Yash : ಪೆಪ್ಸಿ ಜಾಹಿರಾತು ಒಪ್ಪಿ ತಪ್ಪು ಮಾಡಿದ್ರಾ ಯಶ್..?? ನೆಟ್ಟಿಗರು ಗರಂ..!!
ರಾಕಿಂಗ್ ಸ್ಟಾರ್ ಯಶ್ ಅವರ ಮೇನಿಯಾ ಆಲ್ ಓವರ್ ಇಂಡಿಯಾ ಇದೆ.. KGF ನಂತರ ಯಶ್ ನ್ಯಾಷನ್ಲ್ ಸ್ಟಾರ್ ಆಗಿದ್ದು , ದೇಶದ ಮೂಲೆಮೂಲೆಗಳಲ್ಲೂ ರಾಕಿ ಅಭಿಮಾನಿಗಳಿದ್ದಾರೆ..
ಆದ್ರೆ ಈ ನಡುವೆ ರಾಕಿ ಭಾಯ್ ಅವರ ಒಂದು ನಿರ್ಧಾರದಿಂದಾಗಿ ಅವರ ಫ್ಯಾನ್ಸ್ ಯಾಕೋ ಅಸಮಾಧಾನಗೊಂಡಿದ್ದಾರೆ ಎನ್ನಿಸುತ್ತೊದೆ.. ಯಶ್ ಅವರನ್ನ ಟ್ರೋಲ್ ಕೂಡ ಮಾಡ್ತಿದ್ದಾರೆ ಕೆಲವರು..
ಎಲ್ಲರಿಗೂ ಗೊತ್ತಿರೋ ಹಾಗೆ ಬಾಲಿವುಡ್ ನ ಸೂಪರ್ ಸ್ಟಾರ್ ಗಳಾದ ಅಜಯ್ ದೇವಗನ್ , ಸಲ್ಮಾನ್ ಖಾನ್ , ಅಕ್ಷಯ್ ಕುಮಾರ್ ಪಾನ್ ಮಸಾಲಾ ಜಾಹಿರಾತು ಮಾಡಿ ಸಿಕ್ಕಾಪಟ್ಟೆ ಟ್ರೋಲ್ ಗೆ ಗುರಿಯಾಗಿದ್ದರು..
ಟ್ರೋಲ್ ಗಳ ನಂತರ ಅಕ್ಷಯ್ ಇನ್ಮುಂದೆ ಇಂತಹ ಜಾಹಿರಾತು ಒಪ್ಪಲ್ಲ ಅಂತಲೂ ಹೇಳಿಕೊಂಡಿದ್ದರು.. ಇದೇ ರೀತಿ ಗುಟ್ಕಾ ಜಾಹಿರಾತಿನ ಆಫರ್ ನಮ್ಮ ಯಶ್ ಹಾಗೂ ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ಸಿಕ್ಕಿತ್ತು.. ಆಗ ಈ ಇಬ್ಬರೂ ನಟರೂ ಈ ಆಫರ್ ತಿರಸ್ಕರಿಸಿದ್ದರು.. ಆಗ ಈ ನಟರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿತ್ತು..
ಆದ್ರೀಗ ಯಶ್ ಅವರು ಪ್ರಮುಖ ಕೂಲ್ ಡ್ರಿಂಕ್ಸ್ ಪೆಪ್ಸಿ ಸಂಸ್ಥೆಯ ರಾಯಭಾರಿಯಾಗಿದ್ದು, ಪೆಪ್ಸಿ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಆರೋಗ್ಯಕ್ಕೆ ಹಾನಿಕಾರಕವಾಗಿರುವ ಉತ್ಪನ್ನಗಳನ್ನ ಪ್ರಮೋಟ್ ಮಾಡುವ ಸ್ಟಾರ್ ಗಳನ್ನ ನೆಟ್ಟಿಗರು ತರಾಟೆಗೆ ತೆಗೆದುಕೊಳ್ಳುವುದು ಸಹಜ.. ದುವೇ ಯಶ್ ಅವರ ಜೊತೆಗೂ ಆಗಿರೋದು..
ಪೆಪ್ಸಿ , ಸಾಫ್ಟ್ ಡ್ರಿಂಕ್ಸ್.. ಪೆಪ್ಸಿ ಆರೋಗ್ಯಕ್ಕೆ ಅಷ್ಟು ಉತ್ತಮವಲ್ಲ ಎಂಬುದು ಅನೇಕರ ಅಭಿಪ್ರಾಯ. ಇಂತಹ ಉತ್ಪನ್ನಗಳನ್ನು ಪ್ರಮೋಟ್ ಮಾಡುತ್ತಿರುವುದಕ್ಕೆ ಯಶ್ ಈಗ ಟ್ರೋಲ್ ಆಗಿದ್ದಾರೆ.
ಇನ್ ಸ್ಟಾಗ್ರಾಮ್ ನಲ್ಲಿ ಮಂಗಳವಾರ ಪೆಪ್ಸಿ ಜಾಹಿರಾತಿನ ವಿಡಿಯೋವನ್ನ ಯಶ್ ಶೇರ್ ಮಾಡಿಕೊಂಡಿದ್ದರು.. ಪೆಪ್ಸಿ ಪಾನೀಯ ಬ್ರಾಂಡ್ ನೊಂದಿಗೆ ತನ್ನ ಸಂಬಂಧವನ್ನು ಘೋಷಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದರು..
ವೀಡಿಯೊದಲ್ಲಿ ಯಶ್-ಪೆಪ್ಸಿ ಟಿ-ಶರ್ಟ್ ಧರಿಸಿದ್ದು , ಪಾನೀಯದ ಬಾಟಲಿಯನ್ನು ನೋಡುತ್ತಿರುತ್ತಾರೆ “ಅಭಿನಂದನೆಗಳು ಪೆಪ್ಸಿ. ಐ ಲವ್ ಯು” ಎಂದು ಯಶ್ ಅವರು ಪೆಪ್ಸಿಯ ಸಿಪ್ ತೆಗೆದುಕೊಂಡು ಫ್ಲೈಯಿಂಗ್ ಕಿಸ್ ನೀಡಿದ್ದರು. ”
Yash is now pepsi company’s brand embasidor , being trolled by netizens