Yashoda: ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಮೋಡಿ ಮಾಡಿದ ಸಮಂತಾ..
ಇತ್ತೀಚೆಗೆ ಮಹಿಳಾ ಪ್ರಧಾನ ಸಿನಿಮಾಗಳತ್ತ, ಅದರಲ್ಲೂ ಸಾಹಸಮಯ ಚಿತ್ರಗಳತ್ತ ನಟಿ ಮಣಿಯರು ಒಲವು ತೋರಿಸುತ್ತಿದ್ದಾರೆ . ಈ ಸಾಲಿಗೆ ಇದೀಗ ಸಮಂತ ನಟನೆಯ ಯಶೋಧ ಚಿತ್ರ ಸಹ ಸೇರಿದೆ. ಸಮಂತಾ ನಟನೆಯ ಸಸ್ಪೆನ್ಸ್ ಆಕ್ಷನ್ ಥ್ರಿಲ್ಲರ್ , ಪ್ಯಾನ್ ಇಂಡಿಯಾ ಸಿನಿಮಾ ಯಶೋಧ ಇಂದು ( ನವೆಂಬರ್ 11 ) ದೇಶಾದ್ಯಂತ ರಿಲೀಸ್ ಆಗಿದೆ.
ನೈಜ ಘಟನೆಗಳಿಂದ ಪ್ರೇರಿತವಾಗಿ ಬಾಡಿಗೆ ತಾಯ್ತನ ಅಥವಾ ಸರೋಗಸಿ ಕರಾಳ ದಂಧೆಯ ಬಗ್ಗೆ ಚಿತ್ರ ಕಥೆಯನ್ನ ಯಶೋಧ ಹೊಂದಿದೆ.
ಮೊದಲ ದಿನ ಚಿತ್ರ ನೋಡಿದ ಸಿನಿ ಪ್ರೇಮಿಗಳು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದು ಚಿತ್ರಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಸಿನಿಮಾ ರಹಸ್ಯಮಯವಾಗಿದ್ದು , ಆಕ್ಷನ್ ಥ್ರಿಲ್ಲರ್ ಎಂಬ ವಿಮರ್ಶೆ ವ್ಯಕ್ತವಾಗ್ತಿದೆ.
ಉನ್ನಿ ಮುಕುಂದನ್ ಮತ್ತು ವರಲಕ್ಷ್ಮಿ ಶರತ್ ಕುಮಾರ್ ನೆಗೆಟಿವ್ ಶೇಡ್ ಗಳಲ್ಲಿ ಮಿಂಚಿದ್ದಾರೆ.. ಅದ್ರಲ್ಲೂ ವರಲಕ್ಷ್ಮಿ ಪಾತ್ರಕ್ಕೆ ಹೆಚ್ಚು ಮೆಚ್ಚುಗೆ ವ್ಯಕ್ತವಾಗ್ತಿದೆ.. ಸಿನಿಮಾ ಒಟ್ಟಾರೆಯಾಗಿ ಥ್ರಿಲ್ಲಿಂಗ್ ಆಗಿದ್ದು , ಒಳ್ಳೆಯ ವಿಮರ್ಶೆಗಳನ್ನ ಪಡೆತಯುತ್ತಾ ಮುಂದೆ ಸಾಗಿದೆ.. ಮೊದಲನೇ ದಿನದ ಕಲೆಕ್ಷನ್ ನಂತರ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ.
Yashoda: Samantha charmed in action thriller movie