yatnal
ನನ್ನ ಜೀವಮಾನದಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿ ಪಡೆಯಲ್ಲ ಎಂದಿದ್ದು ಯಾಕೆ ಯತ್ನಾಳ..!
ವಿಜಯಪುರ: ರಾಜಕೀಯ ಪ್ರಭಾವ, ಶಿಫಾರಸು ಆಧರಿಸಿ ನೀಡುವ ಇಂಥ ಗೌರವಗಳನ್ನು ನೀಡಿದರೂ ನನ್ನ ಜೀವಮಾನದಲ್ಲಿ ಎಂದೂ ಪಡೆಯವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿರುವ ಯತ್ನಾಳ ಅವರು ಇತ್ತೀಚೆಗೆ ಗೌರವ ಡಾಕ್ಟರೇಟ್, ಸಹಕಾರಿ ರತ್ನ ಪ್ರಶಸ್ತಿಗಳು ತಮ್ಮ ಮೌಲ್ಯ ಕಳೆದುಕೊಳ್ಳುತ್ತಿವೆ. ರಾಜಕೀಯ ಪ್ರಭಾವ, ಶಿಫಾರಸು ಆಧರಿಸಿ ನೀಡುವ ಇಂಥ ಗೌರವಗಳನ್ನು ನೀಡಿದರೂ ನನ್ನ ಜೀವಮಾನದಲ್ಲಿ ಎಂದೂ ಪಡೆಯವುದಿಲ್ಲ ಎಂದಿದ್ದಾರೆ.
ಗಮನಿಸಬೇಕಾದ ವಿಚಾರ ಅಂದ್ರೆ ಸಹಕಾರಿ ಇಲಾಖೆ ಭ್ರಷ್ಟಾಚಾರದ ಬಗ್ಗೆ ಸಚಿವ ಎಸ್.ಟಿ.ಸೋಮಶೇಖರ ಅವರ ಸಮ್ಮುಖದಲ್ಲೇ ಮಾತನಾಡಿದ್ದಾರೆ. ಸಹಕಾರಿ ವ್ಯವಸ್ಥೆ ಹಾಗೂ ಕಛೇರಿ ಕೂಡ ಭ್ರಷ್ಟಾಚಾರದ ಕೂಪಗಳಾಗುತ್ತಿವೆ. ಹೀಗಾಗಿ ಸಹಕಾರಿ ಕಾನೂನು ಹಾಗೂ ಆಡಳಿತ ಶೈಲಿಯಲ್ಲಿ ಅಮೂಲಾಗ್ರ ಬದಲಾವಣೆ ಅಗತ್ಯವಿದೆ. ದೇಶಕ್ಕೆ ಸಹಕಾರಿ ರಂಗದ ಮಾದರಿ ಎನಿಸಿರುವ ಕರ್ನಾಟಕ ಸಹಕಾರಿ ವ್ಯವಸ್ಥೆಯಲ್ಲಿ ಪಾರದರ್ಶಕ ಆಡಳಿತ ಬರಬೇಕಿದೆ ಎಂದಿದ್ದಾರೆ.
ಇದೇ ವೇಳೆ ಮಾತು ಮುಂದುವರೆಸಿರುವ ಯತ್ನಾಳ ಅವರು ಎಸ್.ಟಿ. ಸೋಮಶೇಖರ ರಾಜ್ಯದ ಪ್ರಾಮಾಣಿಕ ಸಚಿವರು. ಮೈಸೂರು ದಸರಾ ಉತ್ಸವದಲ್ಲಿ ಹಣ ಉಳಿಸಿ, ಸರ್ಕಾರಕ್ಕೆ ಮರಳಿಸಿದ ಮೊದಲ ಸಚಿವರು. ಇಂಥ ಪ್ರಾಮಾಣಿಕ ಸಚಿವರ ಕೈಯಲ್ಲಿರುವ ಸಹಕಾರಿ ವ್ಯವಸ್ಥೆಯಲ್ಲಿ ಬೇರುಬಿಟ್ಟಿರುವ ಲಂಚಬಾಕತನ ಕೊನೆಗಾಣಬೇಕಿದೆ. ಸಚಿವ ಸೋಮಶೇಖರ ಅವರು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ವಿಸ್ವಾಸವಿದೆ ಎಂದು ಹೇಳಿದ್ದಾರೆ.
ಶೀಘ್ರದಲ್ಲೇ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ..! : ರಾಜ್ಯ ಬಿಜೆಪಿ ಟ್ವೀಟ್, ಸಿಟಿ ರವಿ ಹೇಳಿದ್ದೇನು..?
ಒಟ್ನಲ್ಲಿ ಬಸನಗೌಡ ಪಾಟೀಲ್ ಯತ್ನಳ ಅವರು, ಸದಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಪಕ್ಷದವರ ವಿರುದ್ಧವೇ ಹರಿಹಾಯುತ್ತಾ, ವಿವಾದಾತ್ಮಕ ಹೆಳಿಕೆಗಳನ್ನ ನೀಡುತ್ತಾ ಚರ್ಚೆಯಲ್ಲಿರುವ ಯತ್ನಾಳ ಅವರು ಇದೀಗ ಸರ್ಕಾರ ನೀಡು ಗೌರವಾನ್ವಿತ ಪ್ರಶಸ್ತಿಗಳಲ್ಲು ರಾಜಕೀಯ ಪ್ರಭಾವವಿರುತ್ತೆ ಎಂದು ಪರೋಕ್ಷವಾಗಿ ಆರೋಪಿಸಿದ್ದಾರೆ.
yatnal
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








