ಯುವಕನಿಗೆ ಬೆತ್ತಲೆಗೊಳಿಸಿ ಧರ್ಮದೇಟು ನೀಡಿದ ಯುವಕರು

1 min read
Young girl Saaksha tv

ಯುವಕನಿಗೆ ಬೆತ್ತಲೆಗೊಳಿಸಿ ಧರ್ಮದೇಟು ನೀಡಿದ ಯುವಕರು Saaksha Tv

ಹಾಸನ: ಯುವತಿಯನ್ನು ಚುಡಾಯಿಸಿದ್ದಕ್ಕೆ, ಯುವಕನೊಬ್ಬನಿಗೆ ಬೆತ್ತಲೆಗೊಳಿಸಿ ಧರ್ಮದೇಟು ನೀಡಿ ರಸ್ತೆಯಲ್ಲಿ ಮೆರವಣಿಗೆ ಮಾಡಿರುವ ಘಟನೆ ನಗರದ ಮಹರಾಜ ಪಾರ್ಕ್ ನಲ್ಲಿ ನಡೆದಿದೆ.

ಹಲವು ದಿನಗಳಿಂದ ಯುವಕ ಯುವತಿಯ ಹಿಂದೆ ಬಿದ್ದಿದ್ದ. ಇಂದು ಯುವತಿ ಪಾರ್ಕ್ ನಲ್ಲಿ ಹೋಗುವಾಗ ಹಿಂದಿನಿಂದ ಕೈ ಹಿಡಿದು ಎಳೆದಿದ್ದಾನೆ. ಇದನ್ನು ಕಂಡ ಸುತ್ತಲಿನ ಯುವಕರ ಗುಂಪೊಂದು ಆತನನ್ನು ಹಿಡಿದು ಬೆತ್ತಲೆಗೊಳಿಸಿ ಥಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದಾರೆ.

ಅಲ್ಲದೇ ತಡೆಯಲು ಬಂದವರಿಗೆ ಥಳಿಸುವುದಾಗಿ ಬೆದರಿಸಿದ್ದಾರೆ. ಇದನ್ನು ಸ್ಥಳಿಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಇದನ್ನು ಗಮನಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹಾಗೇ ಹಲ್ಲೆ ನಡೆಸಿದ ಯುವಕರನ್ನು ಬಂಧಿಸಲು ಪೊಲೀಸರು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd