Yadagiri | ಕೃಷ್ಣಾ ನದಿಯ ತೀರದ 35 ಹಳ್ಳಿಯ ಜನರಿಗೆ ಎಚ್ಚರಿಕೆ
ಯಾದಗಿರಿ : ಅಪಾರ ಪ್ರಮಾಣ ನೀರು ಒಳಹರಿವಿನ ಕಾರಣ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಕೃಷ್ಣಾ ನದಿಯ ತೀರದ 35 ಹಳ್ಳಿಯ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಸೂಚನೆ ನೀಡಿದ್ದಾರೆ.
ಸದ್ಯ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 1,60,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.

ಹೀಗಾಗಿ ಸುರಪುರ, ಶಹಾಪುರ, ಹುಣಸಗಿ, ವಡಗೇರಾ ತಾಲೂಕಿನ ಹಳ್ಳಿ ಜನರು ಎಚ್ಚರಿಕೆಯಿಂದ ಇರಬೇಕು.
ಕೃಷ್ಣಾ ಹಾಗೂ ಭೀಮಾ ನದಿಯೊಳಗೆ ಮೀನು ಹಿಡಿಯಲು ಹೋಗಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಮುಖ್ಯವಾಗಿ ನೀರು ನೋಡಿ ಸೆಲ್ಫಿ ತೆಗೆಸಿಕೊಳ್ಳುವ ದುಸ್ಸಾಹಸ ಮಾಡಬಾರದು. ಇಂತಹ ಸಾಹಸ ಮಾಡಿ ಜೀವ ಕಳೆದುಕೊಳ್ಳಬೇಡಿ.
ರೈತರು ನದಿ ತೀರದಲ್ಲಿರುವ ಐಪಿಸೆಟ್ ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗಿ.
ಜಾನುವಾರುಗಳನ್ನು ಹಾಗೂ ಮಕ್ಕಳಿಗೆ ಯಾರನ್ನು ಬಿಡಬೇಡಿ ಎಂದು ಜನರಿಗೆ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಎಚ್ಚರಿಕೆ ನೀಡಿದ್ದಾರೆ.