕಳ್ಳರ ಜಾಡುಹಿಡಿದು ಕಂಬಿ ಹಿಂದೆ ತಳ್ಳಿದೆ.