ಯಾದಗಿರಿ | ಮುರಿದು ಬಿದ್ದ ರಥದ ಗೋಪುರ, ಐವರು ಗಂಭೀರ

1 min read
YADGIR

ಯಾದಗಿರಿ | ಮುರಿದು ಬಿದ್ದ ರಥದ ಗೋಪುರ, ಐವರು ಗಂಭೀರ

ಯಾದಗಿರಿ : ರಥೋತ್ಸವದ ವೇಳೆ ರಥದ ಗೋಪುರ ಮುರಿದು ಬಿದ್ದು ಐವರಿಗೆ ಗಂಭೀರವಾಗಿ ಗಾಯಗಳಾಗಿರುವ ಘಟನೆ ಯಾದಗಿರಿಯ ಬಳಿಚಕ್ರ ಗ್ರಾಮದಲ್ಲಿ ನಡೆದಿದೆ.

ಬಳಿಚಕ್ರ ಗ್ರಾಮದಲ್ಲಿ ಆತ್ಮಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವನ್ನು ಹಮ್ಮಿಕೊಳ್ಳಲಾಗಿತ್ತು.

YADGIR

ಈ ವೇಳೆ ಭಕ್ತರು ರಭಸವಾಗಿ ರಥ ಎಳೆಯುವಾಗ ರಥದ ಮೇಲ್ಭಾಗ ಮುರಿದು ಬಿದ್ದು ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸದ್ಯ ಗಾಯಾಳುಗಳನ್ನ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಐವರಲ್ಲಿ ಓರ್ವನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸೈದಾಪೂರ ಠಾಣಾ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

lock

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd