Yadgiri | ಜಿಲ್ಲಾಡಳಿತದ ಆದೇಶಕ್ಕೆ ಡೋಂಟ್ ಕೇರ್ ಎಂದ ಮೀನುಗಾರರು
ಯಾದಗಿರಿ : ಜಿಲ್ಲಾಡಳಿತದ ಆದೇಶಕ್ಕೂ ಕೇರ್ ಮಾಡದೇ ಉಕ್ಕಿ ಹರಿಯುವ ನದಿಯಲ್ಲಿ ಮೀನು ಹಿಡಿಯಲು ಮೀನುಗಾರರು ನದಿಯೊಳಗೆ ತೆರಳಿದ್ದಾರೆ.
ಬಸವಸಾಗರ ಜಲಾಶಯದಿಂದ ಭಾರಿ ಪ್ರಮಾಣದ ನೀರು ಬಿಡುಗಡೆ ಮಾಡಿರುವುದರಿಂದ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ.
ಹೀಗಾಗಿ ನದಿ ತೀರಕ್ಕೆ ತೆರಳಬಾರದೆಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಆದ್ರೂ ಜಿಲ್ಲಾಡಳಿತದ ಆದೇಶಕ್ಕೆ ಮೀನುಗಾರರು ಮಣೆ ಹಾಕದೇ ನದಿಗೆ ಇಳಿದಿದ್ದಾರೆ.
ಧರ್ಮಕೋಲ್ ( ಬೆಂಡ್ ) ಮೇಲೆ ಕುಳಿತು ಮೀನು ಹಿಡಿಯಲು ಮೀನುಗಾರರು ತೆರಳಿದ್ದಾರೆ.