ಪ್ರೇಮ ವೈಫಲ್ಯ | ಜಿಮ್ ಟ್ರೈನರ್ ನೇಣಿಗೆ ಶರಣು bangalore saaksha tv
ಬೆಂಗಳೂರು : ಪ್ರೀತಿಸಿದ ಹುಡುಗಿ ದೂರವಾದ ಕಾರಣ ಮನನೊಂದು ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.
29 ವರ್ಷದ ಕಾರ್ತಿಕ್ ಮೃತ ಯುವಕನಾಗಿದ್ದಾರೆ. ನೇಣಿಗೆ ಶರಣಾದ ಯುವಕ ಜಿಮ್ ಟ್ರೈನಿಯಾಗಿದ್ದರು. ಪ್ರೇಮ ವೈಫಲ್ಯದ ಬಗ್ಗೆ ವಿಡಿಯೋ ಮಾಡಿಟ್ಟು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಈ ಸಂಬಂಧ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ತಿಕ್ ಕಳೆದ ಮೂರು ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದರು. ಇತ್ತೀಚಿಗೆ ಯುವತಿ ಕಾರ್ತಿಕ್ ನಿಂದ ದೂರವಾಗಿದ್ದಳು. ಇದರಿಂದ ಮನನೊಂದ ಯುವಕ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೂ ಮುನ್ನ ಪ್ರೇಮ ವೈಫಲ್ಯ ಬಗ್ಗೆ ಕಾರ್ತಿಕ್ ವಿಡಿಯೋ ಮಾಡಿದ್ದಾರೆ. ಸದ್ಯ ಮೊಬೈಲ್ನ ಪೆÇಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ವಿಡಿಯೋ ಆಧಾರದ ಮೇಲೆ ಪೆÇಲೀಸರು ತನಿಖೆ ನಡೆಸುತ್ತಾರೆ.