ಗದಗ: ಬಾವಿಗೆ ಬಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಶ್ವಾನವೊಂದನ್ನು ಯುವಕರು ರಕ್ಷಣೆ ಮಾಡಿದ ಮಾನವೀಯ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಗ್ರಾಮದಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದ ಶ್ವಾನ ಮೇಲೆ ಬರಲಾಗದೆ ಸುಸ್ತಾಗಿ ನಿತ್ರಾಣಗೊಂಡಿತ್ತು. ಇನ್ನೇನು ಮುಳುಗಿ ನಾಯಿ ಸಾಯುವ ಸ್ಥಿತಿಗೆ ಬಂದಿತ್ತು.
ಆಗ ಬಾವಿಯಲ್ಲಿ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಶ್ವಾನದ ಕಿರುಚಾಟ-ಕೂಗಾಟ ಕೇಳಿದ ಗ್ರಾಮದ ಯುವಕರು ಬಾವಿಯ ಬಳಿ ದಾವಿಸಿ ಶ್ವಾನದ ಸ್ಥಿತಿ ನೋಡಿ ಮರುಗಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಯುವಕರು ಹಗ್ಗದಿಂದ ಒಂದು ಬುಟ್ಟೆಯನ್ನು ಬಿಟ್ಟಿದ್ದಾರೆ. ಅದರಲ್ಲಿ ನಾಯಿ ಹತ್ತಿ ಬಂದಿದೆ.
ಹಗ್ಗದ ಮೂಲಕ ಅದನ್ನ ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ. ಕೊನೆಗೆ ಬದುಕಿತು ಬಡಜೀವ ಅಂತ ನಾಯಿ ಯುವಕರ ಹರಸಾಹದಿಂದ ರಕ್ಷಣೆಗೊಂಡಿದೆ. ಯುವಕರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel