ಒಮ್ಮೆಯೂ ಡಕೌಟ್ ಆಗದ ಭಾರತದ ಏಕೈಕ ಆಟಗಾರ ಯಾರು..?
ನಾವು ಸಾಮಾನ್ಯವಾಗಿ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಬಾರಿ ಡಕೌಟ್ ಆದ ಆಟಗಾರನ ಬಗ್ಗೆ ಕೇಳಿರುತ್ತೇವೆ. ಆದ್ರೆ ನಾವಿಂದು ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಮ್ಮೆಯೂ ಡಕೌಟ್ ಆಗದ ಆಟಗಾರನನ್ನು ನಿಮಗೆ ಪರಿಚಯ ಮಾಡಿಕೊಡಲಿದ್ದೇವೆ.
ಏಕದಿನ ಕ್ರಿಕೆಟ್ ಮಾದರಿಯಲ್ಲಿ ಡಕೌಟ್ ಆಗದೇ ಕೆರಿಯರ್ ಮುಗಿಸಿದ ಆಟಗಾರರನ್ನು ನಾವು ತುಂಬಾ ಅಪರೂಪಕ್ಕೆ ನೋಡುತ್ತೇವೆ. ಆ ಸಾಲಿನಲ್ಲಿ ಭಾರತ ಮಾಜಿ ಕ್ರಿಕೆಟರ್, 1983ರ ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದ ದಿವಂಗತ ಯಶ್ಪಾಲ್ ಶರ್ಮಾ ಒಬ್ಬರು..!
ಹೌದು..! ಭಾರತದ ಪರ 42 ಏಕದಿನ ಪಂದ್ಯಗಳನ್ನು ಆಡಿದ ಯಶ್ಪಾಲ್, 4 ಅರ್ಧಶತಕಗಳೊಂದಿಗೆ 28.48 ರ ಸರಾಸರಿಯಲ್ಲಿ 883 ರನ್ ಗಳಿಸಿದ್ದಾರೆ. ಆದ್ರೆ ಅವರು ಒಂದಂದ್ರೆ ಒಂದು ಬಾರಿ ಕೂಡ ಡಕೌಟ್ ಆಗಿಲ್ಲ. ತಮ್ಮ ಕ್ರಿಕೆಟ್ ಕೆರಿಯರ್ ನಲ್ಲಿ ಇಂಗ್ಲೆಂಡ್, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ, ಆಸ್ಟ್ರೇಲಿಯಾದ ದಿಗ್ಗಜ ಬೌಲರ್ ಗಳನ್ನು ಎದುರಿಸಿದ್ದು, ಒಮ್ಮೆಯೂ ಶೂನ್ಯಕ್ಕೆ ತಮ್ಮ ವಿಕೆಟ್ ಒಪ್ಪಿಸಿಲ್ಲ.
ಇನ್ನು ಹೀಗೆ ಡಕೌಟ್ ಆಗದೇ 40ಕ್ಕೂ ಹೆಚ್ಚು ಏಕದಿನ ಪಂದ್ಯಗಳನ್ನಾಡಿ ಕೆರಿಯರ್ ಮುಸಿದ ಕ್ರಿಕೆಟರ್ಸ್ ಒಂಡೇ ಚರಿತ್ರೆಯಲ್ಲಿ ಎಂಟು ಮಂದಿ ಮಾತ್ರ ಇದ್ದಾರೆ. ಇವರಲ್ಲಿ ಆಸೀಸ್ ಮಾಜಿ ಆಟಗಾರ ಕೆಪ್ಲರ್ ವೆಸೆಲ್ಸ್, 109 ಪಂದ್ಯಗಳಲ್ಲಿ ಒಂದೇ ಒಂದು ಬಾರಿ ಡಕೌಟ್ ಆಗಿಲ್ಲ.
ನಂತರದ ಸ್ಥಾನದಲ್ಲಿ ಸ್ಕಾಟ್ಲೆಂಡ್‍ನ ಮ್ಯಾಥ್ಯೂ ಸ್ಕಾಟ್, ಆಸೀಸ್ ನ ಮತ್ತೊರ್ವ ಆಟಗಾರ ನಾಥನ್ ಹೊರಿಟ್ಜ್, ಪಾಕಿಸ್ತಾನದ ವಾಸಿಮ್ ಬ್ಯಾರಿ, ದಕ್ಷಿಣ ಆಫ್ರಿಕಾದ ಜ್ಯಾಕ್ ರುಡಾಲ್ಫ್, ದಕ್ಷಿಣ ಆಫ್ರಿಕಾದ ಕ್ರಿಸ್ ಮೋರಿಸ್, ಶ್ರೀಲಂಕಾದ ಡಿ ಡಿ ಸಿಲ್ವಾ, ದಕ್ಷಿಣ ಆಫ್ರಿಕಾದ ಪೀಟರ್ ಕಸ್ರ್ಟನ್ ಮತ್ತು ಇಂಗ್ಲೆಂಡ್‍ನ ರಸ್ಸೆಲ್ ಇದ್ದಾರೆ.
ಆದರೆ, ಈ ಅಪರೂಪದ ಸಾಧನೆ ಮಾಡಿದ ಏಕೈಕ ಭಾರತೀಯ ಆಟಗಾರ ಯಶ್ಪಾಲ್ ಶರ್ಮಾ ಅವರು ಮಾತ್ರ…!
1978 ರಲ್ಲಿ ಪಾಕಿಸ್ತಾನ ವಿರುದ್ಧದ ಏಕದಿನ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಯಶ್ಪಾಲ್, 1983 ರ ವಿಶ್ವಕಪ್ ಗೆದ್ದ ಭಾರತೀಯ ತಂಡದ ಸದಸ್ಯರಾಗಿದ್ದರು. ತಲೆಗೆ ಪೆಟ್ಟು ಬಿದ್ದು 1985 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು.