ಟೆಹ್ರಾನ್ : ಮಹಿಳೆಯರು ಹಿಜಬ್ ಧರಿಸಿಲ್ಲ ಎಂದು ತಲೆಯ ಮೇಲೆ ಮೊಸರು ಸುರಿದು ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ಇರಾನ್ ದೇಶದ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ. ಘಟನೆಯ ಸಂಪೂರ್ಣ ವೀಡಿಯೋ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೀಡಿಯೋವು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇಬ್ಬರು ಮಹಿಳೆಯರು ಅಂಗಡಿಯೊಂದಕ್ಕೆ ಹಿಜಬ್ ಧರಿಸದೆ ಆಗಮಿಸಿದ್ದರು. ಈ ಸಮಯದಲ್ಲಿ ಬಂದ ವ್ಯಕ್ತಿಯೊಬ್ಬ ಆ ಇಬ್ಬರು ಮಹಿಳೆಯರ ಮೇಲೆ ಕೂಗಾಡಿದ್ದಾನೆ. ನಂತರ ಆತ ಹತ್ತಿರ ಕಪಾಟಿನಲ್ಲಿದ್ದ ಮೊಸರಿನ ಪ್ಯಾಕೆಟ್‍ನ್ನು ತೆಗೆದುಕೊಂಡು ಕೋಪದಿಂದ ಇಬ್ಬರು ಮಹಿಳೆಯರ ತಲೆ ಮೇಲೆ ಎಸೆದಿದ್ದಾನೆ. ನಂತರ ಅಂಗಡಿಯಿಂದ ಹೊರಗೆ ಓಡಿ ಹೋಗಿದ್ದಾನೆ.
ಘಟನೆಯ ನಂತರ ಇರಾನ್ ಪೊಲೀಸರು, ಹಿಜಬ್ ನಿಯಮ ಉಲ್ಲಂಘಿಸಿದ್ದಕ್ಕೆ ಮಹಿಳೆಯರನ್ನು ಬಂಧಿಸಿದ್ದಾರೆ. ಜೊತೆಗೆ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತಂದಿದ್ದಕ್ಕೆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಕಾನೂನಿನ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಅಂಗಡಿಯ ಮಾಲೀಕರಿಗೆ ನೋಟೀಸ್ ನೀಡಲಾಗಿದೆ.
ಇರಾನ್‍ನಲ್ಲಿ ಮಹಿಳೆಯರೂ ಹಿಜಬ್ ಧರಿಸುವುದು ಕಡ್ಡಾಯವಾಗಿದ್ದು, 7 ವರ್ಷದ ಹುಡುಗಿಯಿಂದ ಹಿಡಿದು ಪ್ರತಿಯೊಬ್ಬ ಮಹಿಳೆಯು ಹಿಜಬ್ ಧರಿಸಬೇಕು ಎಂದು ಕಾನೂನು ಇದೆ.








