ನರ್ತನ್ ಜೊತೆಗೆ ಯಶ್ ಸಿನಿಮಾ ಹೌದಾ..??? ಇಲ್ವಾ..???
ರಾಕಿಂಗ್ ಸ್ಟಾರ್ ಯಶ್ ಅವರು KGF 2 ನಂತರ ಯಾವ ಸಿನಿಮಾ ಮಾಡ್ತಾರೆ ಅಂತ ಅಭಿಮಾನಿಗಳು ಕಾದು ಕುಳಿತಿದ್ದಾಗ್ಲೇ ಅವರ ಬರ್ತ್ ಡೇ ಅಂದ್ರೆ ಜನವರಿ 8 ಕ್ಕೆ ಒಂದು ಸುದ್ದಿ ಭಾರೀ ವೈರಲ್ ಆಗಿತ್ತು.. ‘ಮಫ್ತಿ’ ಖ್ಯಾತಿಯ ನರ್ತನ್ ಜೊತೆಗೆ ಯಶ್ ಮುಂದಿನ ಸಿನಿಮಾ ಮಾಡಲಿದ್ದಾರೆ ಅನ್ನೋ ಸುದ್ದಿ ರಾಕೆಟ್ ವೇಗದಲ್ಲಿ ಹಬ್ಬಿತ್ತು.. ನತರ್ನ್ ಅವರ ಟ್ವಿಟ್ಟರ್ ಖಾತೆಯಿಂದಲೇ ಇಂತಹದೊಂದು ಸುದ್ದಿ ಹೊರಬಿದ್ದಿದ್ದು ನೋಡಿ ಅಭಿಮಾನಿಗಳಂತು ಸಖತ್ ಥ್ರಿಲ್ ಆಗಿದ್ರು..
ಅಸಲಿಗೆ ಈ ಸುದ್ದಿ ಫೇಕ್ ,,, ಈ ಟ್ವೀಟ್ ಫೇಕ್ ಇಂತಹ ಸುದ್ದಿ ಹಬ್ಬಿಸಿರುವ ಖಾತೆಯೂ ಕೂಡ ನಕಲಿ ಎಂಬ ವಿಚಾರ ಇದೀಗ ಬಯಲಾಗಿದೆ.. ಖುದ್ದು ನರ್ತನ್ ಈ ಸುದ್ದಿ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.. ನರ್ತನ್ ಹೆಸರಿನಲ್ಲಿ ಯಶ್ 19ನೇ ಸಿನಿಮಾ ಬಗ್ಗೆ ಟ್ವೀಟ್ ಮಾಡಲಾಗಿತ್ತು. ಇದು ಸ್ವತ: ನರ್ತನ್ ಅವರೇ ಟ್ವೀಟ್ ಮಾಡಿದ್ದಾರೆ ಎಂದು ಎಲ್ಲರೂ ನಂಬಿದ್ದರು. ಈ ಖಾತೆ ನಕಲಿ ಎಂಬ ಅನುಮಾನವೂ ಬಂದಿರಲಿಲ್ಲ ಕಾರಣ ಟ್ವಿಟರ್ ಖಾತೆಯಲ್ಲಿ ಅಫಿಷಿಯಲ್ ಎಂದು ಬರೆಯಲಾಗಿತ್ತು. ಇನ್ನೊಂದು ಕಡೆ ಸ್ವತ: ರೋರಿಂಗ್ ಶ್ರೀ ಮುರಳಿ ಇದೇ ಟ್ವೀಟ್ ಗೆ ರಿಪ್ಲೈ ಮಾಡಿದ್ದರು. ನರ್ತನ್ ಹಾಗೂ ಯಶ್ ಗೆ ಶುಭಾಶಯಗಳನ್ನು ತಿಳಿಸಿದ್ದರು. ಹೀಗಾಗಿ ಅಭಿಮಾನಿಗಳು ಸೇರಿದಂತೆ ಎಲ್ಲರೂ ಇದು ನಿಜವಾದ ಟ್ವೀಟ್ ಎಂದು ನಂಬಿದ್ದರು.
ಆದ್ರೀಗ, ಸ್ವತ: ನಿರ್ದೇಶಕ ನರ್ತನ್ ಇದು ನಕಲಿ ಟ್ವೀಟ್ ಎಂದು ಸ್ಪಷ್ಪಪಡಿಸಿದ್ದಾರೆ. ಮಾಧ್ಯಮವೊಂದರ ಜೊತೆಗೆ ಮಾತನಾಡುವಾಗ ಈ ಸುದ್ದಿ ಸುಳ್ಳು ಎಂದು ಅವರೇ ಹೇಳಿರುವುದಾಗಿ ವರದಿಯಾಗಿದೆ.. ಯಾರೋ ನನ್ನ ಹೆಸರಲ್ಲಿ ನಕಲಿ ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್ ಖಾತೆಯನ್ನ ತೆರೆದಿದ್ದಾರೆ.. ಈ ಖಾತೆ ಮೂಲಕ ಯಶ್ ಹುಟ್ಟುಹಬ್ಬದ ದಿನದಂದು ಇಂತಹದೊಂದು ಸುಳ್ಳು ಸುದ್ದಿ ಹಬ್ಬಿದ್ದಾರೆ.. ಇದು ನನ್ನ ಖಾತೆಯಲ್ಲ.. ನಾನು ಟ್ವಿಟ್ಟರ್ , ಇನ್ಸ್ಟಾಗ್ರಾಮ್ , ಸೋಷಿಯಲ್ ಮೀಡಿಯಾದಲ್ಲಿಲ್ಲ.. ಹೀಗಾಗಿ ಯಾವುದನ್ನೂ ನಂಬಬೇಡಿ ಎಂದಿದ್ದಾರೆ..