ಬಿಎಸ್ ವೈ ನೇತೃತ್ವದ ಸರ್ಕಾರದ ವಿರುದ್ಧ ಭೀಷ್ಮ ಪ್ರತಿಜ್ಞೆ ಮಾಡಿದ ಯತ್ನಾಳ್..!
ತುಮಕೂರು: ಸ್ವಪಕ್ಷದ ವಿರುದ್ಧವೇ ಹೇಳಿಕೆಗಳನ್ನ ನೀಡುತ್ತಾ ಸದಾ ಸುದ್ದಿಯಲ್ಲಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮತ್ತೊಮ್ಮೆ ಬಿಎಸ್ ವೈ ನೇತೃತ್ವದ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೇ ಪ್ರತಿಜ್ಞೆ ಒಂದನ್ನ ಮಾಡಿದ್ದಾರೆ.
ಹೌದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ನಾನು ಮಂತ್ರಿಯಾಗಲ್ಲ ಎಂದು ಶಪತ ಮಾಡಿದ್ದಾರೆ ಯತ್ನಾಳ್. ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿರೋ ಯತ್ನಾಳ್ ನನಗೆ ಡಿಸಿಎಂ ಮಾಡ್ತೀನಿ, ಇಂಧನ, ಜಲಸಂಪನ್ಮೂಲ ಇಲಾಖೆ ಕೊಡ್ತೀನಿ, ಗೃಹ, ಬೆಂಗಳೂರು ನಗರಾಭಿವೃದ್ಧಿ ಕೊಡ್ತೀನಿ ಎಂದರೂ ನಾನು ಬಿ.ಎಸ್.ವೈ ಸಂಪುಟದಲ್ಲಿ ಮಂತ್ರಿಯಾಗಲ್ಲ. ಇದು ನನ್ನ ಭೀಷ್ಮ ಪ್ರತಿಜ್ಞೆ ಎಂದು ಹೇಳಿದ್ದಾರೆ.