Yuvraj singh | ಯುವಿ 6 ಸಿಕ್ಸರ್ಗೆ ಇಂದಿಗೆ 15 ವರ್ಷ!
ಒಂದೇ ಓವರ್ ನಲ್ಲಿ ಆರು ಸಿಕ್ಸರ್ಸ್
ಇಂಗ್ಲೆಂಡ್ ವಿರುದ್ಧ ಆರ್ಭಟಿಸಿದ್ದ ಯುವಿ
ಸ್ಟುವರ್ಟ್ ಬ್ರಾಡ್ ಬೌಲಿಂಗ್ ನಲ್ಲಿ ದಾಖಲೆ
12 ಎಸೆತಗಳಲ್ಲಿ ಅರ್ಧಶಕತ ಸಿಡಿಸಿದ್ದ ಕಿಂಗ್
ದಕ್ಷಿಣ ಆಫ್ರಿಕಾದ ಡರ್ಬನ್ ನಲ್ಲಿ ನಡೆದಿದ್ದ ಪಂದ್ಯ
ಟೀಂ ಇಂಡಿಯಾದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಟಿ 20 ಕ್ರಿಕೆಟ್ ನಲ್ಲಿ ಆರು ಎಸೆತಗಳಲ್ಲಿ ಆರು ಸಿಕ್ಸರ್ ಗಳನ್ನು ಸಿಡಿಸಿ ಇಂದಿಗೆ ಬರೋಬ್ಬರಿ 15 ವರ್ಷಗಳು ಕಳೆದಿವೆ.
2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಚೊಚ್ಚಲ ಟಿ 20 ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಅಬ್ಬರಿಸಿ ಬೊಬ್ಬರಿದಿದ್ದರು.
![Yuvraj Singh](http://saakshatv.com/wp-content/uploads/2022/09/yuvi.jpg)
ಅದರಲ್ಲೂ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವಿಶ್ವರೂಪ ತೋರಿಸಿದ್ದ ಯುವಿ ಸ್ಟುವರ್ಟ್ ಬ್ರಾಡ್ ಬೌಲಿಂಗ್ ನಲ್ಲಿ ಆರು ಎಸೆತಗಳಲ್ಲಿ ಆರು ಸಿಕ್ಸರ್ ಗಳನ್ನು ಸಿಡಿಸಿದ್ದರು.
ಆ ಮೂಲಕ ಟಿ 20 ಕ್ರಿಕೆಟ್ ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದರು. ಅದಷ್ಟೆ ಅಲ್ಲದೇ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ದಾಖಲೆಯಲ್ಲೂ ಬರೆದಿದ್ದರು.
ಈ ಪಂದ್ಯವು ದಕ್ಷಿಣ ಆಫ್ರಿಕಾದ ಡರ್ಬನ್ ನಲ್ಲಿ ನಡೆದಿದ್ದು, ಯುವ ದರ್ಬಾರ್ ಗೆ ಇಂಗ್ಲೆಂಡ್ ಧೂಳಿಪಟವಾಗಿತ್ತು.