ಹೊಸ ಮನೆ ಗೃಹಪ್ರವೇಶ ನೆರವೇರಿಸಿದ ರಾಕಿಂಗ್ ಸ್ಟಾರ್ ದಂಪತಿ ..!
ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಹೊಸ ಮನೆಯ ಗೃಹಪ್ರವೇಶವನ್ನ ಸರಳವಾಗಿ ಜುಲೈ 1ರಂದು ನೆರವೇರಿಸಿದ್ದಾರೆ.. ತಮ್ಮ ಕನಸಸಿನ ಮನೆಯ ಫೋಟೋಗಳನ್ನ ಸಾಮಾಇಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.. ಸಾಂಪ್ರದಾಯಿಕ ಉಡುಗೆ ತೊಟ್ಟು ರಾಂಕಿಂಗ್ ದಂಪತಿ ಮಿಂಚಿದ್ದಾರೆ.. ಹೋಮ ಪೂಜಾ ಪುನಸ್ಕಾರದೊಂದಿಗೆ ಗೃಹಪ್ರವೇಶ ಮಾಡಿದ್ದಾರೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ನಲ್ಲಿ ಮನೆ ಖರೀದಿಸಿದ್ದು, ಅನೇಕ ತಿಂಗಳಿಂದ ಮನೆಯ ಇಂಟಿರಿಯರ್ ಡಿಸೈನ್ ಕೆಲಸ ನಡೆಯುತ್ತಿತ್ತು. ಇದೀಗ ಮನೆಯ ಕೆಲಸ ಪೂರ್ಣಗೊಂಡಿದ್ದು, ಯಶ್ ಮತ್ತು ರಾಧಿಕಾ ದಂಪತಿ ಇಂದು ಕನಸಿನ ಮನೆಗೆ ಪ್ರವೇಶ ಮಾಡಿದ್ದಾರೆ.
ಇನ್ನೂ ಗೃಹ ಪ್ರವೇಶ ಸರಳವಾಗಿ ನಡೆದ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಕುಟುಂಬದವರು ಮತ್ತು ತೀರ ಆಪ್ತರು ಮಾತ್ರ ಭಾಗಿಯಾಗಿದ್ದರು. ಅಂದಹಾಗೆ ಇದೇ ಅಪಾರ್ಟ್ಮೆಂಟ್ ನಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಮನೆ ಕೂಡ ಇದೆ. ಅಂಬರೀಶ್ ಮನೆ ಸಮೀಪದಲ್ಲೇ ಯಶ್ ಕೂಡ ಮನೆ ಖರೀದಿ ಮಾಡಿದ್ದಾರೆ. ಸಿನಿಮಾ ವಿಚಾರಕ್ಕೆ ಬಂದ್ರೆ ಯಶ್ ಅವರ ಬಹುನಿರೀಕ್ಷಿತ ಕೆಜಿಎಫ್-2 ಸಿನಿಮಾ ಬಿಡುಗಡೆಗೆಯಾಗಬೇಕಿದೆ.. ಜುಲೈ 16 ಕ್ಕೆ ಸಿನಿಮಾ ರಿಲೀಸ್ ಆಗಬೇಕಿತ್ತು.. ಕೊರೊನಾ ಲಾಕ್ ಡೌನ್ ನಿಂದಾಗಿ ತಡವಾಗ್ತಿದೆ..








