ಭಾರತೀಯ ಸೇನೆಗೆ ಸೇರಲು ಮಧ್ಯರಾತ್ರಿ 10 ಕಿ.ಮೀ ಓಡುತ್ತಲೇ ಮನೆ ಸೇರುವ ಯುವಕ
ಉತ್ತರಪ್ರದೇಶ: ಮಧ್ಯರಾತ್ರಿವರೆಗು ಅಡುಗೆ ಕೆಲಸ ಮಾಡಿ, ಮಧ್ಯರಾತ್ರಿ ಮನಗೆ 10 ಕಿ.ಮೀ ಓಡುತ್ತಲೇ ಹೋಗುವ ಯುವಕ ಪ್ರೇರಣಾದಾಯಕನಾಗಿದ್ದಾನೆ.
ಹೌದು ಮೂಲತಃ ಉತ್ತರಾಖಂಡದವನಾದ 19 ವರ್ಷದ ಪ್ರದೀಪ್ ಮೆಹ್ರಾ ಅವರು ಮಧ್ಯರಾತ್ರಿವರೆಗು ತನ್ನ ಕೆಲಸ ಮುಗಿಸಿ ರಾತ್ರಿ ಬರೋಬ್ಬರಿ 10 ಕಿ.ಮೀ ಓಡುತ್ತಲೇ ಬರೋಲಾದಲ್ಲಿರುವ ಮನೆ ಸೇರುತ್ತಾರೆ. ಏಕೆ ಹೀಗೆ ಓಡುತ್ತಿಯಾ ಎಂದು ಪ್ರಶ್ನಿಸಿದರೆ ಭಾರತೀಯ ಸೇನೆ ಸೇರಿಕೊಂಡು ದೇಶ ಸೇವೆ ಮಾಡಬೇಕೆಂಬ ಹಂಬಲದಿಂದ ಎಂದು ಉತ್ತರ ನೀಡಿದ್ದಾರೆ.
ಭಾರತೀಯ ಸೇನೆ ಸೇರಲು ದೈಹಿಕವಾಗಿ ಸದೃಢವಾಗಿರಬೇಕು. ಬೆಳಗ್ಗೆ ವ್ಯಾಯಾಮ, ಜಾಗಿಂಗ್, ಜಿಮ್ಗೆ ಹೋಗಲು ನನ್ನ ಬಳಿ ಸಮಯವಿಲ್ಲ. ಹಾಗಾಗಿ, ಮಧ್ಯರಾತ್ರಿ ವರೆಗೂ ಕೆಲಸ ಮಾಡುತ್ತೇನೆ. ನಂತರ ಮನೆಗೆ ಓಡುತ್ತಲೇ ಹಿಂತಿರುಗುತ್ತೇನೆ. ಸಿಗುವ ವೇತನದಲ್ಲೇ ತಾಯಿಯ ಆರೋಗ್ಯ ನೋಡಿಕೊಳ್ಳುಬೇಕು, ಮನೆ ಖರ್ಚು ನಿಭಾಯಿಸಬೇಕು. ಜೊತೆಗೆ ನನ್ನ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬೇಕೆಂದು ಪ್ರತಿ ರಾತ್ರಿ ನಗರದ ರಸ್ತಗಳಲ್ಲಿ 10 ಕಿ.ಮೀ ಓಡುವ ಮೂಲಕ ಆರ್ಮಿ ಸೇರಿಕೊಳ್ಳಲು ತಯಾರಿ ನಡೆಸುತ್ತಿದ್ದೇನೆ ಎಂದು ಪ್ರದೀಪ ಉತ್ತರ ನೀಡುವ ಮೂಲಕ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ.
This is PURE GOLD❤️❤️
नोएडा की सड़क पर कल रात 12 बजे मुझे ये लड़का कंधे पर बैग टांगें बहुत तेज़ दौड़ता नज़र आया
मैंने सोचा
किसी परेशानी में होगा , लिफ़्ट देनी चाहिएबार बार लिफ़्ट का ऑफ़र किया पर इसने मना कर दिया
वजह सुनेंगे तो आपको इस बच्चे से प्यार हो जाएगा ❤️😊 pic.twitter.com/kjBcLS5CQu
— Vinod Kapri (@vinodkapri) March 20, 2022
ಇನ್ನು ಪ್ರದೀಪ್ ಈ ರೀತಿ ಓಡುತ್ತಿರುವುದನ್ನು ಗಮನಿಸಿದ ಕಾರಿನಲ್ಲಿದ್ದ ಚಲನಚಿತ್ರ ನಿರ್ಮಾಪಕ ಮತ್ತು ಲೇಖಕ ವಿನೋದ್ ಕಪ್ರಿ ಈ ಯುವಕನನ್ನು ಪ್ರಶ್ನಿಸಿದ್ದಾರೆ. ಈ ರೀತಿ ಓಡುತ್ತಿರುವುದು ಯಾಕೆ?, ಕಾರಿನಲ್ಲಿ ಮನೆಗೆ ಬಿಡುತ್ತೇನೆ ಎಂದು ವಿನಂತಿಸಿದ್ದಾರೆ. ಆದರೆ, ಇದು ಸೇನೆ ಸೇರಿಕೊಳ್ಳಲು ನಾನು ಮಾಡುತ್ತಿರುವ ಅಭ್ಯಾಸ. ನನ್ನ ಬಳಿ ಹೆಚ್ಚು ಸಮಯವಿಲ್ಲ ಎಂದು ಓಡುತ್ತಲೇ ಯುವಕ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಪ್ರದೀಪ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.