KGF 2 : ಉಡುಪಿ ಕೃಷ್ಣ ಮಠಕ್ಕೆ ಭೇಟಿ ಯಶ್ ಭೇಟಿ
ಭಾರತದ ಬಹುನಿರೀಕ್ಷಿತ ಸಿನಿಮಾವಗಿರು ಕೆಜಿಎಫ್ 2 ಏಪ್ರಿಲ್ 14 ಕ್ಕೆ ರಿಲೀಸ್ ಆಗಿಲಿದೆ… ಸಿನಿಮಾತಂಡ ಶೀಘ್ರವೇ ಪ್ರಚಾರವನ್ನೂ ಆರಂಭಿಸಲಿದೆ… ಆದ್ರೆ ಇದ್ರ ಮಧ್ಯೆ ಸಿನಿಮಾತಂಡವು ಟೆಂಪಲ್ ರನ್ ಶುರು ಮಾಡಿದೆ.. ಇತ್ತೀಚೆಗಷ್ಟೇ ಆನೆಕಲ್ಲು ಗುಡ್ಡಕ್ಕೆ ಭೇಟಿ ನೀಡಿದ್ದರು ಕೆಜಿಎಫ್ ಟೀಮ್..
ಈಗ ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣರ ದರ್ಶನ ಪಡೆದುಕೊಂಡಿದ್ದಾರೆ. ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣ ದರ್ಶನ ಪಡೆದಿದ್ದಾರೆ.. ಇದೇ ವೇಳೆ ಯಶ್ ಜೊತೆಗೆ ಸಿನಿಮಾದ ನಿರ್ಮಾಪಕ ವಿಜಯ್ ಕಿರಂಗದೂರು ಅವರು ಸಹ ಆಗಮಿಸಿದ್ದರು..
ಕೆಜಿಎಫ್ 2 ರಿಲೀಸ್ ಗೂ ಮುನ್ನ ದೇಗುಲಗಳಿಗೆ ಭೇಟಿ ನೀಡುತ್ತಿದೆ ಸಿನಿಮಾ ತಂಡ.. ಅಂದ್ಹಾಗೆ ಇದಕ್ಕೂ ಮುನ್ನ ಕೊಲ್ಲೂರು ಕುಂಬಾಶಿ ದೇವಸ್ಥಾನಗಳಿಗೆ ಯಶ್ ಅಂಡ್ ಟೀಮ್ ಭೇಟಿ ನೀಡಿತ್ತು..