ಹೇಗಿದೆ ಗೊತ್ತಾ ಯುವರತ್ನ ಟ್ರೈಲರ್..? ಸಿನಿಮಾ ಕಥೆ ಇದೆನಾ..?
ಫಸ್ಟ್ ಬೆಂಚ್ ನಲ್ಲಿ ಕುಂತ್ರೆ ಬರಿ ಗೋಲ್ ಕಾಣುತ್ತೆ.. ಲಾಸ್ಟ್ ಬೆಂಚ್ ಅಲ್ಲಿ ಕುಂತ್ರೆ ಇಡೀ ವಲ್ರ್ಡೇ ಕಾಣುತ್ತೆ. ಬ್ಯಾಕ್ ಟು ಬ್ಯಾಕ್ ಪಂಚ್ ಡೈಲಾಗ್ ಗಳು. ಸೂಪರ್ ಎನಿಸೋ ದೃಶ್ಯಗಳು ಆಕ್ಷನ್ ಸೀನ್ ಗಳು. ಒಂದು ಕಡೆ ಸೀರಿಯನ್ ಕಥೆ.. ಇನ್ನೊಂದು ಕಡೆ ಪವರ್ ಸ್ಟಾರ್ ಖಡಕ್ ಡೈಲಾಗ್ಸ್. ವ್ಹಾವ್ ಎನಿಸೋ ಮ್ಯೂಸಿಕ್. ಒಟ್ಟಾರೆ ಒಂದು ಬ್ಲಾಕ್ ಬ್ಲಸ್ಟರ್ ಸಿನಿಮಾಗೆ ಬೇಕಿರೋ ಎಲ್ಲಾ ಎಲಿಮೆಂಟ್ಸ್ ಗಳು ಯುವರತ್ನ ಸಿನಿಮಾದ ಟ್ರೈಲರ್ ನಲ್ಲಿ ಕಾಣ್ತಿದೆ.
ಹೌದು..! ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಯುಟ್ಯೂಬ್ ನಲ್ಲಿ ದರ್ಬಾರ್ ನಡೆಸುತ್ತಿದೆ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಒಂದು ಮಿಲಿಯನ್ ವೀವ್ಸ್ ಪಡೆದ ಟ್ರೈಲರ್ ಈಗ ನಾಲ್ಕು ಮಿಲಿಯನ್ ಗೂ ಹೆಚ್ಚು ವೀವ್ಸ್ ಪಡೆದು ಸಾಗುತ್ತಿದೆ. ಒಟ್ಟಾರೆ ಯುವರತ್ನ ಟ್ರೈಲರ್ ಸೂಪರ್ ಹಿಟ್ ಆಗಿದೆ.
ಇನ್ನ ಟ್ರೈಲರ್ ನಲ್ಲಿ ಏನಿದೆ ಅನ್ನೋ ವಿಚಾರಕ್ಕೆ ಬಂದ್ರೆ ಟ್ರೈಲರ್ ಶುರುವಾಗುತ್ತಿದ್ದಂತೆ ಪ್ರಕಾಶ್ ರಾಜ್ ಅವರ ಕಂಚಿನ ಧ್ವನಿ ಕೇಳಿಬರುತ್ತೆ. ಶಿಕ್ಷಣದ ಖಾಸಗೀಕರಣದ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾ, ಈಗಿನ ಎಜುಕೇಷನ್ ಸಿಸ್ಟಂ ಬಗ್ಗೆ ಬೇಸರಗೊಂಡಿರುವ ಒಬ್ಬ ಉತ್ತಮ ಮೌಲ್ಯಗಳುಳ್ಳ ಪ್ರಾಂಶುಪಾಲರ ಪಾತ್ರದಲ್ಲಿ ಪ್ರಕಾಶ್ ರಾಜ್ ಕಾಣಿಸಿಕೊಂಡಿದ್ದಾರೆ. ಹೀಗೆ ಸಾಗುಷ್ಟರಲ್ಲೇ ಇವ್ರಿಗ್ ಕೊಟ್ಟಿರೋ ಸ್ಟಾರ್ ಡ್ಯೂಟಿಲಿರೋವರ್ಗೂ, ಇವ್ರು ನಮಿಗ್ ಕೊಟ್ಟಿರೋ ಸ್ಟಾರ್ ನಾವಿರೋವರ್ಗೂ ಎನ್ನುತ್ತಾ ಪವರ್ ಸ್ಟಾರ್ ಎಂಟ್ರಿ ಕೊಡ್ತಾರೆ. ಇದಾದ ಬಳಿಕ ಟ್ರೈಲರ್ ಫುಲ್ ಅಂಡ್ ಫುಲ್ ಪವರ್ ಸ್ಟಾರ್ ಮಯವಾಗಿದೆ. ಸ್ಟ್ರೈಟ್ ಪಾರ್ವಡ್ ಪಂಚ್ ಡೈಲಾಗ್ ಗಳು. ಡೋಂಟ್ ಕೇರ್ ಆಟಿಟ್ಯೂಡ್ ನಲ್ಲಿ ಅಪ್ಪು ಅಪೀರಿಯನ್ಸ್ ಅಭಿಮಾನಿಗಳಿಗೆ ಹುಚ್ಚಿಡಿಸುತ್ತೆ. ಮುಖ್ಯವಾಗಿ ಬಿಜಿಎಂ ಕಿವಿಗೆ ನಾಟಿಬಿಡುತ್ತೆ.
