ವೈದ್ಯರ ಎಡವಟ್ಟಿಗೆ ಕಾಲು ಕಳೆದುಕೊಳ್ಳಲಿರುವ ಯುವಕ bengaluru
ಜ್ವರದಿಂದ ಬಳಲುತ್ತಿದ್ದ ಯುವಕನ ಕಾಲು ಕತ್ತರಿಸುವ ಹಂತಕ್ಕೆ
ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಕುಟುಂಬಸ್ಥರು
ಮೈಲಸಂದ್ರದಲ್ಲಿರುವ ಸಾನಿಕಾ ಕ್ಲಿನಿಕ್ ವೈದ್ಯನ ಎಡವಟ್ಟು
ಇಂಜೆಕ್ಷನ್ ನೀಡಿದ ಬಳಿಕ ಯುವಕನ ಕಾಲಿನಲ್ಲಿ ಊತ
ಬೆಂಗಳೂರು : ವೈದ್ಯನ ಎಡವಟ್ಟಿನಿಂದಾಗಿ ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿದ್ದ ಯುವಕನ ಕಾಲು ಕತ್ತರಿಸುವ ಹಂತಕ್ಕೆ ಬಂದಿರುವ ಘಟನೆ ಬೇಗೂರಿನ ಮೈಲಸಂದ್ರದಲ್ಲಿ ನಡೆದಿದೆ. 18 ವರ್ಷದ ಅಭಿ ಎಂಬ ಯುವಕ ಜ್ವರದಿಂದ ಬಳಲುತ್ತಿದ್ದು, ಜನವರಿ 6ರಂದು ಬೇಗೂರಿನ ಮೈಲಸಂದ್ರದಲ್ಲಿರುವ ಸಾನಿಕಾ ಕ್ಲಿನಿಕ್‌ಗೆ ಹೋಗಿದ್ದರು.
ಈ ವೇಳೆ ಅಲ್ಲಿನ ಡಾ.ಅಶೋಕ್, ಯುವಕ ಅಭಿಗೆ ಇಂಜೆಕ್ಷನ್ ನೀಡಿದ್ದರು. ಇದಾದ ಬಳಿಕ ಇಂಜೆಕ್ಷನ್ ನೀಡಿದ ಕಾಲಿನಲ್ಲಿ ಊತ ಕಾಣಿಸಿಕೊಂಡಿದೆ. ಅಲ್ಲದೇ ಇಡೀ ಕಾಲಿಗೆ ಸೋಂಕು ಹರಡಿದೆ. ಆರಂಭದಲ್ಲಿ ಚಿಕಿತ್ಸೆ ಕೊಡಿಸುವುದಾಗಿ ಹೇಳಿದ್ದ ಕ್ಲಿನಿಕ್ ಸಿಬ್ಬಂದಿ, ಇದೀಗ ಕೈ ಚೆಲ್ಲಿದ್ದು, ಈಗ ಕಾಲು ಕತ್ತರಿಸುವ ಹಂತಕ್ಕೆ ಸೋಂಕು ಹರಡಿಕೊಂಡಿದೆ.
ಹೀಗಾಗಿನ ನ್ಯಾಯ ಕೊಡಿಸುವಂತೆ ಯುವಕನ ಅಕ್ಕ ಶಶಿಕಲಾ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಿದ್ದಾರೆ.









