ಬೀಜಿಂಗ್ : ಒಂದೆಡೆ ಭಾರತ- ಚೀನಾ ನಡುವೆ ಶೀತಲ ಸಮರ ನಡೆದರೆ, ಮತ್ತೊಂದೆಡೆ ಚೀನಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಆವರಣದಲ್ಲಿ 6ನೇ ಅಂತರರಾಷ್ಟ್ರೀಯ ಯೋಗದಿನವನ್ನು ಆಚರಣೆ ಮಾಡಲಾಡಗಿದೆ.
ರಾಯಭಾರ ಕಚೇರಿಯ ಆವರಣದಲ್ಲಿ ಸ್ನೇಹಿತರು, ಕುಟುಂಬದ ಸದಸ್ಯರು ಸಾಮಾಜಿಕ ಅಂತರ ಕಾಪಾಡಿಕೊಂಡು ಯೋಗಾಭ್ಯಾಸ ಮಾಡಿದರು. ಆಶಿಷ್ ಬಹುಗುಣ ಅವರ ನೇತೃತ್ವದಲ್ಲಿ ಯೋಗವನ್ನು ಮಾಡಲಾಗಿದೆ. ಕೊರೊನಾ ಸೋಂಕು ಎಲ್ಲೆಡೆ ಹೆಚ್ಚಾಗುತ್ತಿರುವ ಕಾರಣಕ್ಕೆ ಸುರಕ್ಷಿತ ಕ್ರಮಗಳನ್ನು ಈ ವೇಳೆ ತೆಗೆದುಕೊಳ್ಳಲಾಗಿದೆ.
ಕೋವಿಡ್ 19 ನಿಂದಾಗಿ 2020 ರ ಯೋಗದಿನಾಚರಣೆಯನ್ನು ಚಿಕ್ಕದಾಗಿ ಆಚರಿಸಲಾಗಿದೆ. ಆದರೂ ಆಚರಣೆ ಸುಂದರವಾಗಿತ್ತು ಎಂದು ರಾಯಬಾರ ಕಚೇರಿ ಟ್ವೀಟ್ ಮಾಡಿದೆ. ಇದಕ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಭಾರತ ರಾಯಭಾರಿ ವಿಕ್ರಮ್ ಮಿಸ್ರಿ ಈ ವರ್ಷ ಸರಳವಾಗಿಯಾದರೂ ಸುಂದರವಾಗಿ ಆಚರಿಸಿದ್ದೇವೆ. ಈ ದಿನ ಬೆಳಗ್ಗೆ ರಾಯಭಾರ ಕಚೇರಿ ಆವರಣದಲ್ಲಿ ಸುರಕ್ಷತಾ ಕ್ರಮಗಳೊಂದಿಗೆ ಯೋಗದಿನ ಆಚರಿಸಲಾಯಿತು ಎಂದು ಹೇಳಿದ್ದಾರೆ.