ಯಡಿಯೂರಪ್ಪ ಗಟ್ಟಿ ಮನುಷ್ಯ, ರಾಜಕಾರಣದಲ್ಲಿ ಅವರ ತಂತ್ರ ಬೇರೆ : ಡಿಕೆಶಿ
ಬೆಂಗಳೂರು : ಯಡಿಯೂರಪ್ಪ ಗಟ್ಟಿ ಮನುಷ್ಯ ಈ ತಂತ್ರ ಅಷ್ಟು ಸುಲಭಕ್ಕೆ ಜಗ್ಗಲ್ಲ. ರಾಜಕಾರಣದಲ್ಲಿ ಯಡಿಯೂರಪ್ಪ ನವರ ತಂತ್ರ ಬೇರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಹೈಕಮಾಂಡ್ ಹೇಳಿದ್ರೆ ರಾಜೀನಾಮೇ ನೀಡಲು ಸಿದ್ಧ ಎಂಬ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್,
ಹೈಕಮಾಂಡ್ ಆಶೀರ್ವಾದ ಇದ್ದಷ್ಟು ದಿನ ನಾನು ಸಿಎಂ ಆಗಿರುತ್ತೇನೆ ಅಂತ ಯಡಿಯೂರಪ್ಪ ಹೇಳಿದ್ದಾರೆ. ಆದರೆ ಯಡಿಯೂರಪ್ಪ ನವರದು ಬಗ್ಗುವ ತಂತ್ರ ಅಲ್ಲಾ. ರಾಜಕಾರಣಿಗಳಲ್ಲಿ ಬಹಳ ತಂತ್ರ ಇರುತ್ತದೆ.
ರಾಜಕಾರಣದಲ್ಲಿ ಒಂದು ನೀತಿ ಇದೆ. ಹೇಳೋದೊಂದು ಮಾಡೊದೊಂದು ಇರುತ್ತದೆ. ರಾಜಕಾರಣದಲ್ಲಿ ಯಡಿಯೂರಪ್ಪ ನವರ ತಂತ್ರ ಬೇರೆ. ಯಡಿಯೂರಪ್ಪ ಇರೊದರಲ್ಲಿ ಗಟ್ಟಿ ಮನುಷ್ಯ. ಅವರ ನಾಯಕ್ವದಲ್ಲಿ 104 ಸೀಟ್ ಬಂದಿದೆ ಎಂದರು.
ಅಲ್ಲದೆ ಮುಂದೆ ಎಲ್ಲಾ ಯಡಿಯೂರಪ್ಪ ಇರಲಿ ಅಂತಾರೆ. ಹಿಂದೆ ಎಲ್ಲಾ ಸೂಟು ಬೂಟು ಹೊಲಿಸಿಕೊಂಡು ರೆಡಿ ಆಗಿದ್ದಾರೆ ಮುಹೂರ್ತ ಫಿಕ್ಸ್ ಮಾಡಿಕೊಂಡಿದ್ದಾರೆ. ನಮಗೂ ಎಲ್ಲ ಗೊತ್ತಿದೆ. ವರ ಮೇಲೆ ಸಿಡಿ ಮತ್ತೊಂದು ಅದೆಲ್ಲಾ ಪಕ್ಷ ದಲ್ಲಿ ಶಿಸ್ತು ಇಲ್ಲವಾಗಿದೆ. ನನ್ನಂತವನಾಗಿದ್ದರೆ, ನಮ್ಮ ಪಕ್ಷ ಆಗಿದ್ದರೆ ಅಂತವರನ್ನು ಅರ್ಧ ಗಂಟೆ ಇರೋಕೆ ಬಿಡುತ್ತಿರಲಿಲ್ಲ.
ಇನ್ನು ಯಡಿಯೂರಪ್ಪನವರ ತಂತ್ರವನ್ನು ಎರಡು ಮೂರು ತರ ವಿಶ್ಲೇಷಣೆ ಮಾಡಬಹುದು. ನನ್ನನ್ನ ಮುಟ್ಟಿ ನೋಡಿ ಎನ್ನಬಹುದು. ಪಕ್ಷದ ಶಿಸ್ತಿನ ಸಿಪಾಯಿ ಎನ್ನಬಹುದು. ನೀವೇ ಎಲ್ಲಾ ವಿಶ್ಲೇಷಣೆ ಮಾಡಿ ಎಂದು ಡಿಕೆಶಿ ಹೇಳಿದ್ದಾರೆ.









