ಯೂಟ್ಯೂಬ್ ನಲ್ಲಿ ಹೊಸ ಫೀಚರ್ : ಮಕ್ಕಳ ಕಂಟೆಂಟ್ ವೀಕ್ಷಣೆಯನ್ನ ಪೋಷಕರೇ ನಿರ್ಧರಿಸಬಹುದು..!
ಯೂಟ್ಯೂಬ್ ತನ್ನ ಗ್ರಾಹಕರಿಗಾಗಿ ಹೊಸ ಫೀಚರ್ ಒಂದನ್ನ ಲಾಂಚ್ ಮಾಡುತ್ತಿದೆ. ಈ ಹೊಸ ಫೀಚರ್ ನ ಮೂಲಕ ಪೋಷಕರು ತಮ್ಮ ಮಕ್ಕಳು ಯೂಟ್ಯೂಬ್ ನಲ್ಲಿ ನೋಡುವ ಕಂಟೆಂಟ್ ಗಳನ್ನ ನೋಡಬೇಕು ಎಂದು ನಿರ್ಧರಿಸಬಹುದಾಗಿದೆ. ಹೌದು ‘ಸೂಪರ್ವೈಸ್ಡ್ ಎಕ್ಸ್ಪೀರಿಯೆನ್ಸಸ್’ ಹೆಸರಿನ ಈ ಫೀಚರ್ ಮೂಲಕ ನಿರ್ಬಂಧಗಳ ಆಪ್ಶನ್ ಗಳನ್ನ ಕೊಡಲಾಗಿದ್ದು, ಪೋಷಕರು ತಮ್ಮ ಮಕ್ಕಳು ಈ ಯೂಟ್ಯೂಬ್ ವಿಡಿಯೋ ಪ್ಲಾಟ್ ಫಾರಂನಲ್ಲಿ ಏನೆಲ್ಲಾ ಅಕ್ಸೆಸ್ ಮಾಡಬಹುದು, ಯಾವ ಕಂಟೆಂಟ್ ಗಳನ್ನ ವೀಕ್ಷಣೆ ಮಾಡಬೇಕು ಎಂದು ನಿರ್ಧಾರ ಮಾಡಬಹುದು. ಮೂರು ಹಂತಗಳ ನಿರ್ಬಂಧದ ಮೂಲಕ ಮಕ್ಕಳು ಯಾವೆಲ್ಲಾ ವಯಸ್ಸಿಗೆ ಏನೆಲ್ಲಾ ನೋಡಬಹುದು ಎಂದು ಪೋಷಕರು ನಿರ್ಧರಿಸಬಹುದು. ಮೊದಲಿಗೆ ಬೇಟಾ ವರ್ಶನ್ನಲ್ಲಿ ಈ ಮೋಡ್ ಲಾಂಚ್ ಆಗಲಿದ್ದು, ಬರುವ ದಿನಗಳಲ್ಲಿ ಪೂರ್ಣ ವರ್ಶನ್ ಲಾಂಚ್ ಮಾಡುವ ಚಿಂತನೆಯಲ್ಲಿದೆ ಯೂಟ್ಯೂಬ್. ಕಂಟೆಂಟ್ ಫಿಲ್ಟರ್ ಮೂಲಕ ಮಕ್ಕಳು ಪ್ರಾಪ್ತ ಕಂಟೆಂಟ್ ಗಳನ್ನು ತಮ್ಮ ವಯಸ್ಸಿಗೆ ಅನುಗುಣವಾಗಿ ನೋಡಬಹುದಾಗಿದೆ.








