‘ರಾಕಿ ಭಾಯ್’ ಮುಂದಿನ ಸಿನಿಮಾ ಯಾವುದು , ನಿರ್ದೇಶಕ ಯಾರು ಗೊತ್ತಾ..?
ಕೆಜಿಎಫ್ ಸಿನಿಮಾ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಪರಭಾಷೆಗಳಲ್ಲೂ ತಮ್ಮ ಹವಾ ಸೃಷ್ಟಿ ಮಾಡಿರೋ ರಾಕಿಂಗ್ ಸ್ಟಾರ್ ಯಶ್ ಸದ್ಯ ಭಾರತದ ಟಾಪ್ ಸ್ಟಾರ್ ಆಗಿದ್ದಾರೆ.. ಅವರ ಅಭಿನಯದ ಕೆಜಿಎಫ್ 2 ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತ ಅಭಿಮಾನಿಗಳು ಜಾತಕ ಪಕ್ಷಿಗಳಂತೆ ಕಾಯ್ತಾಯಿದ್ದಾರೆ..
ಅಲ್ಲದೇ ಕೆಜಿಎಫ್ 2 ಸಿನಿಮಾದ ಶೂಟಿಂಗ್ ಮುಗಿಸಿರುವ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು ನಿರ್ದೇಶಕರು ಯಾರು ಎಂಬ ಚರ್ಚೆಗಳು ಜೋರಾಗಿವೆ.. ಹೊಂಬಾಲೆ ಫಿಲಮ್ಸ್ ಜೊತೆಯೇ ಮತ್ತೊಂದು ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಮಾಡಲಿದ್ದಾರಾ ರಾಖಿ ಭಾಯ್ ಹೀಗೆ ಇನ್ನೂ ಸಾಕಷ್ಟು ಚರ್ಚೆಗಳಾಗ್ತಿವೆ.. ಈ ನಡುವೆ ಯಶ್ ಮುಂದಿನ ಪ್ರಾಜೆಕ್ಟ್ ಬಗ್ಗೆ ಸಣ್ಣ ಸುಳಿವು ಸಿಕ್ಕಿದೆ..
ಅದೇನೆಂದ್ರೆ ಈಗ ಸ್ಟಾರ್ ಡೈರೆಕ್ಟರ್ , ಮಾಸ್ ಸಿನಿಮಾಗಳ ಕಿಂಗ್ ಮೇಕರ್ ಬೊಯಪಾಟಿ ಶ್ರೀನು ಜೊತೆಗೆ ಸಿನಿಮಾ ಮಾಡಲಿದ್ದಾರೆ ಅನ್ನೋದು. ಹೌದು… ಹಿಟ್ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಬೋಯಪಾಟಿ ಶ್ರೀನು ನಿರ್ದೇಶನದ ಮುಂದಿನ ಸಿನಿಮಾಗೆ ನಮ್ಮ ರಾಕಿ ಭಾಯ್ ಹೀರೋ ಎನ್ನಲಾಗ್ತಿದೆ..
ಅಶ್ಲೀಲ ವಿಡಿಯೋ ಕೇಸ್ – ಪತಿಯ ಕಾನೂನು ಬಾಹಿರ ಚಟುವಟಿಗಳಲ್ಲಿ ಶಿಲ್ಪಾ ಶೆಟ್ಟಿ ಪಾಲಿದ್ಯಾ..?
ಸರೈನೋಡು , ಸಿಂಹ, ಭದ್ರ, ದಮ್ಮು ಅಂಥಹಾ ಸಾಕಷ್ಟು ಮಾಸ್ ಸಿನಿಮಾಗಳಿಗೆ ಶ್ರೀನು ಆಕ್ಷನ್ ಕಟ್ ಹೇಳಿದ್ದಾರೆ.. ಇದೀಗ ಮಾಸ್ ಆಗಿಯೇ ಗುರುತಿಸಿಕೊಂಡು ರಾಕಿಂಗ್ ಸ್ಟಾರ್ ಆಗಿರುವ ಯಶ್ ಗಾಗಿಯೂ ಪಕ್ಕಾ ಮಾಸ್ ಕಥೆಯೊಂದನ್ನ ರೆಡಿ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ..
ಅಂದ್ಹಾಗೆ ಶ್ರೀನು ಸಿನಿಮಾಗೆ ಮೊದಲಿಗೆ ಅಲ್ಲು ಅರ್ಜುನ್, ಸೂರ್ಯ ನಾಯಕರಾಗಲಿದ್ದಾರೆ ಎನ್ನಲಾಗ್ತಿತ್ತು.. ಆದ್ರೆ ಅಂತಿಮವಾಗಿ ಯಶ್ ಹೆಸರು ಫೈನಲ್ ಆಗಿದೆ ಎಂದು ಹೇಳಲಾಗ್ತಿದೆ. ಆದ್ರೆ ಅಧಿಕೃತವಾಗಿ ಘೋಷಣೆಯಾಗಿಲ್ಲ.. ಇನ್ನೂ ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿರಲಿದೆ ಅನ್ನೋದನ್ನ ಹೇಳೋದೆ ಬೇಡ.. ರಾಖಿ ಬಾಯ್ ಖದರ್ ಗೆ ಯಶ್ ಅಳೆದು ತೂಗಿ ತಮ್ಮ ಿಮೇಜ್ ಗೆ ತಕ್ಕಂತಹ ಸಿನಿಮಾಗಳನ್ನ ಆಯ್ಕೆ ಮಾಡಬೇಕಾಗಿದೆ.. ಸದ್ಯಕ್ಕೆ ಶ್ರೀನು ನಂದಮೂರಿ ಬಾಲಕೃಷ್ಣ ನಟನೆಯ ಅಖಂಡ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ..
ಇನ್ನೂ ಈ ಸುದ್ದಿ ನಿಜವೇ ಆದಲ್ಲಿ ಕೆಜಿಎಫ್ 2 ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆಯಾಗಿ ನಿರಾಸೆಯಲ್ಲಿರುವ ಅಭಿಮಾನಿಗಳಿಗೆ ಖುಷಿ ಸುದ್ದಿ ಸಿಕ್ಕಂತಾಗುತ್ತೆ.. ಕೊರೊನಾ ಇರದೇ ಇದ್ದಿದ್ದರೆ ಇಷ್ಟೊತ್ತಿಗಾಗ್ಲೇ (ಜುಲೈ 16ಕ್ಕೆ) ಸಿನಿಮಾ ರಿಲೀಸ್ ಆಗಿ ಧೂಳೆಬ್ಬಿಸಬೇಕಾಗಿತ್ತು..