ಪುನೀತ್ ಒಪ್ಪಿಕೊಂಡಿದ್ದ ಚಿತ್ರಕ್ಕೆ ಯುವ ರಾಜ್ ಕುಮಾರ್ ನಾಯಕ

1 min read

ಪುನೀತ್ ಒಪ್ಪಿಕೊಂಡಿದ್ದ ಚಿತ್ರಕ್ಕೆ ಯುವ ರಾಜ್ ಕುಮಾರ್ ನಾಯಕ

ನಟ ಪುನೀತ್​ ರಾಜ್​ಕುಮಾರ್ ಅವರ ನಟನೆಗೆ ಸರಿಸಾಟಿ ಆಗಬಲ್ಲಂತಹ ಬೇರೊಬ್ಬ ನಟನನ್ನ ಹುಡುಕುವುದು ಕಷ್ಟ. ಚಿತ್ರರಂಗದಲ್ಲಿ ಇನ್ನೂ ಅನೇಕ ವರ್ಷಗಳ ಕಾಲ ನಟಿಸಬೇಕಿದ್ದ ಅವರು ನಮ್ಮನ್ನಲ್ಲಾ ಬೇಗನೇ  ಬಿಟ್ಟು ಹೊರಟರು. ಪುನೀತ್​ ರಾಜ್​ಕುಮಾರ್ ಅವರು ಹೃದಯಾಘಾತದಿಂದ ನಿಧನರಾದ ಬಳಿಕ  ಹಲವು ಸಿನಿಮಾಗಳು ಮಾತುಕಥೆಯ ಹಂತದಲ್ಲಿ. ಅನೇಕ ಪ್ರಾಜೆಕ್ಟ್​​ಗಳು ಅರ್ಧಕ್ಕೆ ನಿಂತಿವೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ. ನಿರ್ದೇಶಕ ಸಂತೋಷ್​ ಆನಂದ್​ ರಾಮ್​  ಜೊತೆ ಪುನೀತ್​ ರಾಜ್​ಕುಮಾರ್​ ಅವರು ಇನ್ನೊಂದು ಹೊಸ ಸಿನಿಮಾ ಮಾಡಬೇಕಿತ್ತು. ಆದರೆ ಆ ಸಿನಿಮಾ ಸೆಟ್ಟೇರುವುದಕ್ಕೂ ಮುನ್ನವೇ ಅವರು ಇಹಲೋಕ ತ್ಯಜಿಸಿದರು. ಅಪ್ಪು ಮಾಡಬೇಕಿದ್ದ ಆ ಸಿನಿಮಾ ಬಗ್ಗೆ ಈಗ ಹೊಸ ಮಾಹಿತಿ ಹರಿದಾಡುತ್ತಿದೆ.

ಅಪ್ಪು ಮಾಡಬೇಕಿದ್ದ  ಅದೇ ಕಥೆಯನ್ನು ಇಟ್ಟುಕೊಂಡು ಯುವ ರಾಜ್​ಕುಮಾರ್​  ಅವರಿಗೆ ಸಂತೋಷ್​ ಆನಂದ್​ ರಾಮ್​ ನಿರ್ದೇಶನ ಮಾಡುತ್ತಾರೆ ಎನ್ನಲಾಗುತ್ತಿದೆ.  ಆದರೆ ಈ ಬಗ್ಗೆ ಚಿತ್ರತಂಡದ ಕಡೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಪುನೀತ್​ ರಾಜ್​ಕುಮಾರ್​ ಅವರಿಗಾಗಿ ಸಿದ್ಧಪಡಿಸಿದ್ದ ಕಥೆಯನ್ನು ಸ್ವಲ್ಪ ಬದಲಾವಣೆ ಮಾಡಿ, ಆ ಚಿತ್ರಕ್ಕೆ ಯುವ ರಾಜ್​ಕುಮಾರ್​ ಅವರನ್ನು ಹೀರೋ ಆಗಿಸುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ. ರಾಘವೇಂದ್ರ ರಾಜ್​ಕುಮಾರ್​ ಅವರ ಎರಡನೇ ಪುತ್ರನಾದ ಯುವ ರಾಜ್​ಕುಮಾರ್​ ಅವರು ಈ ಸಿನಿಮಾದಲ್ಲಿ ನಟಿಸಿದರೆ ಸೂಕ್ತ ಎಂಬ ಅಭಿಪ್ರಾಯ ಅಪ್ಪು ಅಭಿಮಾನಿಗಳ ವಲಯದಲ್ಲೂ ಕೇಳಿಬಂದಿದೆ. ಹಾಗಾಗಿ ಈ ಸಿನಿಮಾ ಸೆಟ್ಟೇರುವ ಸಾಧ್ಯತೆ ದಟ್ಟವಾಗಿದೆ. ಆ ಚಿತ್ರವನ್ನು ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ ನಿರ್ಮಾಣ ಮಾಡಲಿದೆ ಎನ್ನಲಾಗುತ್ತಿದೆ.

ಈ ಕುರಿತಂತೆ ಸಂತೋಷ್​ ಆನಂದ್​ ರಾಮ್​ ಅವರಾಗಲಿ, ಯುವ ರಾಜ್​ಕುಮಾರ್​ ಅವರಾಗಲಿ ಅಥವಾ ಹೊಂಬಾಳೆ ಫಿಲ್ಮ್ಸ್​ ಸಂಸ್ಥೆಯವರಾಗಲಿ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಸದ್ಯಕ್ಕಂತೂ ಇದು ಗಾಂಧಿನಗರದ ಗುಸುಗುಸು ಸುದ್ದಿ ಮಾತ್ರ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd