Yadagiri : ಅಬಕಾರಿ ಅಧಿಕಾರಿಗಳ ದಾಳಿ – ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ನಕಲಿ ಮದ್ಯ ಜಪ್ತಿ…
ನಕಲಿ ಮದ್ಯ ಸಂಗ್ರಹಿಸಿಟ್ಟಿದ್ದ ಸಂಗ್ರಹಿಸಿಟ್ಟಿದ್ದ ಮನೆಗಳ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ನಕಲಿ ಮದ್ಯ ಜಪ್ತಿ ಮಾಡಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಹಳಿಸಗರ ಬಡಾವಣೆಯ ಎರಡು ಮನೆಗಳ ಮೇಲೆ ದಾಳಿ ಮಾಡಿದ ಅಧಿಕಾರಿಗಳು 20 ಲಕ್ಷ ಮೌಲ್ಯದ 180 ಪೆಟ್ಟಿಗೆ ನಕಲಿ ಮದ್ಯ ಜಪ್ತಿ ಮಾಡಿದ್ದಾರೆ. ಹಳಿಸಗರ ಬಡಾವಣೆಯ ಮನೆಗಳಲ್ಲಿ ನಕಲಿ ಮದ್ಯ ಸಂಗ್ರಹಿಸಿ ಮಾರಾಟ ಮಾಡುತಿದ್ದರು.
130 ಕಾಟನ್ ಬಾಕ್ಸ್ ನಲ್ಲಿದ್ದ ಇಂಪಿರಿಯಲ್ ಬ್ಲೂ ನ 180ml ಮದ್ಯದ ಬಾಟಲ್ ಜಪ್ತಿ ಅದೆ ರೀತಿ ಮತ್ತೊಂದು ಕಡೆ ಮನೆ ಮೇಲೆ ದಾಳಿ 50 ಪೆಟ್ಟಿಗೆ ನಕಲಿ ಮದ್ಯ ಜಪ್ತಿ ಮಾಡಲಾಗಿದೆ.
ಖಚಿತ ಮಾಹಿತಿ ಮೇರೆಗೆ ಶಹಾಪುರ ಉಪ ವಿಭಾಗದ ಅಬಕಾರಿ ಡಿವೈಎಸ್ಪಿ ಮಲ್ಲಿಕಾರ್ಜುನ ರೆಡ್ಡಿ,ಅಬಕಾರಿ ನಿರೀಕ್ಷಕ ಕೇದಾರನಾಥ ಪಾಟೀಲ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
Yadagiri : Raid by Excise officials – Fake liquor stored in house seized…