ಬೆಂಗಳೂರು: ಗಾಸಿಪ್ ಗಾಗಿಯೇ ನಾಲ್ಕು ಮನೆಗಳಿವ. ಬಿಜೆಪಿ ಕಚೇರಿ ಇರುವುದು ಪಕ್ಷ ಸಂಘಟನೆಗೆ ಮಾತ್ರ. ಅಲ್ಲಿ ಗಾಸಿಪ್ ನಡೆಯುವುದಿಲ್ಲ ಎಂದು ಶಾಸಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ತಿರುಗೇಟು ನೀಡಿದ್ದಾರೆ.
ಬಿಜೆಪಿ ಕಚೇರಿ ಗಾಸಿಪ್ ಕೇಂದ್ರ ಎಂಬ ರೇಣುಕಾಚಾರ್ಯ (Renukacharya) ಹೇಳಿಕೆಗೆ ಅವರು ತಿರುಗೇಟು ನೀಡಿದ್ದಾರೆ. ಮನೆಗಳಲ್ಲಿ ಗಾಸಿಪ್ ಸೃಷ್ಟಿ ಆಗ್ತಾವೆ ಅಲ್ಲ್ಯಾಕೆ ಹೋಗಿ ಗಾಸಿಪ್ ಮಾಡಬೇಕು? ಎಂದು ಹೇಳಿದ್ದಾರೆ.
ರೇಣುಕಾಚಾರ್ಯ ಪಕ್ಷ ಬಿಡ್ತಾರೆ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಪಕ್ಷ ಬಿಡೋದಿಲ್ಲ, ಯಾಕೋ ಅವರ ಮನಸ್ಸಿಗೆ ಬೇಜಾರಾಗಿದೆ. ಖಂಡಿತಾ ಒಳ್ಳೆಯ ದಿನ ಬರುತ್ತೆ. ಈಗ ಗಡಿಬಿಡಿ ಬೇಡ ಎಂದು ಹೇಳಿದ್ದಾರೆ.