Dakshinakannada | ಪ್ರೇಯಸಿಯನ್ನ ರಕ್ಷಿಸಲು ಹೋಗಿ ಯುವಕ ನೀರುಪಾಲು
ದಕ್ಷಿಣ ಕನ್ನಡ : ಪ್ರೇಯಸಿಯನ್ನು ರಕ್ಷಿಸಲು ಹೋದ ಪ್ರಿಯಕರ ನೀರುಪಾಲಾಗಿರುವ ಘಟನೆ ದಕ್ಷಿಣ ಕನ್ನಡದ ಉಳ್ಳಾಲದಲ್ಲಿ ನಡೆದಿದೆ.
28 ವರ್ಷದ ಮುನ್ನೂರು ಗ್ರಾಮದ ಸೋಮನಾಥ ಉಳಿಯ ನಿವಾಸಿ ಲಾಯ್ಡ್ ಡಿ.ಸೋಜಾ ಮೃತ ಯುವಕನಾಗಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳಲು ನೀರಿಗೆ ಹಾರಿದ್ದ ಯುವತಿ ಅಶ್ವಿತಾ ಫೆರಾವೋ ಅವರನ್ನು ಸ್ಥಳೀಯ ಜೀವ ರಕ್ಷಕ ಈಜುಗಾರರು ರಕ್ಷಿಸಿದ್ದಾರೆ.
ಸದ್ಯ ಆಕೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಹಿನ್ನಲೆ
ಅಶ್ವಿತಾಳ ಮತ್ತು ಲಾಯ್ಡ್ ಡಿ ಸೋಜಾ ಅವರು ಕಳೆದ 8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೇ ಲಾಯ್ಡ್ ಇನ್ನೊಬ್ಬ ಯುವತಿಯನ್ನು ಪ್ರೀತಿಸುತ್ತಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಇದರ ಬಗ್ಗೆ ಮಾತನಾಡಲು, ಇಬ್ಬರೂ ಸೋಮೇಶ್ವರ ಸಮುದ್ರ ತೀರಕ್ಕೆ ಬಂದಿದ್ದರು. ಈ ವೇಳೆ, ಲಾಯ್ಡ್ ಮತ್ತು ಅಶ್ವಿತಾಳ ನಡುವೆ ಮಾತಿನ ಚಕಮಕಿ ನಡೆದು, ಆಕೆ ಸಮುದ್ರಕ್ಕೆ ಹಾರಿದ್ದಾಳೆ.
ಕೂಡಲೇ ಆಕೆಯ ರಕ್ಷಣೆಗೆ ಲಾಯ್ಡ್ ಸಮುದ್ರಕ್ಕೆ ಹಾರಿದ್ದಾನೆ. ಇದನ್ನ ಕಂಡ ಸ್ಥಳೀಯ ಜೀವ ರಕ್ಷಕರು ಸಮುದ್ರಕ್ಕೆ ಇಳಿದು, ಅಶ್ವಿತಾಳನ್ನು ರಕ್ಷಿಸಿದ್ದು, ಲಾಯ್ಡ್ ಡಿಸೋಜಾ ಸಮುದ್ರದಲ್ಲಿ ಮುಳುಗಿದ್ದು, ಆತನನ್ನು ರಕ್ಷಣೆಗೆ ಯತ್ನಿಸಿದರೂ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.