ಪಂಚಮಸಾಲಿ ಸಮುದಾಯವನ್ನು 3ಬಿಗೆ ಸೇರಿಸಿದ್ದೇ ಯಡಿಯೂರಪ್ಪ : ಸಿ.ಸಿ.ಪಾಟೀಲ್
ಬೆಂಗಳೂರು : ಪಂಚಮಸಾಲಿ ಸಮುದಾಯವನ್ನು 3ಬಿಗೆ ಸೇರಿಸಿದ್ದೇ ಯಡಿಯೂರಪ್ಪ. ಹಾಗಾಗಿ ಈಗ 2ಎಗೆ ಸೇರಿಸಿ ಅಂತ ಕೇಳುವ ಅವಕಾಶ ಸಿಕ್ಕಿದೆ ಎಂದು ಸಚಿವ ಸಿ.ಸಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಪಂಚಮಸಾಲಿ ಮೀಸಲಾತಿ ಹೋರಾಟದ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಸಿ.ಪಾಟೀಲ್, ಈ ಹಿಂದೆ ಯಡಿಯೂರಪ್ಪನವೇ ಪಂಚಮಸಾಲಿ ಸಮುದಾಯವನ್ನ 3ಬಿಗೆ ಸೇರಿಸಿದ್ದಾರೆ.
ಹಾಗಾಗಿ ಈ 2ಎಗೆ ಸೇರಿಸಿ ಅಂತ ಕೇಳುವ ಅವಕಾಶ ಸಿಕ್ಕಿದೆ ಎಂದ ಇಂದಿನ ಈ ಹೋರಾಟಕ್ಕೆ ಸಿಎಂ ಬಿಎಸ್ ವೈ ಕಾರಣ ಎಂದು ಪರೋಕ್ಷವಾಗಿ ಹೇಳಿದ್ರು.
ಇನ್ನು ಮೀಸಲಾತಿ ವಿಚಾರವಾಗಿ ಸ್ವಾಮೀಜಿಗಳು ಒತ್ತಡ ಹಾಕುವುದು ಸರಿಯಲ್ಲ. ಸ್ವಾಮೀಜಿಗಳಿಗೆ ಪರಿಸ್ಥಿತಿಯ ಮನವರಿಕೆ ಮಾಡ್ತೇವೆ. ಸ್ವಾಮೀಜಿಗಳು ಏನ್ ಹೇಳ್ತಾರೆ ಅದನ್ನ ಬಂದು ಸಿಎಂ ಗೆ ತಿಳಿಸ್ತೇವೆ.
ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳಲು ಆಗಲ್ಲ. ಕಾನೂನು, ಸಂವಿಧಾನದ ಚೌಕಟ್ಟಿನೊಳಗೆ ನಿರ್ಧಾರ ಮಾಡಬೇಕು. ಸ್ವಾಮೀಜಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು.
ತರಾತುರಿಯಲ್ಲಿ ನಿರ್ಧಾರ ಕೈಗೊಂಡ್ರೆ ಯಾರಾದ್ರೂ ಕೋರ್ಟಲ್ಲಿ ಪ್ರಶ್ನೆ ಮಾಡಬಹುದು. ಇದನ್ನು ಸ್ವಾಮೀಜಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಇದೇ ವೇಳೆ ಪಂಚಮಸಾಲಿ ಸಮಾವೇಶವನ್ನು ಕಾಂಗ್ರೆಸ್ ನವ್ರು ರಾಜಕೀಯಕ್ಕೆ ಬಳಸಿಕೊಳ್ತಿದ್ದಾರೆ ಎಂದು ಆರೋಪಿಸಿದ ಸಿ ಸಿ ಪಾಟೀಲ್, ರಾಜಕೀಯ ಲಾಭಕ್ಕೆ ಹೋಗಬಾರದು ನಮಗೂ ರಾಜಕೀಯ ಮಾಡಲು ಬರುತ್ತೆ ಅಂತಾ ಎಚ್ಚರಿಕೆ ನೀಡಿದರು.