ದಾವಣಗೆರೆ: ವೀರಶೈವ ಲಿಂಗಾಯತರ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಲು ವಿಫಲರಾಗಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರ್ಪ ರಾಜೀನಾಮೆ ಕೊಡುವವರೆಗೆ ಒತ್ತಡ ಹಾಕುವಂತೆ ಕೂಡಲಸಂಗಮದ ಪಂಚಮಸಾಲಿ ಜಯಮೃತ್ಯುಂಜಯ ಸ್ವಾಮೀಜಿ ಸೂಚನೆ ನೀಡಿದ್ದಾರೆ.
ದಾವಣಗೆರೆಯ ಹರಿಹರದಲ್ಲಿ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ, 2ಎ ಮೀಸಲಾತಿಗಾಗಿ ಪಂಚಮಸಾಲಿ ಸಮಾಜದಿಂದ ಆಯ್ಕೆಯಾದ ಶಾಸಕರು ರಾಜೀನಾಮೆ ಕೊಟ್ಟರೆ ಪ್ರಯೋಜವಿಲ್ಲ ಎಂದು ತಿಳಿಸಿದ್ದಾರೆ.
ಪಂಚಮಸಾಲಿ ಸಮಾಜದಿಂದ ಶಾಸಕರಾಗಿ ಗೆದ್ದಿದ್ದೀರಿ, ಹೀಗಾಗಿ ರಾಜೀನಾಮೆ ಕೊಡಬೇಡಿ. ಬೇಡಿಕೆ ಈಡೇರಿಸದ ಸಿಎಂ ಯಡಿಯೂರಪ್ಪ ತಾನೇ ರಾಜೀನಾಮೆ ಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಪಂಚಮಸಾಲಿ ಸಮಾಜದವರೇ ಮುಖ್ಯಮಂತ್ರಿ ಆದರೂ ಕೂಡ, 2ಎ ಮೀಸಲಾತಿಗಾಗಿ ನಮ್ಮ ಹೋರಾಟ ನಿಲ್ಲಲ್ಲ. ಬಿಎಸ್ ವೈ ನಮ್ಮ ಬೇಡಿಕೆ ಈಡೇರಿಸಿಲ್ಲ. ಏನಾದರೂ ಕೇಂದ್ರದವರು ಬಿಎಸ್ ವೈ ರಾಜೀನಾಮೆ ಪಡೆದರೆ, ಉತ್ತರ ಕರ್ನಾಟಕದವರೇ ಸಿಎಂ ಆಗಬೇಕು. ಅದರಲ್ಲೂ ಲಿಂಗಾಯತರಿಗೆ ನೀಡುವಂತೆ ಹೇಳುತ್ತೇನೆ. ನಮ್ಮ ಸಮಾಜದಲ್ಲಿ 15 ಶಾಸಕರು ಸಿಎಂ ಅರ್ಹತೆ ಹೊಂದಿದ್ದಾರೆ ಎಂದು ಜಯಮೃತ್ಯುಂಜಯ ಶ್ರೀಗಳು ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel