ಸಮಂತಾ ಆಭಿನಯದ “ಯಶೋಧ” ಫಸ್ಟ್ ಲುಕ್ ರಿಲೀಸ್ – ಕುತೂಹಲ ಹೆಚ್ಚಿಸಿದ ಟೀಸರ್
ಸಮಂತಾ ರುತು ಪ್ರಭು ಅಭಿನಯದ ಮುಂಬರುವ ಥ್ರಿಲ್ಲರ್ ‘ಯಶೋದಾ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಯಾಗಿದೆ, ಈ ಚಿಕ್ಕ ಟೀಸರ್ ನಿಂದಲೇ ಈ ಸಿನಿಮಾ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಚಿತ್ರದ ಫಸ್ಟ್ ಲುಕ್ ಹೇಳುವಂತೆ ಯಾವುದೋ ತೊಂದರೆಯಲ್ಲಿ ಸಿಕ್ಕಿಬಿದ್ದಿರುವಂತೆ, ಹೊಸ ಪ್ರಪಂಚ ನೋಡಲು ಕಾತರಳಾಗಿರುವಂತೆ ತೋರುತ್ತಿದೆ.
ಹರಿ ಮತ್ತು ಹರೀಶ್ ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಇದು ಸಮಂತಾ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ. ಯಶೋದಾ ಚಿತ್ರದ ಟೀಸರ್ ಗುರುವಾರ ಅನಾವರಣಗೊಂಡಿದೆ. ಈ ಸಿನಿಮಾ ತೆಲಗು ಭಾಷೆಯಲ್ಲಿ ಚಿತ್ರೀಕರಣಗೊಂಡಿದ್ದು ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಯಾಗಲಿದೆ.
“ನಮ್ಮ ಯಶೋದಾ ಚಿತ್ರದ ಫಸ್ಟ್ ಲುಕ್ ಅನ್ನ ನಿಮಗೆ ಪ್ರಸ್ತುತಪಡಿಸಲು ತುಂಬಾ ಉತ್ಸುಕನಾಗಿದ್ದೇನೆ.” ಎಂದು ಸಮಂತಾ ಟ್ವೀಟರ್ ನಲ್ಲಿ ಟೀಸರ್ ಹಂಚಿಕೊಂಡಿದ್ದಾರೆ. ಯಶೋದ ಚಿತ್ರ ಆಗಸ್ಟ್ 12 ರಂದು ತೆರೆಮೇಲೆ ಬರಲಿದೆ.