ಕಾಲೇಜಿಗೆ ಹೋಗು ಎಂದಿದ್ದಕ್ಕೆ ಯುವತಿ ಆತ್ಮಹತ್ಯೆ suicide
ಚಾಮರಾಜನಗರ : ಪೋಷಕರು ಕಾಲೇಜಿ ಹೋಗು ಎಂದು ಬಲವಂತ ಮಾಡಿದ್ದಕ್ಕೆ ಯುವತಿ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರದ ಕೊಳ್ಳೇಗಾಲದಲ್ಲಿ ನಡೆದಿದೆ.
19 ವರ್ಷದ ದಿವ್ಯಾ ಆತ್ಮಹತ್ಯೆ ಮಾಡಿಕೊಂಡಿರುವ ಯುವತಿಯಾಗಿದ್ದಾರೆ. ಕೊರೊನಾ ಹಿನ್ನೆಲೆ ಈಕೆ ಕಳೆದ ಒಂದು ವರ್ಷದಿಂದಿ ಕಾಲೇಜಿಗೆ ಹೋಗದೆ ಕೂಲಿ ಕೆಲಸ ಮಾಡಿಕೊಂಡಿದ್ದಳು.
ಆದರೆ ಕಾಲೇಜು ಆರಂಭವಾದ ಬಳಿಕ ಓದಲು ಹೋಗು ಎಂದು ಪೋಷಕರು ಬಲವಂತ ಮಾಡಿ ಕಾಲೇಜಿಗೆ ಕಳುಹಿಸಿದ್ದರು. ಕಾಲೇಜಿಗೆ ಹೋಗಲು ಇಷ್ಟವಿಲ್ಲದ ಕಾರಣ ದಿವ್ಯಾ ಬುಧವಾರ ಕ್ರಿಮಿನಾಶಕವನ್ನು ಸೇವಿಸಿದ್ದಾಳೆ.suicide
ಈ ವಿಷಯ ತಿಳಿದ ಪೋಷಕರು ಯುವತಿಯನ್ನ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದು, ರಸ್ತೆ ಮಧ್ಯೆಯಲ್ಲೇ ಯುವತಿ ಕೊನೆಯುಸಿರೆಳೆದಿದ್ದಾಳೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.