Yuvarajkumar-ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ಕೊನೆಯದಾಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಇತ್ತಿಚಿಗೆ ರಿಲೀಸ್ ಆಗಿದೆ. ಹೌದು ‘ಗಂಧದ ಗುಡಿ’ ಸಿನಿಮಾವನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ. ಬಿಡುಗಡೆಯಾದ ಎಲ್ಲಾ ಚಿತ್ರ ಮಂದಿರದಲ್ಲೂ ಸಿನಿಮಾ ಹೌಸ್ಫುಲ್ ಪ್ರದರ್ಶನವಾಗುತ್ತಿದ್ದೆ.
ಬೆಂಗಳೂರಿನ ಸಿದ್ದೇಶ್ ಚಿತ್ರಮಂದಿರದಲ್ಲಿ ‘ಗಂಧದ ಗುಡಿ’ ಪ್ರದರ್ಶನ ಕಾಣುತ್ತಿದೆ. ಈ ಸಂದರ್ಬದಲ್ಲಿ ಅಭಿಮಾನಿಗಳು ಸ್ಕ್ರೀನ್ ಮೇಲೆ ವಿಶೇಷ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಯುವರಾಜ್ ಕುಮಾರ್ನಿಗೆ ಜೂ.ಪವರ್ಸ್ಟಾರ್ ಪಟ್ಟ ಕೊಟ್ಟು ಸಂಭ್ರಮಿಸಿದ್ದಾರೆ.
ಕೆಲವರು ‘ಗಂಧದ ಗುಡಿ’ ನೋಡಿ ಭಾವುಕರಾದರೆ ಇನ್ನೂ ಕೆಲವರು ಪುನೀತ್ ರಾಜ್ಕುಮಾರ್ ಅವರನ್ನು ಕೊನೆಯದಾಗಿ ತೆರೆಮೇಲೆ ನೋಡಿ ಸಂಭ್ರಮಿಸುತ್ತಿದ್ದಾರೆ. ಈ ಹೋಸ ಪ್ರಯತ್ನಕ್ಕೆ ಅಪ್ಪು ಅಭಿಮಾನಿಗಳು ಸಿನಿಮಾ ಮಂದಿರಲ್ಲಿ ಕುಣಿದು ಕುಪ್ಪಳಿಸುತ್ತಿರುವ ವಿಶೇಷವಾದ ವಿಡಿಯೋವೊಂದನ್ನು ಅಭಿಮಾನಿಗಳು ಸಿನಿಮಾದ ಕೊನೆಯಲ್ಲಿ ಬಿಡುಗಡೆ ಮಾಡಿದ್ದು. ‘ಯುವ ರಣಧೀರ ಕಂಠೀರವ’ ಸಿನಿಮಾದ ಟ್ರೈಲರ್ ಪ್ರದರ್ಶನ ಮಾಡಿ ಟ್ರೈಲರ್ ಕೊನೆಯಲ್ಲಿ ಹೊಸ ಟೈಟಲ್ ನೀಡಲಾಗಿದೆ.
ಈ ಟ್ರೈಲರ್ ಅನ್ನು ಅಪ್ಪು ಅಭಿಮಾನಿ ಸೂರ್ಯ ಎಸ್ಎನ್ ಎಂಬುವವರು ಕ್ರಿಯೇಟ್ ಮಾಡಿದ್ದು . ಇದನ್ನು ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡಲಾಗಿದೆ . ಇದರಲ್ಲಿ ಯುವರಾಜ್ಕುಮಾರ್ಗೆ ಅಭಿಮಾನಿಗಳು ಜೂನಿಯರ್ ಪವರ್ಸ್ಟಾರ್ ಆದಷ್ಟು ಬೇಗ ಬರುತ್ತಾರೆಂದು ಹೇಳಿ ಸಂಭ್ರಮಿಸಿದ್ದಾರೆ. ಅಲ್ಲದೆ, ಪವರ್ಸ್ಟಾರ್ ಪರಂಪರೆ ಮುಂದುವರೆಯುತ್ತೆ ಎಂದಿದ್ದಾರೆ.
ಪವರ್ಸ್ಟಾರ್ ಅಭಿಮಾನಿಗಳ ಬೇಡಿಕೆಯಿಂದ ಅಪ್ಪು ನಟಿಸಬೇಕಿದ್ದ ಸಿನಿಮಾದಲ್ಲಿ ಯುವರಾಜ್ಕುಮಾರ್ ನಟಿಸಬೇಕು ಎಂದು ಹಠ ಹಿಡಿದಿದ್ದರು. ಈ ಚಿತ್ರಕ್ಕೆ ಸಂತೋಷ್ ಆನಂದ್ರಾಮ್ ನಿರ್ದೇಶಿಸುತ್ತಿದ್ದು ಅಪ್ಪು ಜಾಗದಲ್ಲಿ ಯುವರಾಜಕುಮಾರ ನಟಿಸುತ್ತಿದ್ದಾರೆ. ಯುವರಾಜ್ಕುಮಾರ್ರನ್ನು ತೆರೆಮೇಲೆ ಪರಿಚಯಿಸೋಕೆ ಹೊಂಬಾಳೆ ಫಿಲ್ಮ್ಸ್ ಮುಂದಾಗಿದೆ. ಸ್ಯಾಂಡಲ್ವುಡ್ ನಲ್ಲಿ ಯುವ ಅವರ ಎಂಟ್ರಿ ಹೇಗಿರುತ್ತೆ ಅನ್ನೋದನ್ನು ಕಣ್ತುಂಬಿಕೊಳ್ಳಲು ಅಪ್ಪು ಫ್ಯಾನ್ಸ್ ಕಾದು ಕೂತಿದ್ದಾರೆ. ಆದರೆ, ಸದ್ಯಕ್ಕೆ ಏನೂ ಅಪ್ಡೇಟ್ ಇಲ್ಲ.