ಸ್ಯಾಂಡಲ್ ವುಡ್ ನ ಜವಾಬ್ದಾರಿಯನ್ನು ತಮ್ಮ ಹೆಗಲಿಗೆ ಹೊತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ನಾಳೆ ಅಂದ್ರೆ ಆಗಸ್ಟ್ 4 ರಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡುವುದು ನಿಶ್ಚಯವಾಗಿತ್ತು. ಆದ್ರೆ ಇದೀಗ ಸಿಎಂ ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿರುವ ಹಿನ್ನೆಲೆ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆ ಬಿಎಸ್ ವೈ ಅವರೊಂದಿಗಿನ ಭೇಟಿ ಕಾರ್ಯಕ್ರಮವನ್ನು ಮುಂದೂಡಿಕೆ ಮಾಡಲಾಗಿದೆ.
ಅಂಬರೀಷ್ ಅವರ ನಿಧನದ ಬಳಿಕ ಚಂದನವನದ ಜವಾಬ್ದಾರಿ ಹೊರುವಂತೆ ಶಿವಣ್ಣನ ಮನೆಯಲ್ಲಿ ಅನೇಕ ನಟರು ಹಾಗೂ ಸಿನೆಮಾ ಗಣ್ಯರು ಮನವಿಮಾಡಿಕೊಂಡ ಬಳಿಕ, ಶಿವರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗವನ್ನು ಮುನ್ನೆಡೆಸುವ ಜವಾಬ್ದಾರಿ ಹೊತ್ತುಕೊಂಡಿದ್ದರು. ಇದೀಗ ರಾಜ್ಯದಲ್ಲಿ ಕೊರೊನಾ ಹಾವಳಿಯಿಂದಾಗಿ ಚಿತ್ರೋದ್ಯಮಕ್ಕೆ ಭಾರೀ ನಷ್ಟವಾಗಿದ್ದು, ಚಿತ್ರಮಂದಿರಗಳೆಲ್ಲಾ ಬಂದ್ ಆಗಿವೆ. ಇದೇ ವಿಚಾರವಾಗಿಯೇ ಶಿವರಾಜ್ ಕುಮಾರ್ ಅವರು ಚಿತ್ರರಂಗದ ಸಮಸ್ಯೆಗಳ ಬಗ್ಗೆ ಸಿಎಂ ಜೊತೆಗೆ ಚರ್ಚೆ ನಡೆಸಲಿದ್ದರು. ಆದ್ರೆ ಇದೀಗ ಯಡಿಯೂರಪ್ಪ ಅವರು ಚಿಕಿತ್ಸೆಗೆ ದಾಖಲಾಗಿರುವ ಪರಿಣಾಮ ಈ ಕಾರ್ಯಕ್ರಮವನ್ನು ಪೋಸ್ಟ್ ಪೋನ್ ಮಾಡಲಾಗಿದೆ.
Mumbai : ಚಾಕುವಿನಿಂದ ಇರಿದು ಮೂವರನ್ನ ಕೊಂದ ಮಾನಸಿಕ ಅಸ್ವಸ್ಥ; ಬೆಚ್ಚಿದ ಮುಂಬೈ…
Mumbai : ಚಾಕುವಿನಿಂದ ಇರಿದು ಮೂವರನ್ನ ಕೊಂದ ಮಾನಸಿಕ ಅಸ್ವಸ್ಥ; ಬೆಚ್ಚಿದ ಮುಂಬೈ… 54 ವರ್ಷದ ಮಾನಸಿಕ ಅಸ್ವಸ್ಥ ಹಿರಿಯ ನಾಗರಿಕ ದಂಪತಿಗಳು ಸೇರಿದಂತೆ ಮೂವರನ್ನ ಕೊಂದಿರುವ...