yash – radhika
ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ರಾಧಿಕಾ ಹಾಗೂ ರಾಕಿಂಗ್ ಸ್ಟಾರ್ ಯಶ್ ದಂಪತಿ ಕಡಲ ತೀರದಲ್ಲಿ ತಮ್ಮ ಮುದ್ದು ಮಕ್ಕಳು ಹಾಗೂ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆಗೆ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. ಸದ್ಯ ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಕೆ ಜಿ ಎಫ್ 2 ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಯಶ್ ಕುಟುಂಬಕ್ಕಾಗಿ ಬಿಡುವು ಮಾಡಿಕೊಂಡು ಮಕ್ಕಳ ಜೊತೆಗೆ ಸಖತ್ ಎಂಜಾಯ್ ಮಾಡಿದ್ದಾರೆ.
ಅಂದ್ಹಾಗೆ ಯಶ್ ದಂಪತಿಯ ಮುದ್ದು ಮಗ ಯಥರ್ವ್ ಇತ್ತೀಚೆಗಷ್ಟೇ ಒಂದು ವರ್ಷ ತುಂಬಿದೆ. ಕೊರೊನಾ ಸಮಯವಾದ ಹಿನ್ನೆಲೆ ಅತ್ಯಂತ ಸರಳವಾಗಿ ಹುಟ್ಟು ಹಬ್ಬ ಆಚರಣೆ ಮಾಡಿದ್ದ ಯಶ್ ದಂಪತಿ ಇದೀಗ ಸಮುದ್ರದ ನಡುವೆ ಅದ್ಧೂರಿಯಾಗಿ ಮಗನ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರೆ. ಯಶ್ ಹಾಗೂ ರಾಧಿಕಾ ಪರಿವಾರದವರು ಆಪ್ತ ಸ್ನೇಹಿತರು ಸಂಭ್ರಮದಲ್ಲಿ ಭಾಗಿಯಾಗಿದ್ರು. ಯಶ್ ಹಾಗೂ ರಾಧಿಕಾ ತಮ್ಮ ಪುತ್ರನ ಹುಟ್ಟುಹಬ್ಬವನ್ನು ಗೋವಾದಲ್ಲಿ ಸಮುದ್ರದ ಮಧ್ಯೆ ಬಹಳಾ ಅದ್ಧೂರಿಯಾಗಿ ಆಚರಿಸಿದ್ದಾರೆ. ಮಗನ ಹುಟ್ಟುಹಬ್ಬ ಆಚರಣೆಯ ಸಂತಸದ ಕ್ಷಣಗಳ ವಿಡಿಯೋವನ್ನು ರಾಧಿಕಾ ಪಂಡಿತ್ ಇನ್ಸ್ಟಾಗ್ರಾಂ ಹಂಚಿಕೊಂಡಿದ್ದಾರೆ. ಈ ಮುದ್ದಾದ ಫ್ಯಾಮಿಲಿ ಖುಷಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಯಥರ್ವ್ ಗೆ ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಮುದ್ದಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ರಾರಾಜಿಸುತ್ತಿದೆ. ಗೋವಾದಲ್ಲಿ ಐಶಾರಾಮಿ ದೋಣಿಯಲ್ಲಿ ಯಶ್-ರಾಧಿಕಾ ಮಗನ ಹುಟ್ಟುಹಬ್ಬ ಆಚರಿಸಲಾಗಿದೆ. ಇನ್ನೂ ಯಥರ್ವ ಅಪ್ಪ-ಅಮ್ಮನಿಗೆ ಕೇಕ್ ತಿನ್ನಿಸಿ ಸಂಭ್ರಮಿಸಿದ್ದಾನೆ. ಈ ವಿಡಿಯೋ ಅಭಿಮಾನಿಗಳ ಮನಗೆದ್ದಿದೆ. ಇನ್ನೂ ರಾಧಿಕಾ ವಿಡಿಯೋ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಸಾವಿರಾರು ಲೈಕ್ಸ್ ಕಮೆಂಟ್ ಗಳನ್ನ ಗಿಟ್ಟಿಸಿಕೊಂಡಿದೆ ಯಥರ್ವನ ಬರ್ತ್ ಡೇ ಸೆಲೆಬ್ರೇಷನ್ ವಿಡಿಯೋ.
ರಾಧಿಕಾ ವಿಡಿಯೋ ಶೇರ್ ಮಾಡುವ ಜೊತೆಗೆ , ಮನಸ್ಸಿಗೆ ನಾಟುವ ಭಾವುಕ ಸಾಲುಗಳನ್ನ ಅಡಿಬರವಾಗಿ ಕೊಟ್ಟಿದ್ದಾರೆ. ‘ಕೇಕ್ನ ರುಚಿ ನಿನಗೆ ಗೊತ್ತಾಗದೇ ಇರಬಹುದು, ಈ ದಿನದ ವಿಶೇಷತೆಯೂ ನಿನಗೆ ತಿಳಿಯದೇ ಇರಬಹುದು, ಆದರೆ ಪೋಷಕರಾಗಿ ನಮಗೆ ಇದು ನಮ್ಮ ಜೀವನ ಪರ್ಯಂತ ಉಳಿಯುವ ದಿನ’ ಎಂದು ಎಂದು ಬರೆದುಕೊಂಡಿದ್ದಾರೆ.
yash – radhika
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel