ಯಾದಗಿರಿಯಲ್ಲಿ ಯುವತಿ ಮೇಲೆ ಅತ್ಯಾಚಾರ – ಕಾಲಿಗೆ ಬೀಳುತ್ತೇನೆ ಬಿಟ್ಟು ಬಿಡಿ ಎಂದರೂ ಬಿಡದ ಪಾಪಿಗಳು…
ಆಟೋದಲ್ಲಿ ತೆರಳುತ್ತಿದ್ದ ವೇಳೆ ಅಟೋ ಚಾಲಕ ಮತ್ತು ಸ್ನೇಹಿತ ಸೇರಿ ಯುವತಿಯನ್ನ ಹಾಡಹಗಲೇ ಅತ್ಯಾಚಾರ ಎಸಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಏಪ್ರಿಲ್ 26 ರಂದು ಘಟನೆ ನೆಡದಿದ್ದು ತಡವಾಗಿ ಬೆಳಕಿಗೆ ಬಂದಿದೆ.
26ರ ಮಂಗಳವಾರದಂದು ಯುವತಿ ಮನೆ ಕೆಲಸಕ್ಕೆಂದು ತನ್ನ ಹಳ್ಳಿಯಿಂದ ಆಟೋದಲ್ಲಿ ಯಾದಗಿರಿಗೆ ಹೋಗುತ್ತಿದ್ದಳು ಈ ವೇಳೆ ಎಂ.ಹೊಸಳ್ಳಿ ಗ್ರಾಮದ ಆಟೋ ಚಾಲಕ ಹನುಮಂತ್ ಜಿನಕೇರಿ ಸ್ನೇಹಿತ ನರಸಪ್ಪನನ್ನು ಆಟೋದಲ್ಲಿ ಹತ್ತಿಸಿಕೊಂಡಿದ್ದಾನೆ.ಯುವತಿ ಯಾದಗಿರಿ ನಗರಕ್ಕೆ ಬರುವಾಗ ಆಟೋ ನಿಲ್ಲಿಸಿ ಎಂದಿದ್ದಾಳೆ. ಅದಕ್ಕೆ ಚಾಲಕ, ಆಟೋದಲ್ಲಿ ಡೀಸೆಲ್ ಇಲ್ಲ, ಡೀಸೆಲ್ ಹಾಕಿಸಿಕೊಂಡು ಹೊಸ ಬಸ್ ನಿಲ್ದಾಣದ ಕಡೆ ಬಿಡುತ್ತೇನೆಂದು ಹೇಳಿದ್ದಾನೆ. ಆಟೋ ಚಾಲಕ ನಗರದ ಹೊರಭಾಗದ ವರ್ಕನಳ್ಳಿಯ ನಿರ್ಜನ ಪ್ರದೇಶದ ಪಾಳು ಬಿದ್ದ ಮನೆಯಲ್ಲಿ ಕರೆದುಕೊಂಡು ಹೋಗಿ ಆಟೋ ಚಾಲಕ ಮತ್ತು ಆತನ ಸ್ನೇಹಿತ ಅತ್ಯಾಚಾರ ಮಾಡಿದ್ದಾನೆ.
ಅತ್ಯಾಚಾರಕ್ಕೆ ಯತ್ನಿಸುತ್ತಿದ್ದ ವೇಳೆ ಆಕೆ ‘ಕಾಲಿಗೆ ಬೀಳುತ್ತೇನೆ, ನನ್ನನ್ನು ಬಿಟ್ಟು ಬಿಡಿ’ ಅಂತಾ ಬೇಡಿಕೊಂಡಿದ್ದಾಳೆ. ಅಷ್ಟೇ ಅಲ್ಲದೇ ಅತ್ಯಾಚಾರದ ವಿಡಿಯೋ ರೆಕಾರ್ಡ್ ಮಾಡಿ ಈ ವಿಷಯ ಯಾರಿಗಾದರೂ ಹೇಳಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿ ಕಳುಹಿಸಿದ್ದಾರೆ.
ಈ ಕಹಿ ಘಟನೆ ಬಗ್ಗೆ ಯುವತಿ ಪೋಷಕರಿಗೆ ಹೇಳಿದ್ದಾಳೆ. ಕೂಡಲೇ ಯುವತಿಯ ಚಿಕ್ಕಪ್ಪ ಯಾದಗಿರಿ ಮಹಿಳೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳಾದ ಆಟೋ ಚಾಲಕ ಹನುಮಂತ್ ಹಾಗೂ ಆತನ ಸ್ನೇಹಿತ ನರಸಪ್ಪನನ್ನು ಬಂಧಿಸಿ ಆಟೋವನ್ನ ಜಪ್ತಿ ಮಾಡಿದ್ದಾರೆ.