ಕಥೆ ಏನಿರಬಹುದು..?
ಸದ್ಯ ರಿಲೀಸ್ ಆಗಿರುವ ಟ್ರೈಲರನ್ನ ಬೇಸ್ ಆಗಿ ಇಟ್ಕೊಂಡು ಕಥೆ ಏನಿರಬಹುದು ಅಂತಾ ನೋಡೋದಾದ್ರೆ, ಯುವರತ್ನ ಮತ್ತೊಂದು ರಾಜಕುಮಾರ ಆಗುವುದರಲ್ಲಿ ಡೌಟೇ ಇಲ್ಲ. ಯಾಕೆಂದ್ರೆ ರಾಜಕುಮಾರ ಸಿನಿಮಾದಂತೆ ಇದು ಕೂಡ ಕಂಟೆಂಟ್ ಬೇಸ್ಡ್ ಸಿನಿಮಾ ಅನ್ನೋದು ಗೊತ್ತಾಗುತ್ತಿದೆ. ಹಾಗಾದ್ರೆ ಕಥೆ ಏನಾಗಿರಬಹುದು ಅಂದ್ರೆ, ಶಿಕ್ಷಣ ಅನ್ನೋದು ಸೇವೆ ಆಗಿರಬೇಕು. ಅದು ವ್ಯಾಪಾರ ಆಗಿರ್ಬಾದು ಅನ್ನೋ ಎಳೆಯನ್ನ ತಗೊಂಡು ಸಂತೋಷ್ ಆನಂದ್ ರಾಮ್ ಅವರು ಕಥೆ ಬರೆದಿದ್ದಾರೆ. ಶಿಕ್ಷಣ ಸಂಸ್ಥೆಗಳು ಬಂಡವಾಳಶಾಯಿಗಳ ಕೈ ಸೇರಿದ್ರೆ ಏನಾಗುತ್ತೆ..? ಕಾಲೇಜಿನ ಹುಡುಗರು ಹೇಗೆ ದಾರಿತಪ್ಪುತ್ತಿದ್ದಾರೆ..? ಇದನ್ನ ಸರಿಪಡಿಸೋದು ಯಾರ ಕೈಯಲ್ಲಿದೆ..? ಅನ್ನೋ ಸೀರಿಯಸ್ ಕಥೆಯನ್ನ ಪುನೀತ್ ರಾಜ್ ಕುಮಾರ್ ಅವರ ಕೈಯಲ್ಲಿ ಹೇಳಿಸೋಕೆ ಹೊರಟಿದ್ದಾರೆ ನಿರ್ದೇಶಕರು.
ಇನ್ನ ಸಿನಿಮಾದಲ್ಲಿ ಅಪ್ಪು ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ತಾರೆ. ಒಂದು ಪ್ರಕಾಶ್ ರಾಜ್ ಅವರ ಶಿಷ್ಯನಾಗಿ, ಅಂದ್ರೆ ಸ್ಟೂಡೆಂಟ್ ಆಗಿ. ಇನ್ನೊಂದು ವಿಲನ್ ಗಳ ಪಾಲಿಗೆ ವಿಲನ್ನಾಗಿ ಖಡಕ್ ಆಫಿಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಒಟ್ಟಾರೆ ಯುವರತ್ನ ಸಿನಿಮಾ ಎಲ್ಲಾ ಸಿನಿಮಾಗಳಂತೆ ಅಲ್ಲ.. ಇದು ಪುನೀತ್ ರಾಜ್ ಕುಮಾರ್ ಅವರಂತೆ ಡಿಫರೆಂಟು..