ಸುತ್ತೂರು ಮಠಕ್ಕೆ ಭೇಟಿ ಬಗ್ಗೆ ಯೋಗೇಶ್ವರ್ ಸ್ಪಷ್ಟನೆ
ಬೆಂಗಳೂರು : ನಾನು ನೆನ್ನೆ ಮೊನ್ನೆಯಿಂದ ಚನ್ನಪಟ್ಟಣದಲ್ಲೇ ಇದ್ದೆ. ಮೈಸೂರಿಗೆ ಹೋಗಿದ್ದಾಗ ಸುತ್ತೂರು ಮಠಕ್ಕೆ ಹೋಗಿದ್ದೆ. ಈಗ ಇಲ್ಲಿ, ಸ್ವಾಮೀಜಿ ಆರ್ಶಿವಾದ ಪಡೆಯಲು ಬಂದಿದ್ದೆ ಅಷ್ಟೆ.
ನಾನು ಸ್ವಾಮೀಜಿಗಳನ್ನು ಭೇಟಿಯಾಗುತ್ತಲೇ ಇರುತ್ತೇನೆ. ವಿಶೇಷ ಸಮಯದಲ್ಲಿ ಮಾತ್ರ ನಿಮ್ಮ ಕಣ್ಣಿಗೆ ಕಾಣುತ್ತಿದೆ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು..
ನಗರದ ಬಿಜಿಎಸ್ ಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಇನ್ನು ನಾಲ್ಕು ಸ್ವಾಮೀಜಿಗಳನ್ನು ಭೇಟಿ ಮಾಡುತ್ತೆನೆ.
ನಾನು ಬಹಿರಂಗವಾಗಿ ಏನ್ನನ್ನು ಹೇಳುವುದಿಲ್ಲ. ರಾಜಕೀಯವಾಗಿ ಮಾತನಾಡುವುದಿಲ್ಲ. ನಿಮ್ಮ ಪ್ರಶ್ನೆಗಳು, ನಿರೀಕ್ಷೆಗಳು ಗೊತ್ತಿದೆ. ನಾನು ಪಕ್ಷದ ಚೌಕಟ್ಟಿನಲ್ಲಿ ಇದ್ದೆನೆ. ಹೀಗಾಗಿ ಸಧ್ಯಕ್ಕೆ ಮಾತನಾಡುವುದಿಲ್ಲ ಎಂದು ಹೇಳಿದರು.
ಇದೇ ವೇಳೆ ವಿಜಯೇಂದ್ರ ದೆಹಲಿ ಭೇಟಿ ಬಗ್ಗೆ ಮಾತನಾಡಿ, ಯಾರು ಬೇಕಿದ್ದರೂ ದೆಹಲಿಗೆ ಹೋಗಬಹುದು. ಏನು ಬೇಕಿದ್ದರೂ, ಮಾತನಾಡಲಿ ಎಂದರು.
ಇನ್ನು ರೇಣುಕಾಚಾರ್ಯ ಬಗ್ಗೆ ಪ್ರತಿಕ್ರಿಯೆ ನೀಡಿ, ಸಹಿ ಸಂಗ್ರಹದ ಬಗ್ಗೆ ನನಗೇನು ಗೊತ್ತಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ಹೈ ಕಮಾಂಡ್ ಇದೆ. ನನ್ನ ಕೆಲ ಸ್ನೇಹಿತರು ನನ್ನ ಮನಸಿಗೆ ನೋವಾಗುವಂತೆ ಮಾತನಾಡಿದ್ದಾರೆ.
ಅವರ ಹಿಂದೆ ಯಾರು ಮಾತನಾಡಿಸುತ್ತಿದ್ದಾರೋ ಗೊತ್ತಿಲ್ಲ.. ನನ್ನ ಒಂದು ಹೇಳಿಕೆ , ಇಷ್ಟೊಂದು ದೊಡ್ಡದಾಗುತ್ತದೆ ಎಂದು ಗೊತ್ತಿರಲಿಲ್ಲ. ಇದು ನೋವಾಗಿದೆ. ಮಾತನಾಡಲು ಬಹಳ ವಿಷಯ ಇದೆ.
ಯಾರು ಯಾವಾಗ ಬೆಂಬಲ ನಿಲ್ಲುತ್ತಾರೆ ಎಂದು ಈಗ ಹೇಳುವುದಿಲ್ಲ. ಬಲಾಬಲ ಕಣ ಇದಲ್ಲ. ಯಾರೊ ನಾಲ್ಕು ಜನ ಸ್ನೇಹಿತರು ಮಾತನಾಡುತ್ತಾರೆ , ಮಾತಮಾಡಲಿ ಬಿಡಿ ಎಂದು ಹೇಳಿದರು.