ತಮಿಳಿನ ಸ್ಟಾರ್ ನಟನ ಜೊತೆಗೆ ತೆರೆಹಂಚಿಕೊಳ್ಳಲಿದ್ದಾರೆ ರಶ್ಮಿಕಾ
ಮುಂಬೈ: ಕನ್ನಡದ ಕಿರಿತ ಪಾರ್ಟಿ ಸಿನಿಮಾ ಮೂಲಕ ಫೇಮ್ ಪಡೆದು ನ್ಯಾಷನಲ್ ಕ್ರಷ್ ಆಗಿ ಗುರುತಿಸಿಕೊಂಡ ರಶ್ಮಿಕಾ ಟಾಲಿವುಡ್ ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆಗೆ ತೆರೆಹಂಚಿಕೊಂಡು , ತಮಿಳುನಲ್ಲಿಯೂ ನಟಿಸಿ ಇದೀಗ ಬಾಲಿವುಡ್ ಗೆ ಹಾರಿದ್ದಾರೆ.. ಬಾಲಿವುಡ್ ನಲ್ಲಿ ತಮ್ಮ 2ನೇ ಸಿನಿಮಾ , ಅಮಿತಾಬ್ ಬಚ್ಚನ್ ಅವರೊಂದಿಗೆ ನಟಿಸುತ್ತಿದ್ದಾರೆ.. ರಶ್ಮಿಕಾ ನಟನೆಯ ಹೊರತಾಗಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗಳ ಮೂಲಕವೇ ಸಖತ್ ಚರ್ಚೆಯಲ್ಲಿಯಲ್ಲಿರುವ ನಟಿ ಅಂತ ಹೇಳ್ಬೋದು.. ಯಾವುದಾದರೂ ಒಂದು ವಿಚಾರದಲ್ಲಿ ಸುದ್ದಿಯಲ್ಲಿಯೇ ಇರುತ್ತಾರೆ..
ಆದ್ರೆ ರಶ್ಮಿಕಾ ಇದೀಗ ಮತ್ತೊಮ್ಮೆ ತಮಿಳಿನಲ್ಲಿ ಸಿನಿಮ ಮಾಡಲಿದ್ದಾರೆ.. ಅದು ಕೂಡ ಸ್ಟಾರ್ ನಟನ ಜೊತೆಗೆ ಅನ್ನೋ ಸುದ್ದಿ ಬಾರೀ ಚರ್ಚೆಯಾಗ್ತಿದೆ.. ಹೌದು ಖ್ಯಾತ ನಟ ವಿಜಯ್ ಜೊತೆಗೆ ರಶ್ಮಿಕಾ ತೆರೆಹಂಚಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.. ಖುದ್ದು ರಶ್ಮಿಕಾ ಅವರೇ ಇದರ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ರಶ್ಮಿಕಾ ಮಂದಣ್ಣ ಆಗಾಗ ಅಭಿಮಾನಿಗಳ ಜೊತೆಗೆ ಸಂವಾದ ನಡೆಸುತ್ತಿರುತ್ತಾರೆ. ಇತ್ತೀಚೆಗೆ ಅಭಿಮಾನಿಯೊಬ್ಬರು ನೀವು ವಿಜಯ್ ಜೊತೆ ಯಾವಾಗ ನಟಿಸುತ್ತೀರಿ ಎಂದು ಕೇಳಿದ್ದಾನೆ. ಇದಕ್ಕೆ ಉತ್ತರಿಸಿರುವ ರಶ್ಮಿಕಾ. ಯಾವುದೇ ಅನುಮಾನವಿಲ್ಲದೆ ಶೀಘ್ರದಲ್ಲಿ ಎಂದು ಉತ್ತರಿಸಿದ್ದಾರೆ.
ಮೂಲಗಳ ಪ್ರಕಾರ ರಶ್ಮಿಕಾ ಈಗಾಗಲೇ ವಿಜಯ್ ಜೊತೆ ಸಿನಿಮಾದಲ್ಲಿ ನಟಿಸಲು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.. ಆದರೆ ಅಧಿಕೃತವಾಗಿ ಇನ್ನೂ ಘೋಷಣೆಯಾಗಿಲ್ಲ. ವಿಜಯ್ ಪ್ರಸ್ತುತ ‘ಬೀಸ್ಟ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಇದೇ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿ ಆಗಲಿದ್ದಾರೆ ಎನ್ನಲಾಗುತ್ತಿದೆ.